'ಆ ಭಾರತೀಯ ಬೌಲರ್‌ನ ಕೆರಿಯರ್ ಅಂತ್ಯವಾಯ್ತು ಅಂದುಕೊಂಡಿದ್ದೆ' : ಮೆಕ್‌ಗ್ರಾಥ್

ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಗ್ಲೆನ್ ಮೆಕ್‌ಗ್ರಾಥ್ ಟೀಮ್ ಇಂಡಿಯಾದ ಬೌಲರ್ ಬಗ್ಗೆ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ಟೀಮ್ ಇಂಡಿಯಾದಲ್ಲಿ ಸದ್ಯ ಮಿಂಚುತ್ತಿರುವ ಈ ಆಟಗಾರ ತಂಡಕ್ಕೆ ಮತ್ತೆ ವಾಪಾಸ್ಸಾಗುವ ಸಾಧ್ಯತೆಯೇ ಇಲ್ಲ ಅಂದುಕೊಂಡಿದ್ದೆ ಎಂದಿದ್ದಾರೆ.
ನ್ಯೂಜಿಲೆಂಡ್ ವಿರುದ್ದದ ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾದ ಬೌಲರ್‌ಗಳು ವಿಕೆಟ್ ಪಡೆಯಲು ತಿಣುಕಾಡುತ್ತಿದ್ದರೆ ಈತ ಮಾತ್ರ ಟೀಮ್ ಇಂಡಿಯಾಕ್ಕೆ ಆಸರೆಯಾಗಿದ್ದ. ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ನ ಐದು ವಿಕೆಟ್ ಕಿತ್ತು ನ್ಯೂಜಿಲೆಂಡ್ ಪಾಲಿಗೆ ಕಂಟಕನಾಗಿದ್ದ.
ಟೀಮ್ ಇಂಡಿಯಾ ಬೌಲರ್‌ನ ಈ ಪ್ರದರ್ಶನ ಆಸಿಸ್ ದಿಗ್ಗಜನ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಮೆಕ್‌ಗ್ರಾಥ್ ಅದ್ಭುತ ಮಾತುಗಳನ್ನಾಡಿದ್ದಾರೆ.

ಮೆಕ್‌ಗ್ರಾಥ್ ಪ್ರಶಂಸೆ ವ್ಯಕ್ತಪಡಿಸಿದ ಬೌಲರ್ ಯಾರು?
ಗ್ಲೆನ್ ಮೆಕ್‌ಗ್ರಾಥ್ ಈ ಹೇಳಿಯನ್ನು ನೀಡಿರುವುದು ಬೇರೆ ಯಾರ ಬಗ್ಗೆಯೂ ಅಲ್ಲ. ನ್ಯೂಜಿಲೆಂಡ್ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಿತ್ತು ಮಿಂಚಿದ ಇಶಾಂತ್ ಶರ್ಮಾ ಬಗ್ಗೆ. ಟೆಸ್ಟ್‌ನಲ್ಲಿ ಇಶಾಂತ್ ಶರ್ಮಾ ಇತ್ತೀಚೆಗೆ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದು ಈ ವಿಚಾರವಾಗಿ ಮೆಕ್‌ಗ್ರಾಥ್ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಕೀವಿಸ್ ವಿರುದ್ಧ ಅದ್ಭುತ ಪ್ರದರ್ಶನ
ನ್ಯೂಜಿಲೆಂಡ್ ತಂಡದ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಬೌಲರ್‌ಗಳು ನ್ಯೂಜಿಲೆಂಡ್ ಆಟಗಾರರ ವಿಕೆಟ್ ಪಡೆಯಲು ತಿಣುಕಾಡುತ್ತಿದ್ದರು. ಆದರೆ ಇಂತಾ ಸಂದರ್ಭದಲ್ಲೂ ಇಶಾಂತ್ ಶರ್ಮಾ ನ್ಯೂಜಿಲೆಂಡ್‌ನ 5 ವಿಕೆಟ್ ಕಿತ್ತು ಮಿಂಚಿದ್ದರು.

ಗ್ರೇಟ್ ಕಮ್‌ಬ್ಯಾಕ್ ಮಾಡಿದ ಇಶಾಂತ್
ಇಶಾಂತ್ ಶರ್ಮಾ ಸಾಕಷ್ಟು ಅನುಭವ ಇರುವ ಆಟಗಾರ. ಕಳೆದೆರಡು ವರ್ಷಗಳಲ್ಲಿ ಆತ ವಾಪಾಸ್ಸಾದ ರೀತಿ ನಿಜಕ್ಕೂ ಅಮೋಘವಾದದ್ದು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆತ ಮತ್ತೆ ತಂಡಕ್ಕೆ ವಾಪಾಸ್ಸಾಗುವುದಿಲ್ಲ ಎಂದುಕೊಂಡುದ್ದೆ. ಆದರೆ ಅದನ್ನು ಮೀರಿ ಅದ್ಭುತ ಪ್ರದರ್ಶನದೊಂದಿಗೆ ಭಾರತ ತಂಡಕ್ಕೆ ದೊಡ್ಡ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದು ಮೆಕ್‌ಗ್ರಾಥ್ ಇಶಾಂತ್ ಶರ್ಮ ಬಗ್ಗೆ ಹೇಳಿದ್ದಾರೆ.

