For Quick Alerts
ALLOW NOTIFICATIONS  
For Daily Alerts
 

ಟೀಮ್‌ ಇಂಡಿಯಾ ಮುಖ್ಯ ಕೋಚ್‌ ಸ್ಥಾನಕ್ಕೆ ಮೂವರು ದಿಗ್ಗಜ ಹೆಸರು ಫೈನಲ್‌!; ಯಾರಾಗ್ತಾರೆ ಮೆನ್ ಇನ್ ಬ್ಲೂ ಸಾರಥಿ?

ಮೇ 15 ಬುಧವಾರ, ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕಾ ಆತಿಥೇಯ ವಹಿಸಿರುವ ಬಹುನಿರೀಕ್ಷಿತ ಐಸಿಸಿ ಪುರುಷರ ಟಿ20 ವಿಶ್ವಕಪ್‌ ಟೂರ್ನಿ ಮುಗಿಯುತ್ತಿದ್ದಂತೆ ರಾಹುಲ್‌ ದ್ರಾವಿಡ್‌ ಅವರ ಭಾರತ ತಂಡದ ಮುಖ್ಯ ಕೋಚ್‌ ಅವಧಿ ಮುಗಿಯಲಿದೆ.

ಹೀಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಭಾರತ ಹಿರಿಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿಗಳನ್ನು (ಮೇ 13) ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಹುದ್ದೆಗೆ 2024ರ ಮೇ 27ರ ಸಂಜೆ 6 ಗಂಟೆವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

2023ರ ಏಕದಿನ ವಿಶ್ವಕಪ್‌ ಟೂರ್ನಿಯ ಬಳಿಕ ರಾಹುಲ್‌ ದ್ರಾವಿಡ್‌ ಅವರ ಮುಖ್ಯ ಕೋಚ್‌ ಅವಧಿ ಪೂರ್ಣಕೊಂಡಿತ್ತು. ಆದರೆ, ಬಿಸಿಸಿಐ ರಾಹುಲ್‌ ದ್ರಾವಿಡ್‌ ಅವಧಿಯನ್ನು ವಿಸ್ತರಿಸಿತ್ತು. ಇದೀಗಾ ಟಿ20 ವಿಶ್ವಕಪ್‌ ನಂತರ ದ್ರಾವಿಡ್‌ ಮುಖ್ಯ ಕೋಚ್‌ ಅವಧಿ ಮುಗಿಯಲಿದೆ.

ದ್ರಾವಿಡ್‌ ಅವರ ಬಯಸಿದರೆ ಮತ್ತೊಮ್ಮೆ ಕೋಚ್‌ ಹುದ್ದೆಗೆ ಅರ್ಜಿಸಲು ಅವಕಾಶವಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಮಾಹಿತಿ ನೀಡಿದ್ದರು. ಆದರೆ ದ್ರಾವಿಡ್‌ ಅರ್ಜಿಯನ್ನು ಸಲ್ಲಿಸುವುದು ಬಹುತೇಕ ಅನುಮಾನ. ಹೀಗಾಗಿ ಟೀಮ್‌ ಇಂಡಿಯಾ ಮುಖ್ಯ ಕೋಚ್‌ ಸ್ಥಾನಕ್ಕೆ ಮೂವರು ದಿಗ್ಗಜ ಹೆಸರು ಕೇಳಿಬರುತ್ತಿದೆ.

Three legendary names are final for Team India head coach post

1) ಸ್ಟಿಫನ್‌ ಫ್ಲೆಮಿಂಗ್‌

ಟೀಮ್‌ ಇಂಡಿಯಾ ಮುಖ್ಯ ಕೋಚ್ ಆಗಲು‌ ನ್ಯೂಜಿಲೆಂಡ್‌ ಮಾಜಿ ನಾಯಕ 51 ವರ್ಷದ ಸ್ಟಿಫನ್‌ ಫ್ಲೆಮಿಂಗ್‌ ಸೂಕ್ತ ಅಭ್ಯರ್ಥಿ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ತಿಳಿಸಿದೆ. ಸ್ಟಿಫನ್‌ ಫ್ಲೆಮಿಂಗ್ ಅವರು 2009 ರಿಂದಲೂ ಚೆನ್ನೈ ಸೂಪರ್ ಕಿಂಗ್ಸ್‌ಗೆ ಹೆಡ್‌ ಕೋಚ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಚೆನ್ನೈ ಫ್ರಾಂಚೈಸಿ ಕಿವೀಸ್‌ ದಿಗ್ಗಜನನ್ನು ಮುಂದಿನ ಆವೃತ್ತಿಯಲ್ಲಿಯೂ ಮುಂದುವರಿಸುವ ಬಯಕೆಯನ್ನು ಹೊಂದಿದೆ. ಒಂದು ವೇಳೆ ಸ್ಟಿಫನ್ ಫ್ಲೆಮಿಂಗ್ ಅವರು ಭಾರತ ಹಿರಿಯರ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಆಗಿ ಆಯ್ಕೆಯಾದರೆ, ಸಿಎಸ್‌ಕೆ ಫ್ರಾಂಚೈಸಿ ಅನ್ನು ತೊರೆಯಬೇಕಾಗುತ್ತದೆ.

