For Quick Alerts
ALLOW NOTIFICATIONS  
For Daily Alerts
 

IPL 2025: ಆರ್‌ಸಿಬಿ vs ಡಿಸಿ ಪಂದ್ಯದಲ್ಲಿ ಹೆಚ್ಚು ರನ್ ಗಳಿಸಬಲ್ಲ 3 ಬ್ಯಾಟರ್ಸ್

ಐಪಿಎಲ್ 2025 ರಲ್ಲಿ ಗುರುವಾರ ಬಲಿಷ್ಠ ತಂಡಗಳ ನಡುವೆ ರೋಚಕ ಪಂದ್ಯ ನಡೆಯಲಿದೆ. ಉಭಯ ತಂಡಗಳು ಇಲ್ಲಿವರೆಗೆ ಒಮ್ಮೆಯೂ ಪ್ರಶಸ್ತಿಯನ್ನು ಗೆದ್ದಿಲ್ಲ. ಹೌದು, ಐಪಿಎಲ್ 2025 ರ 24ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಲಿದೆ. ಡೆಲ್ಲಿ ತಂಡ ಸತತ ಮೂರು ಗೆಲುವುಗಳನ್ನು ದಾಖಲಿಸಿದ್ದು, ಇದುವರೆಗೆ ಒಂದೇ ಒಂದು ಸೋಲನ್ನು ಎದುರಿಸಿಲ್ಲ. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಮೂರು ಪಂದ್ಯಗಳ ಗೆದ್ದಿದೆ. ಆದರೆ ಒಂದು ಪಂದ್ಯವನ್ನು ಸೋತಿದೆ.

ಆರ್‍‌ಸಿಬಿ ಮತ್ತು ಡಿಸಿ ಎರಡೂ ತಂಡಗಳು ಐಪಿಎಲ್ 2025 ರಲ್ಲಿ ಉತ್ತಮ ಪ್ರದರ್ಶನ ನೀಡುತ್ತಿವೆ. ಇದಕ್ಕೆ ಉಭಯ ತಂಡಗಳಲ್ಲಿರುವ ಸ್ಟಾರ್ ಬ್ಯಾಟರ್ಸ್. ಈ ಸ್ಟಾರ್ ಬ್ಯಾಟರ್ಸ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಅಭಿಮಾನಿಗಳು ಸಾಕಷ್ಟು ಬೌಂಡರಿ ಮತ್ತು ಸಿಕ್ಸರ್ ಗಳನ್ನು ನೋಡಬಹುದು. ಇಂದಿನ ಆರ್‍‌ಸಿಬಿ ಮತ್ತು ಡಿಸಿ ಪಂದ್ಯದಲ್ಲಿ ಹೆಚ್ಚು ರನ್ ಗಳಿಸಬಲ್ಲ ಮೂವರು ಬ್ಯಾಟರ್ಸ್ ಬಗ್ಗೆ ಇಲ್ಲಿದೆ ಮಾಹಿತಿ.

Three batsmen who can score the most runs in the IPL 2025L RCB vs DC match

ಕೆಎಲ್ ರಾಹುಲ್

ಸ್ಟಾರ್ ವಿಕೆಟ್‌ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಇಂದು ತಮ್ಮ ಮಾಜಿ ತವರಿನ ತಂಡದ ವಿರುದ್ಧ ಆಡಲಿದ್ದು, ಆಡಿ ಬೆಳೆದ ಮೈದಾನದಲ್ಲಿ ಅಬ್ಬರಿಸುವ ನಿರೀಕ್ಷೆಯಿದೆ. ರಾಹುಲ್ ಅವರಿಗೆ ಎಂ ಚಿನ್ನಸ್ವಾಮಿ ಸ್ಟೇಡಿಯಂ ಪಿಚ್ ಪರಿಸ್ಥಿತಿಗಳ ಬಗ್ಗೆ ಚೆನ್ನಾಗಿ ತಿಳಿದಿದೆ. ಅವರ ಇತ್ತೀಚಿನ ಫಾರ್ಮ್ ಕೂಡ ಉತ್ತಮವಾಗಿದೆ. ಚೆನ್ನೈ ಸೂಪರ್ ಕಿಂಗ್‌ ವಿರುದ್ಧದ ಕಳೆದ ಪಂದ್ಯದಲ್ಲಿ ರಾಹುಲ್ 77 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಈಗ ಆರ್‍‌ಸಿಬಿ ವಿರುದ್ಧೂ ಬಿರುಸಿನ ಬ್ಯಾಟಿಂಗ್ ಮೂಲಕ ಹೆಚ್ಚು ರನ್ ಗಳಿಸುವ ಸಾಧ್ಯತೆಯಿದೆ.

ವಿರಾಟ್ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಐಪಿಎಲ್ 2025 ರಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ವಾಂಖೆಡೆ ಮೈದಾನದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆರಂಭದಿಂದಲೇ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ತೋರಿಸಿದರು. ಮುಂಬೈ ವೇಗಿ ಜಸ್ಪ್ರೀತ್ ಬುಮ್ರಾ ಅವರ ಮೊದಲ ಓವರ್‍‌ನಲ್ಲಿ ಅವರು ಸಿಕ್ಸರ್ ಬಾರಿಸಿದ್ದು ಬಹಳಷ್ಟು ಸದ್ದು ಮಾಡಿತ್ತು. ಈ ಪಂದ್ಯದಲ್ಲಿ ಕೊಹ್ಲಿ 67 ರನ್‌ಗಳ ಇನ್ನಿಂಗ್ಸ್ ಆಡಿದರು. ಈಗ ಡೆಲ್ಲಿ ವಿರುದ್ಧವೂ ಅವರ ಅಬ್ಬರ ಮುಂದುವರೆದರೆ ಹೆಚ್ಚು ರನ್ ಗಳಿಸಬಹುದು.

ರಜತ್ ಪಾಟಿದಾರ್

ರಾಯಲ್ ಚಾಲೆಂಜರ್ಸ್ ಬೆಂಗಳುರು ನಾಯಕ ರಜತ್ ಪಾಟಿದಾರ್ ಐಪಿಎಲ್ 2025 ರಲ್ಲಿ ಇಲ್ಲಿವರೆಗೆ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕೆಲವು ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಪಾಟಿದಾರ್ 64 ರನ್ ಗಳಿಸಿದ್ದರು. ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಚೆಪಾಕ್ ಮೈದಾನದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ಈಗ ಪಾಟಿದಾರ್ ತಮ್ಮ ತಂಡದ ತವರು ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರನ್‌ಗಳ ಮಳೆ ಸುರಿಸಬಹುದು.

Story first published: Thursday, April 10, 2025, 15:43 [IST]
Other articles published on Apr 10, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+