For Quick Alerts
ALLOW NOTIFICATIONS  
For Daily Alerts
 

IPL 2025: ಸೂಪರ್ ಓವರ್‌ ಕಂಡ ಪಂದ್ಯಗಳ ವಿವರ: RCB ಎಷ್ಟು ಪಂದ್ಯ ಆಡಿದೆ ಗೊತ್ತು?

ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್‌ 17 ಆವೃತ್ತಿಗಳನ್ನು ಕಂಡಿದೆ. 18ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಈ ಬಾರಿಯ ಶ್ರೀಮಂತ ಲೀಗ್‌ ಮಾರ್ಚ್‌ 22 ರಂದು ಆರಂಭವಾಗಲಿದೆ. ಐಪಿಎಲ್‌ನಲ್ಲಿ ಭಾಗವಹಿಸುತ್ತಿರುವ 10 ತಂಡಗಳು ಈಗಾಗಲೇ ತಾಲೀಮು ನಡೆಸಿವೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮೊದಲ ಬಾರಿಗೆ ಕಪ್‌ಗೆ ಮುತ್ತಿಡುವ ಕನಸು ಕಾಣುತ್ತಿದೆ. ಈ ಬಾರಿಯ ಆರ್‌ಸಿಬಿ ತಂಡ ಬಲಿಷ್ಠವಾಗಿದ್ದು ಈ ಬಾರಿ ಚಾಂಪಿಯನ್‌ ಪಟ್ಟಕ್ಕೇರುವ ಇರಾದೆಯನ್ನು ಹೊಂದಿದೆ.

ಐಪಿಎಲ್‌ ಅಂದರೆ ಮನೋರಂಜನೆ. ಬ್ಯಾಟರ್‌ಗಳ ಆರ್ಭಟಕ್ಕೆ ಬ್ರೇಕ್‌ ಹಾಕಲು ಬೌಲರ್‌ಗಳು ಪ್ಲ್ಯಾನ್‌ ಮಾಡಿಕೊಂಡಿದ್ದಾರೆ. ಅದೆಷ್ಟೋ ಬಾರಿ ಉಭಯ ತಂಡಗಳ ಆಟಗಾರರ ಜಿದ್ದು ತಾರಕಕ್ಕೆ ಏರಿದಾಗ ಪಂದ್ಯ ಡ್ರಾ ಆಗಿ ಸೂಪರ್ ಓವರ್‌ಗಳತ್ತ ಮುಖ ಮಾಡುತ್ತದೆ. ಒಟ್ಟಾರೆ ಐಪಿಎಲ್‌ ಇತಿಹಾಸದಲ್ಲಿ ಸೂಪರ್‌ ಓವರ್‌ಗಳಿಗೆ ಸಾಕ್ಷಿಯಾದ ಪಂದ್ಯಗಳ ವಿವರ ಇಲ್ಲಿದೆ.

Thrillers A Look at Super Over Matches in IPL History

ಕೆಕೆಆರ್ vs ಆರ್‌ಆರ್‌ (ಐಪಿಎಲ್‌ 2009)

ಐಪಿಎಲ್‌ ಇತಿಹಾಸದಲ್ಲಿ ಈಗಾಗಲೇ ಸಾಕಷ್ಟು ಸೂಪರ್‌ ಓಪವರ್‌ ಪಂದ್ಯಗಳು ನಡೆದಿವೆ. ಈ ಪಟ್ಟಿಯಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳ ನಡುವೆ 2009ರಲ್ಲಿ ನಡೆದಿದ್ದ ಪಂದ್ಯ ಮುಂಚೂಣಿಯಲ್ಲಿ ನಿಲ್ಲುತ್ತದೆ. ಈ ಪಂದ್ಯವನ್ನು ಗೆಲ್ಲಲು ರಾಜಸ್ಥಾನ 16 ರನ್‌ಗಳ ಗುರಿಯನ್ನು ಸೂಪರ್‌ ಓವರ್‌ನಲ್ಲಿ ನೀಡಿತ್ತು. ಈ ಗುರಿಯನ್ನು ತಲುಪುವಲ್ಲಿ ಕೋಲ್ಕತ್ತಾ ವಿಫಲವಾಗಿದೆ.

ಸಿಎಸ್‌ಕೆ vs ಪಂಜಾಬ್‌ (2010)

ಇನ್ನು ಸಿಎಸ್‌ಕೆ ಹಾಗೂ ಪಂಜಾಬ್‌ ಕಿಂಗ್ಸ್ ತಂಡಗಳ ನಡುವೆಯೂ 2010ರಲ್ಲಿ ಒಮ್ಮೆ ಸೂಪರ್ ಓವರ್ ನಡೆದಿದೆ. ಈ ಪಂದ್ಯದಲ್ಲಿ ಉಭಯ ತಂಡಗಳು 136 ರನ್‌ ಸಿಡಿಸಿದ್ದವು. ಸೂಪರ್‌ ಓವರ್‌ನಲ್ಲಿ ಸಿಎಸ್‌ಕೆ ನೀಡಿದ್ದ 10 ರನ್‌ಗಳ ಗುರಿಯನ್ನು ಪಂಜಾಬ್ ಗೆದ್ದು ಬೀಗಿತ್ತು.