2009 ರಿಂದಲೂ ಸಿಎಸ್‌ಕೆ ತಂಡಕ್ಕೆ ಹೆಡ್‌ ಕೋಚ್‌ ಆಗಿ ಸ್ಟಿಫನ್‌ ಫ್ಲೆಮಿಂಗ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಅವಧಿಯಲ್ಲಿ ಸಿಎಸ್‌ಕೆ ಒಟ್ಟು ಐದು ಬಾರಿ ಐಪಿಎಲ್‌ ಟ್ರೋಫಿ ಗೆದ್ದು ಚಾಂಪಿಯನ್‌ ಆಗಿದೆ.

ಐಪಿಎಲ್‌ ಇತಿಹಾಸದಲ್ಲಿಯೇ ಏಕೈಕ ಫ್ರಾಂಚೈಸಿಗೆ ದೀರ್ಘಾವಧಿ ಕೋಚ್‌ ಆಗಿ ಸೇವೆ ಸಲ್ಲಿಸಿದ ಮೊದಲ ಅಭ್ಯರ್ಥಿ ಎಂಬ ಸಾಧನೆ ಸ್ಟಿಫನ್ ಫ್ಲೆಮಿಂಗ್ ಹೆಸರಿನಲ್ಲಿದೆ. ಆದರೆ, ಟೀಮ್‌ ಇಂಡಿಯಾ ಮುಖ್ಯ ಕೋಚ್‌ ಹುದ್ದೆಗೆ ಫ್ಲೆಮಿಂಗ್‌ ಅರ್ಜಿ ಸಲ್ಲಿಸಲಿದ್ದಾರೆಯೇ? ಅಥವಾ ಇಲ್ಲವೇ? ಎಂಬ ಬಗ್ಗೆ ಮಾಹಿತಿ ಎಲ್ಲಿಯೂ ಬಹಿರಂಗವಾಗಿಲ್ಲ.

Three legendary names are final for Team India head coach post

2) ವಿವಿಎಸ್‌ ಲಕ್ಷ್ಮಣ್‌

ಭಾರತ ಕಂಡ ಶ್ರೇಷ್ಠ ಬ್ಯಾಟರ್‌ಗಳಲ್ಲಿ ವಿವಿಎಸ್‌ ಲಕ್ಷ್ಮಣ್ ಕೂಡ ಒಬ್ಬರಾಗಿದ್ದಾರೆ. ‌ಪ್ರಸ್ತುತ ಬೆಂಗಳೂರಿನ ನ್ಯಾಷನಲ್‌ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ವಿವಿಎಸ್‌ ಲಕ್ಷ್ಮಣ್ ಸೇವೆ ಸಲ್ಲಿಸುತ್ತಿದ್ದಾರೆ.

ಇದೀಗ ವಿವಿಎಸ್‌ ಲಕ್ಷ್ಮಣ್‌ ಅವರು ಕೂಡ ಟೀಮ್‌ ಇಂಡಿಯಾ ಮುಖ್ಯ ಕೋಚ್‌ ಹುದ್ದೆಯ ರೇಸ್‌ನಲ್ಲಿ ಪ್ರಬಲ ಅಭ್ಯರ್ಥಿಯಾಗಿದ್ದಾರೆ. ಈ ಹಿಂದೆ ಆನೇಕ ಬಾರಿ ರಾಹುಲ್‌ ದ್ರಾವಿಡ್‌ ಅನುಪಸ್ಥಿತಿಯಲ್ಲಿ ವಿವಿಎಸ್‌ ಲಕ್ಷ್ಮಣ್‌ ಅವರು ಹಲವು ಸರಣಿಗಳಲ್ಲಿ ಭಾರತ ತಂಡಕ್ಕೆ ಹಂಗಾಮಿ ಕೋಚ್‌ ಆಗಿ ಮುನ್ನೆಡೆಸಿರುವ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ.

