For Quick Alerts
ALLOW NOTIFICATIONS  
For Daily Alerts
 

IPL 2025: ಹಾಲಿ ಚಾಂಪಿಯನ್ ಕೆಕೆಆರ್ ಗದ್ದುಗೆ ಏರಲು ಮೂವರ ನಡುವೆ ಪೈಪೋಟಿ!

ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಮೆಗಾ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಫ್ರಾಂಚೈಸಿ ಹಲವು ಸ್ಟಾರ್ ಮತ್ತು ಅನುಭವಿ ಆಟಗಾರರನ್ನು ಖರೀದಿಸಿದೆ. ಆದರೆ ಕೆಕೆಆರ್ ತಮ್ಮ ಚಾಂಪಿಯನ್ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಕಳೆದುಕೊಂಡಿದೆ. ತಮ್ಮ ಮೌಲ್ಯವನ್ನು ತಿಳಿಯಲು ಮೆಗಾ ಹರಾಜಿಗೆ ಬಂದಿದ್ದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಾಗಿದರು. ಇದೀಗ ಕೆಕೆಆರ್ ತಂಡದ ನಾಯಕತ್ವ ಹುದ್ದೆ ಖಾಲಿಯಾಗಿದೆ. ಮುಂದಿನ ಐಪಿಎಲ್ 2025ರ ಟೂರ್ನಿಗೆ ಕೆಕೆಆರ್ ಹೊಸ ನಾಯಕನ ಹುಡುಕಾಟದಲ್ಲಿದೆ.

ಕೆಕೆಆರ್‌ನಲ್ಲಿ ಸುನಿಲ್ ನರೈನ್, ಆಂಡ್ರೆ ರಸೆಲ್, ಕ್ವಿಂಟನ್ ಡಿ ಕಾಕ್, ಅಜಿಂಕ್ಯ ರಹಾನೆ, ಮನೀಷ್ ಪಾಂಡೆ, ವೆಂಕಟೇಶ್ ಅಯ್ಯರ್ ಮತ್ತು ರಿಂಕು ಸಿಂಗ್ ಅವರಂತಹ ಸ್ಟಾರ್ ಆಟಗಾರರ ದಂಡೆ ಇದೆ. ಇವರಲ್ಲಿ ಯಾರಿಗೆ ಕೆಕೆಆರ್ ನಾಯಕನ ಪಟ್ಟ ಸಿಗಲಿದೆ ಎಂಬುದು ಕ್ರಿಕೆಟ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಸುನಿಲ್ ನರೈನ್, ಆಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್ ಮತ್ತು ರಿಂಕು ಸಿಂಗ್ ಕೆಕೆಆರ್‌ನೊಂದಿಗೆ ದೀರ್ಘಕಾಲದಿಂದ ಇದ್ದಾರೆ. ಇವರಲ್ಲಿ ಯಾರು ಕೆಕೆಆರ್ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಆದರೆ ಈ ಬಾರಿ ಅಜಿಂಕ್ಯ ರಹಾನೆ ಅವರು ಕೂಡ ಕೆಕೆಆರ್ ಸೇರಿರುವುದರಿಂದ ಅವರನ್ನು ನಾಯಕನ ಪಾತ್ರಕ್ಕೆ ನೋಡಲಾಗುತ್ತಿದೆ.

Three Players Competing to Become Kolkata Knight Riders Captain in IPL 2025

ಮಾಧ್ಯಮಗಳ ವರದಿಗಳ ಪ್ರಕಾರ, ಕೆಕೆಆರ್ ನಾಯಕತ್ವದ ರೇಸ್‌ನಲ್ಲಿ ಮೂವರು ಆಟಗಾರರ ಹೆಸರುಗಳು ಮುಂಚೂಣಿಯಲ್ಲಿದೆ. ಈ ಮೂವರು ಆಟಗಾರರು ಭಾರತೀಯರಾಗಿದ್ದಾರೆ. ಅವರನ್ನು ಕೆಕೆಆರ್ ದೀರ್ಘಕಾಲದವರೆಗೆ ನಾಯಕನಾಗಿ ಮಾಡುವ ಲೆಕ್ಕಚಾರದಲ್ಲಿದೆ. ಈ ಮೂವರು ಆಟಗಾರರು ಬೇರೆ ಯಾರು ಅಲ್ಲ, ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್ ಮತ್ತು ರಿಂಕು ಸಿಂಗ್. ಇದರೊಂದಿಗೆ ವಿದೇಶಿ ಆಟಗಾರರಿಗೆ ನಾಯಕತ್ವಕ್ಕೆ ವಹಿಸಲು ಕೆಕೆಆರ್‌ ಮನಸ್ಸು ಮಾಡುತ್ತಿಲ್ಲ ಎಂಬುದು ಸಷ್ಟವಾಗಿದೆ.

