ಐಪಿಎಲ್ 2025 ರಲ್ಲಿ ಇಲ್ಲಿಯವರೆಗೆ ಒಟ್ಟು 27 ಪಂದ್ಯಗಳು ನಡೆದಿವೆ. ಎಲ್ಲಾ ಆಟಗಾರರ ಸ್ಥಿರ ಪ್ರದರ್ಶನ ನೀಡುವ ಮೂಲಕ ಮಿಂಚುತ್ತಿದ್ದಾರೆ. ಆದರೆ, ಮೂವರು ಸ್ಟಾರ್ ವೇಗದ ಬೌಲರ್ಸ್ ತಮ್ಮ ಲಯ ಕಳೆದುಕೊಂಡಿದ್ದಾರೆ. ಐಪಿಎಲ್ 2025 ರಲ್ಲಿ ಈ ಮೂವರು ಸ್ಟಾರ್ ವೇಗದ ಬೌಲರ್ಸ್ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿತ್ತು. ಆದರೆ ಇದಕ್ಕೆ ವಿರುದ್ಧವಾಗಿ, ಅವರೆಲ್ಲರೂ ಕಳಪೆ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ.
ಐಪಿಎಲ್ 2025 ರಲ್ಲಿ ಈ ಮೂವರು ಬೌಲರ್‌ಗಳು ಇಲ್ಲಿಯವರೆಗೆ ಸಾಕಷ್ಟು ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಎದುರಾಳಿ ತಂಡದ ಬ್ಯಾಟರ್ಸ್ ವಿರುದ್ಧ ಈ ಬೌಲರ್ಸ್ ಹೆಚ್ಚು ಪರಿಣಾಮಕಾರಿಯಾಗಿಲ್ಲ. ಈ ಮೂವರು ಬೌಲರ್ಸ್ ವಿಕೆಟ್ ಪಡೆಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಅಂತಹ ಮೂರು ಬೌಲರ್ಸ್ ಬಗ್ಗೆ ಇಲ್ಲಿದೆ ಮಾಹಿತಿ.

ಟೀಮ್ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಶಮಿ ಐಪಿಎಲ್ 2025 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದಾರೆ. ಐಪಿಎಲ್ 2025 ರಲ್ಲಿ ಮೊಹಮ್ಮದ್ ಶಮಿ ಅವರ ಪ್ರದರ್ಶನ ಇಲ್ಲಿಯವರೆಗೆ ಕಳಪೆಯಾಗಿದೆ. ಮೊಹಮ್ಮದ್ ಶಮಿ ಇದುವರೆಗೆ 6 ಪಂದ್ಯಗಳನ್ನು ಆಡಿದ್ದು, 46.60 ರ ಕಳಪೆ ಸರಾಸರಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಅವರು ಒಟ್ಟು 233 ರನ್ ಬಿಟ್ಟುಕೊಟ್ಟಿದ್ದಾರೆ. ಈ ಸೀಸನ್‌ನಲ್ಲಿ ಮೊಹಮ್ಮದ್ ಶಮಿ ಇದುವರೆಗೆ ಕೇವಲ 5 ವಿಕೆಟ್‌ಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಐಪಿಎಲ್ 2025 ರಲ್ಲಿ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಮಿಂಚುತ್ತಿಲ್ಲ. ರವಿ ಬಿಷ್ಣೋಯ್ ಅವರ ಪ್ರದರ್ಶನ ಇಲ್ಲಿಯವರೆಗೆ ಹೇಳಿಕೊಳ್ಳುವಂತಿಲ್ಲ. ರವಿ ಬಿಷ್ಣೋಯ್ ಐಪಿಎಲ್ 2025 ರಲ್ಲಿ ಇದುವರೆಗೆ 6 ಪಂದ್ಯಗಳನ್ನು ಆಡಿದ್ದು, 43.50 ರ ಕಳಪೆ ಸರಾಸರಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ಅವಧಿಯಲ್ಲಿ ರವಿ ಬಿಷ್ಣೋಯ್ 6 ಪಂದ್ಯಗಳಲ್ಲಿ 261 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಇಲ್ಲಿಯವರೆಗೆ ಕೇವಲ 6 ವಿಕೆಟ್‌ಗಳನ್ನು ಮಾತ್ರ ಪಡೆಯಲು ಸಾಧ್ಯವಾಗಿದೆ.
ಲಕ್ನೋ ಸೂಪರ್ ಜೈಂಟ್ಸ್ ವೇಗದ ಬೌಲರ್ ಆವೇಶ್ ಖಾನ್ ಅವರ ಬೌಲಿಂಗ್ ಮೊಹಮ್ಮದ್ ಶಮಿ ಮತ್ತು ರವಿ ಬಿಷ್ಣೋಯ್ ಅವರಿಗಿಂತ ಕೆಟ್ಟದಾಗಿದೆ. ಐಪಿಎಲ್ 2025 ರಲ್ಲಿ, ಆವೇಶ್ ಖಾನ್ ಇದುವರೆಗೆ 5 ಪಂದ್ಯಗಳನ್ನು ಆಡಿದ್ದಾರೆ. 48 ರ ಕಳಪೆ ಸರಾಸರಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ಅವಧಿಯಲ್ಲಿ ಆವೇಶ್ ಖಾನ್ 5 ಪಂದ್ಯಗಳಲ್ಲಿ 192 ರನ್ ಬಿಟ್ಟುಕೊಟ್ಟಿದ್ದಾರೆ. ಅಲ್ಲದೆ, ಕೇವಲ 4 ವಿಕೆಟ್ ಪಡೆದಿದ್ದಾರೆ.