ಏಷ್ಯನ್‌ ಗೇಮ್ಸ್‌, ಆಸ್ಟ್ರೇಲಿಯಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌ ಹಾಗೂ ಐರ್ಲೆಂಡ್‌ ತಂಡಗಳ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಲಕ್ಷ್ಮಣ್‌ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ‌ರಾಹುಲ್‌ ದ್ರಾವಿಡ್‌ ಅವರು ಭಾರತ ತಂಡಕ್ಕೆ ಕೋಚ್‌ ಆಗಿ ನೇಮಕವಾದ ಬಳಿಕ ತೆರವಾಗಿದ್ದ ಎನ್‌ಸಿಎ ಮುಖ್ಯಸ್ಥರ ಸ್ಥಾನವನ್ನು ಲಕ್ಷ್ಮಣ್‌ ತುಂಬಿದ್ದು, ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

Three legendary names are final for Team India head coach post

3) ಜಸ್ಟಿನ್‌ ಲ್ಯಾಂಗರ್

ಲಕ್ನೋ ಸೂಪರ್ ಜೈಂಟ್ಸ್ ತಂಡದ ಹಾಲಿ ಕೋಚ್ ಜಸ್ಟಿನ್ ಲ್ಯಾಂಗರ್ ಕೂಡ ಭಾರತ ರಾಷ್ಟ್ರೀಯ ತಂಡಕ್ಕೆ ಕೋಚ್ ಆಗಲು ಆಸಕ್ತಿ ತೋರಿದ್ದಾರೆ. 2021ರಲ್ಲಿ ಯುಎಇಯಲ್ಲಿ ಆಸ್ಟ್ರೇಲಿಯಾ ತನ್ನ ಎರಡನೇ ಟಿ20 ವಿಶ್ವಕಪ್ ಟ್ರೋಫಿ ಗೆದ್ದಾಗ ಜಸ್ಟಿನ್ ಲ್ಯಾಂಗರ್ ಕೋಚ್ ಆಗಿದ್ದರು. ಈಗಾಗಲೇ ‌ಟೀಮ್ ಇಂಡಿಯಾ ಕೊಚ್‌ ಹುದ್ದೆಯ ಬಗ್ಗೆ ಮಾನಸಿಕ ಹಾಗೂ ದೈಹಿಕವಾಗಿ ಸಿದ್ದನಾಗುತ್ತಿದ್ದೇನೆ ಎಂದು ಜಸ್ಟಿನ್‌ ಲ್ಯಾಂಗರ್‌ ಅವರೇ ಹೇಳಿಕೊಂಡಿದ್ದಾರೆ.

ಡಂಕನ್‌ ಫ್ಲೆಚರ್‌ ಭಾರತ ಪುರುಷರ ಹಿರಿಯರ ತಂಡಕ್ಕೆ ಕೊನೆಯ ವಿದೇಶಿ ಕೋಚ್‌ ಆಗಿದ್ದಾರೆ. 2014ರಲ್ಲಿ ಇವರು ಭಾರತ ತಂಡವನ್ನು ತೊರೆದಿದ್ದರು. ತದನಂತರ ಬಿಸಿಸಿಐ ಸ್ಪಿನ್‌ ದಿಗ್ಗಜ ಅನಿಲ್‌ ಕುಂಬ್ಳೆ ಅವರನ್ನು ಹೆಡ್‌ ಕೋಚ್‌ ಹುದ್ದೆಗೆ ನೇಮಿಸಿತ್ತು.

ನಂತರ ರವಿ ಶಾಸ್ತ್ರಿ ಹಾಗೂ ರಾಹುಲ್‌ ದ್ರಾವಿಡ್‌ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಭಾರತ ಐಸಿಸಿಯ ಪ್ರತಿಷ್ಠಿತ ಟೂರ್ನಿಗಳಲ್ಲಿ ಅಂತಿಮ ಘಟ್ಟ ತಲುಪಿದರೂ, ಯಾವುದೇ ಐಸಿಸಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ.

ಹೊಸದಾಗಿ ನೇಮಕಗೊಂಡ ಮುಖ್ಯ ಕೋಚ್ ಜುಲೈ 1, 2024ರಿಂದ ಭಾರತ ತಂಡದ ತರಬೇತುದಾರರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಡಿಸೆಂಬರ್ 31, 2027ಕ್ಕೆ ಕೊನೆಗೊಳ್ಳುವ ಮೂರುವರೆ ವರ್ಷಗಳ ಅವಧಿಗೆ ಪ್ರಮುಖ ಹುದ್ದೆಯನ್ನು ಮುಂದುವರಿಸುತ್ತಾರೆ. ಅಂದರೆ ಮುಂಬರುವ ಏಕದಿನ ವಿಶ್ವಕಪ್‌ ಟೂರ್ನಿವರೆಗೂ ಕೋಚ್‌ ಆಗಲಿದ್ದಾರೆ.

Story first published: Wednesday, May 15, 2024, 18:16 [IST]
Other articles published on May 15, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+