ಎರಡು ವರ್ಷದ ಹಿಂದೆ
ಸದ್ಯ ಟೀಮ್ ಇಂಡಿಯಾದಲ್ಲಿ ಮಿಂಚುತ್ತಿರುವ ಇಶಾಂತ್ ಶರ್ಮಾ ಎರಡು ವರ್ಷದ ಹಿಂದೆ ಕಠಿಣ ಪರಿಸ್ಥಿತಿಯನ್ನು ಅನುಭವಿಸಿದ್ದರು. ವಿಕೆಟ್ ಪಡೆಯಲು ಪರದಾಡುತ್ತಿದ್ದರು. ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನೂ ಕಳೆದುಕೊಂಡಿದ್ದರು. ಆದರೆ ಮತ್ತೆ ಟೆಸ್ಟ್ ತಂಡಕ್ಕೆ ಮರಳಿ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ.

ವೇಗದ ಬೌಲಿಂಗ್ ವಿಭಾಗದಲ್ಲಿ ಸಕಾರಾತ್ಮಕ ಪೈಪೋಟಿ
ಸ್ಪಿನ್ ಬೌಲಿಂಗ್ ನೆಚ್ಚಿಕೊಂಡಿದ್ದ ಭಾರತ ತಂಡದಲ್ಲಿ ಕಳೆದೆರೆಡು ವರ್ಷದಲ್ಲಿ ಭಾರೀ ಬದಲಾವಣೆಯಾಗಿದೆ. ಅದು ವೇಗಿಗಳು ಮಿಂಚುಹರಿಸುತ್ತಿರುವುದು. ಮೊಹಮದ್ ಶಮಿ. ಜಸ್ಪ್ರೀತ್ ಬೂಮ್ರಾ ಉಮೇಸ್ ಯಾದವ್‌ರಂತಾ ವೇಗಿಗಳು ಪ್ರಚಂಡ ಪ್ರದರ್ಶನವನ್ನು ನೀಡುತ್ತಿದ್ದಾರೆ. ಇಂತಾ ಯುವ ವೇಗಗಳಿಗೆ ಇಶಾಂತ್ ಪೈಪೋಟಿ ನೀಡಿ ತಂಡದಲ್ಲಿ ಮತ್ತೆ ಸ್ಥಾನವನ್ನು ಗಳಿಸಲು ಸಫಲರಾಗಿದ್ದಾರೆ.

ಮೊದಲ ಟೆಸ್ಟ್‌ನಲ್ಲಿ ಮಂಕಾದ ಶಮಿ ಬೂಮ್ರಾ
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ವೇಗಿದ ಬೌಲರ್‌ಗಳಾದ ಮೊಹಮದ್ ಶಮಿ ಮತ್ತು ಜಸ್ಪ್ರೀತ್ ಬೂಮ್ರಾ ಮಂಕಾಗಿದ್ದರು. ಅದರಲ್ಲೂ ಜಸ್ಪ್ರೀತ್ ಬೂಮ್ರಾ ತಮ್ಮ ಕೆಟ್ಟ ಫಾರ್ಮ್‌ನಲ್ಲಿದ್ದಾರೆ. ಏಕದಿನದ ಬಳಿಕ ಟೆಸ್ಟ್‌ನಲ್ಲೂ ಈ ಕಳಪೆ ಪ್ರದರ್ಶನ ಮುಂದುವರಿಸಿದೆ.

ವೇಗಿಗಳನ್ನು ಹೊಗಳಿದ ಆಸಿಸ್ ದಿಗ್ಗಜ
ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ಇನ್ನಿಬ್ಬರು ಪ್ರಮುಖ ಬೌಲರ್‌ಗಳಾದ ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬೂಮ್ರಾ ಬಗ್ಗೆಯೂ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಮೊಹಮ್ಮದ್ ಶಮಿ ಉತ್ತಮ ವೇಗವನ್ನು ಹೊಂದಿದ್ದು ವೇಗದಲ್ಲಿನ ಬದಲಾವಣೆ ಎದುರಾಳಿಯನ್ನು ಕಂಗೆಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದಿದ್ದಾರೆ. ಇನ್ನು ಬೂಮ್ರಾ ಬೌಲಿಂಗ್ ಬಗ್ಗೆಯೂ ಆಸ್ಟ್ರೇಲಿಯಾದ ಮಾಜಿ ವೇಗಿ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications