Champions Trophy: ಇಂಗ್ಲೆಂಡ್ ತಂಡದ ಸೆಮಿಫೈನಲ್ ಕನಸು ಭಗ್ನವಾಗಲು 3 ಕಾರಣಗಳು
ಇತ್ತೀಚೆಗೆ ವೈಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡದ ಪ್ರದರ್ಶನ ಉತ್ತಮವಾಗಿಲ್ಲ. ಭಾರತ ವಿರುದ್ಧ ಏಕದಿನ ಸರಣಿಯನ್ನು ಸೋತ ಬಳಿಕ ಇಂಗ್ಲೆಂಡ್ ತಂಡ ಐಸಿಸಿ 2025 ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದಲ್ಲೂ ಹೊರ ಬಿದ್ದಿದೆ. ಇದರೊಂದಿಗೆ ಇಂಗ್ಲೆಂಡ್ ತಂಡದ ಸೆಮಿಫೈನಲ್ ಕನಸು ಭಗ್ನವಾಯಿತು. ಬುಧವಾರ ಲಾಹೋರ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಬಿ ಗುಂಪಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಇಂಗ್ಲೆಂಡ್ ತಂಡ ಸೋಲು ಕಂಡಿತು. ಈ ಪಂದ್ಯದಲ್ಲಿ ಇಂಗ್ಲೆಂಡದ ವಿರುದ್ಧ ಅಫ್ಘಾನಿಸ್ತಾನ 8 ರನ್‌ಗಳ ರೋಚಕ ಗೆಲುವು ಸಾಧಿಸಿತು.
ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡದ ಪ್ರಯಾಣವು ಅಫ್ಘಾನಿಸ್ತಾನ ವಿರುದ್ಧದ ಸೋಲಿನೊಂದಿಗೆ ಐಸಿಸಿ ಟೂರ್ನಿಯಲ್ಲಿ ಮತ್ತೊಮ್ಮೆ ನಿರಾಶೆಯಲ್ಲಿ ಕೊನೆಗೊಂಡಿದೆ. ಈ ಬಾರಿ ಚಾಂಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಸೋಲನ್ನು ಎದುರಿಸಿತ್ತು. ನಂತರ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆಲ್ಲುವ ಮೂಲಕ ಇಂಗ್ಲೆಂಡ್ ತಂಡವನ್ನು ಹೊರ ಕಳುಹಿಸಿತು. ಇಂತಹ ಮೆಗಾ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡದ ಸೋಲಿಗೆ ಪ್ರಮುಖ ಮೂರು ಕಾರಣಗಳಿವೆ. ಈ ಕಾರಣಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಳಪೆ ನಾಯಕತ್ವ
ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ತಂಡದ ಸೆಮಿಫೈನಲ್ ತಲುಪುವ ಕನಸು ಭಗ್ನಗೊಳ್ಳಲು ಜೋಸ್ ಬಟ್ಲರ್ ಅವರ ನಾಯಕತ್ವವು ಕಾರಣವಾಗಿದೆ. ಜೋಸ್ ಬಟ್ಲರ್ ಮೈದಾನದಲ್ಲಿ ಬ್ಯಾಟ್ ಹಿಡಿದು ಅಬ್ಬರಿಸಲಿಲ್ಲ. ಅಲ್ಲದೆ, ಪಂದ್ಯದ ವೇಳೆ ಅವರ ನಿರ್ಧಾರಗಳು ಸರಳವಾಗಿದ್ದು, ಯಾವುದೇ ಪರಿಣಾಮ ಬೀರಲಿಲ್ಲ. ಬೌಲಿಂಗ್ ಬದಲಾವಣೆಗಳಿಂದ ಬ್ಯಾಟಿಂಗ್ ಕ್ರಮಾಂಕದವರೆಗೂ ಬಟ್ಲರ್ ಅವರ ತಂತ್ರಗಳು ಫಲ ನೀಡಲಿಲ್ಲ. ಮೇಲ್ನೋಟಕ್ಕೆ ಇಂಗ್ಲೆಂಡ್ ತಂಡಕ್ಕೆ ನಾಯಕತ್ವದ ಕೌಶಲ್ಯತೆ ಕೊರತೆಯಿತ್ತು.
ಕೈ ಕೊಟ್ಟ ಬೌಲಿಂಗ್
ಇಂಗ್ಲೆಂಡ್ ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಆದರೆ ಸ್ಟಾರ್ ಬೌಲರ್‌ಗಳು ಪಂದ್ಯದ ವೇಳೆ ವಿಶೇಷವಾದುದ್ದನ್ನು ಮಾಡಲಿ ಸಾಧ್ಯವಾಗಿಲ್ಲ. ಜೋಫ್ರಾ ಆರ್ಚರ್, ಮಾರ್ ವುಡ್, ಜೇಮೀ ಓವರ್ಟನ್, ಬ್ರೈಡನ್ ಕಾರ್ಸ್ ಅವರಂತಹ ಬೌಲರ್‌ಗಳು ತಂಡದಲ್ಲಿ ಸಂಪೂರ್ನ ವಿಫಲವಾದರು. ಈ ಬೌಲರ್‌ಗಳು ಎರಡೂ ಗುಂಪು ಹಂತದ ಪಂದ್ಯಗಳಲ್ಲಿ ಹೇಳಿಕೊಳ್ಳುವಷ್ಟು ವಿಕೆಟ್‌ಗಳನ್ನು ಪಡೆಯಲಿಲ್ಲ. ಇದು ಕೂಡ ಇಂಗ್ಲೆಂಡ್ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿಯಲು ಪ್ರಮುಖ ಕಾರಣ.
ಸ್ಟಾರ್ ಬ್ಯಾಟರ್ಸ್ ಫ್ಲಾಪ್
ಈ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ತಂಡ ಸ್ಟಾರ್ ಬ್ಯಾಟರ್ಸ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾದರು. ಫಿಲ್ ಸಾಲ್ಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್, ಲಿಯಾಮ್ ಲಿವಿಂಗ್‌ಸ್ಟೋನ್ ತಂಡಕ್ಕೆ ಆಸರೆಯಾಗಲಿಲ್ಲ. ಈ ಸ್ಟಾರ್ ಆಟಗಾರರು ತಮ್ಮ ಜವಾಬ್ದಾರಿಗಳನ್ನು ಮರೆತು ಆಟವಾಡಿದರು. ಹೀಗಾಗಿ ಈ ಆಟಗಾರರ ಕಳಪೆ ಪ್ರದರ್ಶನ ತಂಡದ ಸೋಲಿಗೆ ಮತ್ತೊಂದು ಕಾರಣವಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications