For Quick Alerts
ALLOW NOTIFICATIONS  
For Daily Alerts
 

Team India: ಬೆಂಚ್ ಕಾಯ್ದೇ ಟೂರ್ನಿ ಮುಗಿಸಿದ ಟೀಮ್ ಇಂಡಿಯಾದ ಮೂವರು ಪ್ಲೇಯರ್ಸ್

ಭಾರತ ಚಾಂಪಿಯನ್ಸ್‌ ಟ್ರೋಫಿ ಫೈನಲ್ ಆಡುತ್ತಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡಿ ಫೈನಲ್‌ಗೆ ಅರ್ಹತೆ ಪಡೆದಿದೆ. ಲೀಗ್‌ ಹಂತದ ಎಲ್ಲ ಪಂದ್ಯಗಳನ್ನು ಗೆದ್ದಿರುವ ಭಾರತ, ಅಜೇಯ ಓಟವನ್ನು ಮುಂದುವರೆಸಿತ್ತು. ಈಗ ಫೈನಲ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಯಾವುದೇ ಬದಲಾವಣೆಗಳಿಲ್ಲದೆ ಮೈದಾನಕ್ಕೆ ಇಳಿಯಿತು. ಈ ಮೂಲಕ ಚಾಂಪಿಯನ್ಸ್‌ ಟ್ರೋಫಿಯನ್ನು ಭಾರತದ ಮೂವರು ಆಟಗಾರರು ಬೆಂಚ್‌ ಕಾಯ್ದೆ ಮುಗಿಸಿದರು.

ಚಾಂಪಿಯನ್ಸ್‌ ಟ್ರೋಫಿಗೆ 15 ಆಟಗಾರರ ಭಾರತ ತಂಡವನ್ನು ಪ್ರಕಟಿಸಲಾಗಿತ್ತು. ಈ ವೇಳೆ ಹಲವು ಯುವ ಆಟಗಾರರಿಗೆ ಆದ್ಯತೆ ಸಹ ಸಿಕ್ಕಿತ್ತು. ಆದರೆ ಕೆಲವು ಆಟಗಾರರು ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಬೆಂಚ್ ಕಾಯ್ದೆ ಸುಸ್ತಾಗಿದ್ದಾರೆ. ಹರ್ಷಿತ್ ರಾಣಾ ಮೊದಲೆರಡು ಪಂದ್ಯದಲ್ಲಿ ಆಡಿದ್ದು ಬಿಟ್ಟರೆ, ಉಳಿದ ಪಂದ್ಯಗಳಲ್ಲಿ ಬೆಂಚ್ ಕಾಯ್ದು ಸುಸ್ತಾದ್ರು. ಇವರನ್ನು ಬಿಟ್ಟರೆ ಇನ್ನು ಮೂವರು ಆಟಗಾರರು ಬೆಂಚ್ ಕಾಯ್ದು ಕಾಯ್ದೇ ಸುಸ್ತಾಗಿದ್ದಾರೆ. ಆ ಆಟಗಾರ ಬಗ್ಗೆ ವರದಿ ಇಲ್ಲಿದೆ.

Three Indian Players Who Spent the Entire Champions Trophy 2025 on the Bench

ರಿಷಭ್‌ ಪಂತ್‌

ಟೀಮ್ ಇಂಡಿಯಾದ ಅನುಭವಿ ವಿಕೆಟ್‌ ಕೀಪರ್ ಬ್ಯಾಟರ್‌ ರಿಷಭ್ ಪಂತ್‌, ಚಾಂಪಿಯನ್ಸ್‌ ಟ್ರೋಫಿ ತಂಡದಲ್ಲಿ ಸ್ಥಾನ ಪಡೆಯಬಹುದು ಎಂದು ಎಲ್ಲರೂ ಲೆಕ್ಕಾಚಾರವನ್ನು ಹಾಕಿಕೊಂಡಿದ್ದರು. ಆದರೆ ಗೌತಮ್‌ ಗಂಭೀರ್ ತಮ್ಮ ಮೊದಲ ಆಯ್ಕೆ ಎಂದು ಕೆಎಲ್ ರಾಹುಲ್‌ ಅವರತ್ತ ಬೊಟ್ಟು ತೋರಿಸಿದಾಗ, ಪಂತ್‌ಗೆ ನಿರಾಸೆ ಆಗಿತ್ತು. ರೋಹಿತ್ ಶರ್ಮಾ ಗಾಯದಿಂದಾಗಿ ಇವರಿಗೆ ಆಡುವ ಅವಕಾಶ ಲಭಿಸಬಹುದು ಎಂಬ ಮಾತುಗಳು ಇದ್ದವು. ಆ ಆಸೆ ಸಹ ಮಣ್ಣು ಪಾಲಾಗಿದೆ. ರಿಷಭ್‌ ಬೆಂಚ್ ಕಾಯ್ದೇ ಚಾಂಪಿಯನ್ಸ್‌ ಟ್ರೋಫಿ ಮುಗಿಸಿದ್ದಾರೆ.

Three Indian Players Who Spent the Entire Champions Trophy 2025 on the Bench

ವಾಷಿಂಗ್ಟನ್‌ ಸುಂದರ್

ಭಾರತದಲ್ಲಿ ನಡೆದಿದ್ದ ಟೆಸ್ಟ್ ಸರಣಿಯ ವೇಳೆ ನ್ಯೂಜಿಲೆಂಡ್ ತಂಡಕ್ಕೆ ಬಹುವಾಗಿ ಕಾಟ ನೀಡಿ ತಂಡದಲ್ಲಿ ಸ್ಥಾನ ಪಡೆದಿದ್ದ ಸ್ಪಿನ್ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಸಹ ಚಾಂಪಿಯನ್ಸ್‌ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಇವರು ಸಹ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಬೆಂಚ್ ಕಾಯ್ದು ಸುಸ್ತಾದ್ರು. ಇವರು ಭಾರತದ ಪರ 23 ಏಕದಿನ ಪಂದ್ಯಗಳಲ್ಲಿ 24 ವಿಕೆಟ್‌ಗಳನ್ನು ಕಬಳಿಸಿದ್ದು, 329 ರನ್‌ಗಳನ್ನು ಗಳಿಸಿದ್ದಾರೆ.

Three Indian Players Who Spent the Entire Champions Trophy 2025 on the Bench

ಅರ್ಷದೀಪ್‌ ಸಿಂಗ್‌

ಟಿ20 ವಿಶ್ವಕಪ್‌ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಎಡಗೈ ಬೌಲರ್‌ ಅರ್ಷದೀಪ್‌ ಸಿಂಗ್‌ ಮಿಂಚಿದ್ದರು. ಇವರಿಗೆ ಚಾಂಪಿಯನ್ಸ್‌ ಟ್ರೋಫಿ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಇವರಿಗೂ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಆದರೆ ಈ ವೇಳೆಯೂ ಇವರು ಅವಕಾಶ ವಂಚಿತರಾದ್ರು. ಇವರು ಈಗಾಗಲೇ ಟೀಮ್ ಇಂಡಿಯಾ ಪರ 9 ಏಕದಿನ ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ತಮ್ಮ ಮಾರಕ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ ಮತ್ತು ಡೆತ್ ಓವರ್‌ಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡುತ್ತಾರೆ. ಅವರ ಯಾರ್ಕರ್ ಚೆಂಡು ಸರಿಸಾಟಿಯಿಲ್ಲ.

Story first published: Sunday, March 9, 2025, 16:35 [IST]
Other articles published on Mar 9, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+