For Quick Alerts
ALLOW NOTIFICATIONS  
For Daily Alerts
 

ರಾಜ್ಯ ಮಹಿಳಾ ಕ್ರಿಕೆಟ್ ತಂಡಕ್ಕೆ ಶಿವಮೊಗ್ಗ ಜಿಲ್ಲೆಯ ಮೂವರು ಆಯ್ಕೆ

Three Cricket players from Shimoga district selected for Karnataka team

ಶಿವಮೊಗ್ಗ, ಜನವರಿ 19: ಜನವರಿ 27 ರಿಂದ ಫೆಬ್ರವರಿ 13ರ ವರೆಗೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ 23 ವರ್ಷದೊಳಿಗಿನ ಮಹಿಳಾ ಕ್ರಿಕೆಟ್ ಪಂದ್ಯಾವಳಿಗೆ ಶಿವಮೊಗ್ಗ ಜಿಲ್ಲೆಯಿಂದ ಅದಿತಿ ರಾಜೇಶ್ ಆಯ್ಕೆಯಾಗಿದ್ದಾರೆ.

ಜನವರಿ 20 ರಿಂದ 31 ರವರೆಗೆ ಪಾಂಡಿಚೇರಿಯಲ್ಲಿ ನಡೆಯಲಿರುವ 16 ವರ್ಷದೊಳಗಿನ ಬಾಲಕಿಯರ ಸೌತ್ ಝೋನ್ ಅಂತಾರಾಜ್ಯ ಕ್ರಿಕೆಟ್ ಟೂರ್ನಿಗೆ ಶಿವಮೊಗ್ಗದ ಶ್ರೀಲಕ್ಷ್ಮಿ ಮಂಜೇಗೌಡ ಮತ್ತು ನಿರ್ಮಿತ ಸಿ.ಜೆ ಆಯ್ಕೆಯಾಗಿದ್ದು, ಇಬ್ಬರೂ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಾರೆ.

ಆಯ್ಕೆಯಾಗಿರುವ ಈ ಮೂವರು ಕ್ರೀಡಾಪಟುಗಳು ಸಹ್ಯಾದ್ರಿ ಕಾಲೇಜಿನಲ್ಲಿರುವ ಸಹ್ಯಾದ್ರಿ ಕ್ರಿಕೆಟ್ ತರಬೇತಿ ಕೇಂದ್ರದಲ್ಲಿ ಕ್ರಿಕೆಟ್ ತರಬೇತುದಾರ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಪಿ.ವಿ. ನಾಗರಾಜ್ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.

ಈ ಪ್ರತಿಭಾವಂತ ಕ್ರಿಕೆಟ್‍ಪಟುಗಳಿಗೆ ಸಹ್ಯಾದ್ರಿ ಕ್ರಿಕೆಟ್ ತರಬೇತಿ ಕೇಂದ್ರದ ಅಧ್ಯಕ್ಷರು/ಕಾರ್ಯದರ್ಶಿಗಳು, ಕೆ.ಎಸ್.ಸಿ.ಎ ಶಿವಮೊಗ್ಗ ವಲಯದ ಸಂಚಾಲಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.

Story first published: Saturday, January 18, 2020, 23:11 [IST]
Other articles published on Jan 18, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+