ಬಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಗೆಲುವಿನೊಂದಿಗೆ ಆರಂಭಿಸಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ನಾಗ್ಪುರದಲ್ಲಿ ನಡೆದಿತ್ತು. ಈ ಪಂದ್ಯಗಳ ಇಂಗ್ಲೆಂಡ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಟೀಮ್ ಇಂಡಿಯಾದ ಈ ಗೆಲುವಿನ ಹೀರೋ ಉಪನಾಯಕ ಶುಭಮನ್ ಗಿಲ್. ಅವರು 96 ಎಸೆತಗಳಲ್ಲಿ 87 ರನ್ ಗಳಿಸುವ ಅದ್ಭುತ ಇನ್ನಿಂಗ್ಸ್ ಆಡಿದರು.
ಇಂಗ್ಲೆಂಡ್ ವಿರುದ್ದದ ಈ ಏಕದಿನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಉಪನಾಯಕನಾಗಿ ನೇಮಕಗೊಂಡ ಈ ಯುವ ಸ್ಟಾರ್ ಬ್ಯಾಟರ್ ಅದ್ಭುತ ಇನ್ನಿಂಗ್ಸ್ ಆಡಿದರು. ವಿರಾಟ್ ಕೊಹ್ಲಿ ಅನುಪಸ್ಥಿಯಲ್ಲಿ ಮತ್ತು ರೋಹಿತ್ ಶರ್ಮಾ ವಿಕೆಟ್ ಬೇಗನೆ ಕಳೆದುಕೊಂಡಾಗ, ಗಿಲ್ ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡುವ ಮೂಲಕ ತಂಡಕ್ಕೆ ಆಸರೆಯಾದರು. ಇದಾದ ನಂತರ ಅವರನ್ನು ಭಾರತ ತಂಡದ ನಾಯಕರನ್ನಾಗಿಯೂ ನೋಡಲಾಗುತ್ತಿದೆ.

ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಗಿಲ್ ಅವರ ಅದ್ಭುತ ಇನ್ನಿಂಗ್ಸ್ ಮತ್ತು ಇದುವರೆಗಿನ ಅವರ ವೃತ್ತಿಜೀವನವನ್ನು ನೋಡಿದರೆ, ರೋಹಿತ್ ಶರ್ಮಾ ನಂತರ ನಾಯಕತ್ವಕ್ಕೆ ಉತ್ತಮ ಆಯ್ಕೆಯಾಗಿದ್ದಾರೆ. ಶುಭಮನ್ ಗಿಲ್ ಟೀಮ್ ಇಂಡಿಯಾ ನಾಯಕತ್ವ ವಹಿಸಿಕೊಳ್ಳಲು ಇಲ್ಲಿದೆ ಪ್ರಮುಖ ಮೂರು ಕಾರಣಗಳು.
ಭರವಸೆ ಬ್ಯಾಟರ್ ಶುಭಮನ್ ಗಿಲ್ ಪ್ರಸ್ತುತ ಭಾರತ ತಂಡ ಉಪನಾಯಕರಾಗಿದ್ದಾರೆ. ಅವರಿಗೆ ನಾಯಕನ್ನಾಗಿ ತಂಡವನ್ನು ಮುನ್ನಡೆಸಿರುವ ಅನುಭವವೂ ಇದೆ. ಐಪಿಎಲ್ ಸಂದರ್ಭದಲ್ಲಿ ಅವರು ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದಲ್ಲದೆ, ಅವರು ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ತವರು ತಂಡ ಪಂಜಾಬ್‌ನ ನಾಯಕರೂ ಆಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗಿಲ್ ಅವರಿಗೆ ನಾಯಕತ್ವದ ಅನುಭವವಿದ್ದು, ಈ ಕಾರಣದಿಂದಾಗಿಯೂ ಅವರು ಭಾರತ ತಂಡಕ್ಕೆ ನಾಯಕರಾಗಬಹುದು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶುಭಮನ್ ಗಿಲ್ ತಮ್ಮ ಜವಾಬ್ದಾರಿಯುವ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಅವರು ಭಾರತ ತಂಡಕ್ಕಾಗಿ ಮಾತ್ರವಲ್ಲದೆ, ಐಪಿಎಲ್‌ನಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಅವರು ತಮ್ಮ ಬ್ಯಾಟಿಂಗ್ ಮೂಲಕ ತಂಡವನ್ನು ನಾಯಕನಂಯರ ಮುನ್ನಡೆಸಿದ್ದಾರೆ. ನಾಗ್ಪುರ ಏಕದಿನ ಪಂದ್ಯದಲ್ಲಿಯೂ ಇದನ್ನೇ ಗಿಲ್ ತೋರಿಸಿದರು. ಈ ಕಾರಣದಿಂದಾಗಿ ಅವರಿಗೆ ನಾಯಕತ್ವ ಒಲಿಯಬಹುದು.
ಶುಭಮನ್ ಗಿಲ್ ಅವರಿಗೆ ಪ್ರಸ್ತುತ 25 ವರ್ಷ. ಅವರಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಉಳಿದಿದೆ. ಅವರು ಇನ್ನೂ ಹಲವು ವರ್ಷಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರ ವಯಸ್ಸನ್ನು ಪರಿಗಣಿಸಿ, ಅವರನ್ನು ಟೀಮ್ ಇಂಡಿಯಾದ ನಾಯಕನ್ನಾಗಿ ಆಯ್ಕೆ ಮಾಡಬಹುದು. ರೋಹಿತ್ ಶರ್ಮಾ ನಂತರ ಗಿಲ್ ಅವರನ್ನು ಭಾರತ ತಂಡದ ನಾಯಕನ್ನಾಗುಇ ಮಾಡಿದರೆ, ಮುಂದಿನ ಹಲವು ವರ್ಷಗಳ ಕಾಲ ತಂಡವನ್ನು ಮುನ್ನಡೆಸಬಹುದು.