ಚಾಂಪಿಯನ್ಸ್ ಟ್ರೋಫಿ ಕೊನೆಯ ಹಂತಕ್ಕೆ ಬಂದು ನಿಂತಿದೆ. ಈ ಟೂರ್ನಿಯ ಫೈನಲ್‌ನಲ್ಲಿ ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ದುಬೈ ಅಂಗಳ ಆತಿಥ್ಯ ವಹಿಸಲಿದೆ. ಬುಧವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿರುವ ನ್ಯೂಜಿಲೆಂಡ್ ತಂಡ 50 ರನ್‌ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಇತಿಹಾಸ ನಿರ್ಮಿಸಿದೆ. ಈಗ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಬಲಿಷ್ಠ ತಂಡಗಳಾದ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಣ ಹೋರಾಟ ನಡೆಯಲಿದೆ.
ಲಾಹೋರ್‌ನಲ್ಲಿ ನಡೆದ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಪಂದ್ಯ ಇತಿಹಾಸದ ಪುಟದಲ್ಲಿ ಸ್ಥಾನ ಪಡೆದಿದೆ. ಹಾಗಿದ್ರೆ ಇತಿಹಾಸ ಪುಟಕ್ಕೆ ಎಂಟ್ರಿ ಪಡೆದಿದ್ದು ಏಕೆ ಎಂಬ ಬಗ್ಗೆ ವರದಿ ಇಲ್ಲಿದೆ.

ಒಂದು ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ನೀವು ಒಂದು ಶತಕ ದಾಖಲಾದ ಅದೆಷ್ಟೋ ಪಂದ್ಯಗಳನ್ನು ನೀವು ನೋಡಿರುತ್ತೀರಿ. ಅಥವಾ ಎರಡು ಶತಕ ಬಾರಿಸಿದ್ದನ್ನು ನೋಡಿರುತ್ತಿರಿ. ಎರಡೂ ತಂಡಗಳ ಪರ ಶತಕ ಸಾಧನೆ ಮಾಡಿದ ಪಂದ್ಯವನ್ನು ಸಹ ನೋಡಿರುತ್ತೀರಾ. ಆದರೆ ಒಂದೇ ಪಂದ್ಯದಲ್ಲಿ ಮೂರು ಶತಕ ಸಿಡಿಸಿದ ಪಂದ್ಯ ನೋಡಲು ಸಾಧ್ಯವೆ. ಎಸ್.. ಇಂತಹದೊಂದು ಪಂದ್ಯಕ್ಕೆ ಬುಧವಾರದ ಸೆಮಿಫೈನಲ್ ಪಂದ್ಯ ಸಾಕ್ಷಿಯಾಗಿತ್ತು.
ಬುಧವಾರ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಪರ ಬೆಂಗಳೂರು ಮೂಲದ ರಚಿನ್ ರವೀಂದ್ರ ಹಾಗೂ ಭರವಸೆಯ ಬ್ಯಾಟರ್ ಕೇನ್ ವಿಲಿಯಮ್ಸನ್ ಶತಕ ಸಿಡಿಸಿ ಅಬ್ಬರಿಸುತ್ತಾರೆ. ಇದಲ್ಲದೇ ದಕ್ಷಿಣ ಆಫ್ರಿಕಾ ತಂಡದ ಪರ ಡೇವಿಡ್ ಮಿಲ್ಲರ್ ಅಮೋಘ ಶತಕ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡುತ್ತಾರಾ. ಈ ಪಂದ್ಯ ಈಗ ಇತಿಹಾಸದ ಪುಟದಲ್ಲಿ ಸ್ಥಾನ ಪಡೆದಿದೆ.

ಈ ಪಂದ್ಯದಲ್ಲಿ ಸವಾಲಿನ ಮೊತ್ತವನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡದ ಪರ ಡೇವಿಡ್ ಮಿಲ್ಲರ್ ಅಬ್ಬರಿಸಿದರು. ತಮ್ಮ ನೈಜ್ಯ ಆಟವನ್ನು ಆಡಿದ ಡೇವಿಡ್ ಮಿಲ್ಲರ್ ನ್ಯೂಜಿಲೆಂಡ್ ಬೌಲರ್‌ಗಳಿಗೆ ಕಾಟ ನೀಡಿದರು. ಆದರೆ ಇವರಿಗೆ ಯಾವುದೇ ಒಬ್ಬ ಬ್ಯಾಟರ್ ಉತ್ತಮ ಸಾಥ್ ನೀಡಲಿಲ್ಲ. ಎಂಬುವುದೇ ಬೇಸರದ ಸಂಗತಿ. ಇವರ ಅಮೋಘ ಇನಿಂಗ್ಸ್ ಈಗ ದಾಖಲೆಯ ಪುಟಕ್ಕೆ ಸ್ಥಾನಕ್ಕೆ ಪಡೆದಿದೆ. ಮಿಲ್ಲರ್ 67 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿದರು. ಇದು ಚಾಂಪಿಯನ್ಸ್ ಟ್ರೋಫಿಯ ಇತಿಹಾಸದಲ್ಲಿ ದಾಖಲಾದ ಅತ್ಯಂತ ವೇಗದ ಶತಕ. ಇದಕ್ಕೂ ಮೊದಲು ಈ ಸಾಧನೆ ಆಸ್ಟ್ರೇಲಿಯಾದ ಜೋಶ್ ಇಂಗ್ಲಿಸ್ ಹೆಸರಿನಲ್ಲಿ ಇತ್ತು. ಇವರು 77 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 362 ರನ್ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 312 ರನ್ ಸೇರಿಸಿ ಸೋಲು ಕಂಡಿತು. ಈ ಮೂಲಕ ದಕ್ಷಿಣ ಆಫ್ರಿಕಾ ಐಸಿಸಿ ಟೂರ್ನಿಯ ಫೈನಲ್ ಪ್ರವೇಶಿಸುವ ಮತ್ತೊಂದು ಅವಕಾಶವನ್ನು ಕೈಚೆಲ್ಲಿತು.