ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಟೂರ್ನಿ ಮಾರ್ಚ್ 22 ರಂದು ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವಿನ ಮೊದಲ ಪಂದ್ಯದೊಂದಿಗೆ ಆರಂಭವಾಗಲಿದೆ. ಈ ಮೆಗಾ ಲೀಗ್‌ನಲ್ಲಿ ಹಲವು ಸ್ಟಾರ್ ಆಟಗಾರರು ಆಡುತ್ತಿದ್ದಾರೆ. ಐಪಿಎಲ್‌ನ ಮೊದಲ ಆವೃತ್ತಿಯಿಂದ ನಿಯಮಿತವಾಗಿ ಲೀಗ್‌ನ ಭಾಗವಾಗಿರುವ ಕೆಲವು ಆಟಗಾರರಿದ್ದಾರೆ. ಐಪಿಎಲ್ ಆರಂಭವಾದಾಗಿನಿಂದ ಹಲವಾರು ಆಟಗಾರರು ಲೀಗ್‌ನ ಪ್ರತಿ ಆವೃತ್ತಿಯಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ, ಈ ಬಾರಿ ಕೆಲವು ಆಟಗಾರರು ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
ಐಪಿಎಲ್‌ನಲ್ಲಿ ನಿರಂತರವಾಗಿ ಭಾಗವಹಿಸುತ್ತದ್ದ ಆ ಆಟಗಾರರ ಯಾರು? ಈ ಬಾರಿ ಏಕೆ ಅವರು ಕಾಣಿಸಿಕೊಳ್ಳುತ್ತಿಲ್ಲ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಭಾರತ ತಂಡ ಮಾಜಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ಮಾಜಿ ನಾಯಕ ಶಿಖರ್ ಧವನ್ 2024ರಲ್ಲಿ ಐಪಿಎಲ್‌ಗೂ ವಿದಾಯ ಹೇಳಿದ್ದಾರೆ. ಅವರು 2008ರ ಚೊಚ್ಚಲ ಐಪಿಎಲ್‌ನಲ್ಲಿ ಡೆಲ್ಲಿ ತಂಡದೊಂದಿಗೆ ತಮ್ಮ ಪಯಣ ಆರಂಭಿಸಿದರು. ನಂತರ 2 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ಪರ ಆಡಿದರು. 2011 ಮತ್ತು 2012ರಲ್ಲಿ ಶಿಖರ್ ಧವನ್ ಡೆಕ್ಕನ್ ಚಾರ್ಜರ್ಸ್ ತಂಡದ ಭಾಗವಾಗಿದ್ದರು. ಬಳಿಕ 2013 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೇರಿದರು. 2018 ಮತ್ತು 2019 ಅವರು ತಮ್ಮ ಮೊದಲ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರಳಿದರು. ಶಿಖರ್ ತಮ್ಮ ವೃತ್ತಿಜೀವನದ ಕೊನೆಯ ಐಪಿಎಲ್ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದರು.
ಭಾರತ ತಂಡ ಮಾಜಿ ವಿಕೆಟ್‌ಕೀಪರ್-ಬ್ಯಾಟರ್ ವೃದ್ಧಿಮಾನ್ ಸಹಾ 2008 ರಿಂದ ಭಾಗವಾಗಿದ್ದರು. ಆದರೆ ಅವರು 2025ರಲ್ಲ ಐಪಿಎಲ್ ಭಾಗವಾಗಲ್ಲ. 2024-25ರ ರಣಜಿ ಟ್ರೋಫಿ ಆವೃತ್ತಿ ಅಂತ್ಯದ ನಂತರ ಅವರು ಎಲ್ಲಾ ಮಾದರಿ ಕ್ರಿಕೆಟ್‌ನಿಂದ ನಿವೃತ್ತಿರಾಗಿದ್ದಾರೆ. ಅವರು 2008 ರಿಂದ 2010 ರವರೆಗೆ ಕೆಕೆಆರ್ ಪರ ಆಡಿದರು. 2011 ರಿಂದ 2013ರ ವರೆಗೆ ಮೂರು ವರ್ಷಗಳ ಕಾಲ ಸಿಎಸ್‌ಕೆ ತಂಡದ ಭಾಗವಾಗಿದ್ದರು. ಮುಂದಿನ ನಾಲ್ಕು ಪಂಜಾಬ್ ಕಿಂಗ್ಸ್ ಜೊತೆಗೆ ಹಾಗು ಇನ್ನೊಂದು 4 ವರ್ಷಗಳ ಕಾಲ ಎಸ್‌ಆರ್‌ಹೆಚ್ ತಂಡಗಳಲ್ಲಿ ಕಾಣಿಸಿಕೊಂಡಿದ್ದರು. ಅಂತಿಮವಾಗಿ 2022 ರಿಂದ 2024 ರವರೆಗೆ ಗುಜರಾತ್ ಟೈಟನ್ಸ್ ಪರ ಆಡಿದರು.
ಐಪಿಎಲ್ ಇತಿಹಾಸದಲ್ಲಿ ದಿನೇಶ್ ಕಾರ್ತಿಕ್ ಸ್ಟಾರ್ ಆಟಗಾರರ ಪಟ್ಟಿಯಲ್ಲಿದೆ. ದಿನೇಶ್ ಕಾರ್ತಿಕ್ ಕೂಡ 2024ರಲ್ಲಿ ಐಪಿಎಲ್‌ನಿಂದ ನಿವೃತ್ತರಾದರು. ಆದರೂ ಅವರು SA20 ಲೀಗ್‌ನಲ್ಲಿ ಪಾರ್ಲ್ ರಾಯಲ್ಸ್ ಪರ ಆಡಿದ್ದರು. ಐಪಿಎಲ್‌ನಲ್ಲಿ ಅವರು ಒಟ್ಟು 6 ಫ್ರಾಂಚೈಸಿಗಳೊಂದಿಗೆ 257 ಪಂದ್ಯಗಳನ್ನು ಆಡಿದ್ದಾರೆ. ಡೆಲ್ಲಿ ತಂಡದೊಂದಿಗೆ ಐಪಿಎಲ್ ಪಯಣ ಶುರು ಮಾಡಿದ ಡಿಕೆ ಆರ್‌ಸಿಬಿ ಜೊತೆಗೆ ಮುಗಿಸಿದರು. ಮೊದಲ ಮೂರು ವರ್ಷ ಡೆಲ್ಲಿ ಪರ ಆಡಿದರು. 2011 ಪಂಜಾಬ್ ಕಿಂಗ್ಸ್, 2012-13 ಮುಂಬೈ ಇಂಡಿಯನ್ಸ್ ಜೊತೆ ಇದ್ದರೆ, 2014ರಲ್ಲಿ ಡೆಲ್ಲಿಗೆ ಮರಳಿದರು. 2015ರಲ್ಲಿ ಆರ್‌ಸಿಬಿಗೆ ಬಂದ ಡಿಕೆ 2016 ಮತ್ತು 2017 ಗುಜರಾತ್ ಲಯನ್ಸ್ ಪರ ಆಡಿದರು. 2018 ರಿಂದ 2021 ರವರೆಗೆ ಕೆಕೆಆರ್ ತಂಡದ ನಾಯಕರಾಗಿದ್ದರು. ನಂತರ 2022 ರಿಂದ 2024 ರವರೆಗೆ ಆರ್‌ಸಿಬಿ ಪರ ಆಡುವ ಮೂಲಕ ತಮ್ಮ ಐಪಿಎಲ್ ವತ್ತಿಜೀವನಕ್ಕೆ ತೆರೆ ಎಳೆದರು.