ಅಜಿಂಕ್ಯ ರಹಾನೆ

ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕತ್ವಕ್ಕೆ ಮೊದಲ ಆಯ್ಕೆ ಭಾರತದ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ. ಅವರು ಭಾರತದ ನಾಯಕತ್ವವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇದಲ್ಲದೆ, ಅವರು ಐಪಿಎಲ್‌ನಲ್ಲಿಯೂ ರಾಜಸ್ಥಾನ್ ರಾಯಲ್ಸ್‌ ತಂಡವನ್ನು ಮುನ್ನಡೆಸಿದ್ದಾರೆ. ಇದೀಗ ಅವರು ಕೆಕೆಆರ್ ನಾಯಕನಾಗುವ ಅವಕಾಶವನ್ನು ಹೊಂದಿದ್ದಾರೆ. ರಹಾನ್ ಐಪಿಎಲ್‌ನಲ್ಲಿ ಇಲ್ಲಿವರಗೆ 185 ಪಂದ್ಯಗಳ 171 ಇನ್ನಿಂಗ್ಸ್‌ಗಳಲ್ಲಿ 2 ಶತಕ ಮತ್ತು 30 ಅರ್ಧಶತಕಗಳೊಂದಿಗೆ 4642 ರನ್ ಗಳಿಸಿದ್ದಾರೆ.

ವೆಂಕಟೇಶ್ ಅಯ್ಯರ್

ಈ ಬಾರಿ ಮೆಗಾ ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ ಬಿಡ್ ಮಾಡಲು ಕೆಕೆಆರ್ ಸಾಕಷ್ಟು ಹೋರಾಟ ನಡೆಸಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವೆಂಕಟೇಶ್ ಅಯ್ಯರ್ ಅವರಿಗೆ ಗಾಳ ಹಾಕಿತ್ತು. ಆದರೆ ಕೆಕೆಆರ್ ಆರ್‌ಟಿಎಂ ಬಳಸಿ 23.75 ಕೋಟಿ ರೂ.ಗೆ ವೆಂಕಟೇಶ್ ಅಯ್ಯರ್ ಅವರನ್ನು ಬಿಡ್ ಮಾಡಿತ್ತು. ಹೀಗಾಗಿ ಕೆಕೆಆರ್ ನಾಯಕನ ಸ್ಥಾನಕ್ಕೆ ವೆಂಕಟೇಶ್ ಅಯ್ಯರ್ ಹೆಸರು ಕೇಳಿ ಬರುತ್ತಿದೆ. ಅವರು ಕೆಕೆಆರ್ ತಂಡದೊಂದಿಗೆ ದೀರ್ಘ ಕಾಲದಿಂದ ಒಡನಾಟ ಹೊಂದಿದ್ದಾರೆ. ಐಪಿಎಲ್‌ನಲ್ಲಿ ಅಯ್ಯರ್ 51 ಪಂದ್ಯಗಳ 49 ಇನ್ನಿಂಗ್ಸ್‌ಗಳಲ್ಲಿ 1 ಶತಕ ಮತ್ತು 11 ಅರ್ಧಶತಕಗಳೊಂದಿಗೆ 1326 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ 3 ವಿಕೆಟ್ ಕೂಡ ಇದೆ.

ರಿಂಕು ಸಿಂಗ್

ಕೋಲ್ಕತ್ತಾ ನೈಟ್ ರೈಡರ್ಸ್ ರಿಂಕು ಸಿಂಗ್ ಅವರನ್ನು ನಾಯಕನ ಮೂರನೇ ಆಯ್ಕೆಯಾಗಿ ನೋಡುತ್ತಿದೆ. ರಿಂಕು ಟೀಮ್ ಇಂಡಿಯಾ ಪರ ಕೂಡ ಮಿಂಚಿದ್ದು, ಯುಪಿ ಟಿ20 ಲೀಗ್‌ನಲ್ಲಿ ನಾಯಕರಾಗಿಯೂ ಕಾಣಿಸಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರು ಕೆಕೆಆರ್ ನಾಯಕತ್ವಕ್ಕೆ ಆಯ್ಕೆಯಾಗಬಹುದು. ಕೆಕೆಆರ್ ಅವರನ್ನು 18 ಕೋಟಿ ರೂ.ಗೆ ಉಳಿಸಿಕೊಂಡಿದೆ. ರಿಂಕು ಕೋಲ್ಕತ್ತಾ ಪರ 46 ಪಂದ್ಯಗಳ 40 ಇನ್ನಿಂಗ್ಸ್‌ಗಳಲ್ಲಿ 4 ಅರ್ಧಶತಕಗಳೊಂದಿಗೆ 893 ರನ್ ಗಳಿಸಿದ್ದಾರೆ.

Story first published: Monday, December 2, 2024, 17:18 [IST]
Other articles published on Dec 2, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+