ಆರ್‌ಸಿಬಿ vs ಡೆಲ್ಲಿ (ಐಪಿಎಲ್‌ 2013)

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ ತಂಡಗಳ ನಡುವೆ 2013ರಲ್ಲಿ ನಡೆದಿದ್ದ ಪಂದ್ಯದಲ್ಲಿ ಎರಡೂ ತಂಡಗಳು ನಿಗದಿತ ಓವರ್‌ಗಳಲ್ಲಿ 152 ರನ್‌ ಸೇರಿಸಿದವು. ಸೂಪರ್‌ ಓವರ್‌ನಲ್ಲಿ ಆರ್‌ಸಿಬಿ 15 ರನ್‌ ಬಾರಿಸಿದರೆ, ಡೆಲ್ಲಿ ಕೇವಲ 11 ರನ್‌ ಸಿಡಿಸಿ ಸೋಲು ಕಂಡಿತು.

ಎಸ್‌ಆರ್‌ಎಚ್‌ vs ಆರ್‌ಸಿಬಿ (ಐಪಿಎಲ್‌ 2013)

ಈ ಪಂದ್ಯದಲ್ಲಿ ಎರಡೂ ತಂಡಗಳು 130 ರನ್‌ ಗಳನ್ನು 20 ಓವರ್‌ಗಳಲ್ಲಿ ಸಿಡಿಸಿದ್ದವು. ಫಲಿತಾಂಶ ಅರಿಯಲು ಸೂಪರ್ ಓವರ್ ಮೊರೆ ಹೋಗಲಾಯಿತು. ಈ ವೇಳೆ ಎಸ್‌ಆರ್‌ಎಚ್‌ 21 ರನ್‌ ಸಿಡಿಸಿದರೆ, ಆರ್‌ಸಿಬಿ ಕೇವಲ 15 ರನ್‌ ಸಿಡಿಸಿ ಸೋಲು ಕಂಡಿತು.

ಆರ್‌ ಆರ್‌ vs ಕೆಕೆಆರ್‌ (ಐಪಿಎಲ್‌ 2014)

2014ರಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಎರಡೂ ತಂಡಗಳು 152 ರನ್‌ ಸಿಡಿಸಿದವು. ಸೂಪರ್ ಓವರ್‌ನಲ್ಲಿ ರಾಜಸ್ಥಾನ ರಾಯಲ್ಸ್‌ 12, ಕೋಲ್ಕತ್ತಾ ನೈಟ್‌ ರೈಡರ್ಸ್‌ 11 ರನ್‌ ಸಿಡಿಸಿ ವಿರೋಚಿತ ಸೋಲು ಕಂಡಿತು.

ರಾಜಸ್ಥಾನ vs ಪಂಜಾಬ್‌ (ಐಪಿಎಲ್‌ 2015)

ರಾಜಸ್ಥಾನ ರಾಯಲ್ಸ್‌ ಹಾಗೂ ಕಿಂಗ್ಸ್ ಇಲೆವೆನ್‌ ಪಂಜಾಬ್ ತಂಡಗಳು 2015ರಲ್ಲಿ ಮುಖಾಮುಖಿ ಆದಾಗ ಉಭಯ ತಂಡಗಳು 152 ರನ್‌ ಸಿಡಿಸಿದ್ದವು. ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್‌ 16 ರನ್‌ ಸಿಡಿಸಿದ್ದರೆ, ರಾಜಸ್ಥಾನ ಕೇವಲ 6 ರನ್‌ ಕಲೆ ಹಾಕಿತ್ತು. ಪಂಜಾಬ್ ಈ ಪಂದ್ಯವನ್ನು ಸುಲಭವಾಗಿ ಗೆದ್ದಿತ್ತು.

ಮುಂಬೈ vs ಗುಜರಾತ್ (ಐಪಿಎಲ್‌ 2017)

ನಿಗದಿತ ಓವರ್‌ಗಳಲ್ಲಿ ಈ ಪಂದ್ಯದಲ್ಲಿ ಉಭಯ ತಂಡಗಳು ಸಮನಾದ ಅಂಕಗಳನ್ನು ಗಳಿಸಿದವು. ಮೊದಲು ಬ್ಯಾಟ್ ಮಾಡಿದ್ದ ಮುಂಬೈ 12 ರನ್‌ ಸಿಡಿಸಿದರೆ, ಗುಜರಾತ್‌ 6 ರನ್‌ಗಳಿ ಕುಸಿಯಿತು.

ಡೆಲ್ಲಿ vs ಕೆಕೆಆರ್‌ (ಐಪಿಎಲ್‌ 2019)

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೆಕೆಆರ್‌ ನಡುವಣ 2019 ಪಂದ್ಯ ರೋಚಕ ಘಟ್ಟಕ್ಕೆ ತಲುಪಿ ಡ್ರಾ ಆಯಿತು, ಫಲಿತಾಂಶ ಅರಿಯಲು ಸೂಪರ್‌ ಓವರ್‌ನಲ್ಲಿ ಡೆಲ್ಲಿ 4 ರನ್‌ಗಳಿಂದ ಕೆಕೆಆರ್ ತಂಡವನ್ನು ಮಣಿಸಿತು.

ಮುಂಬೈ vs ಎಸ್‌ಆರ್‌ಎಚ್‌ (ಐಪಿಎಲ್‌ 2019)

ಒಂದೇ ಆವೃತ್ತಿಯಲ್ಲಿ ಎರಡು ಸೂಪರ್‌ ಓವರ್‌ಗಳನ್ನು ಅಭಿಮಾನಿಗಳು 2019ರಲ್ಲಿ ನೋಡಿದರು. ಸೂಪರ್ ಓವರ್‌ನಲ್ಲಿ ಮುಂಬೈ 1 ರನ್‌ಗಳಿಂದ ಎಸ್‌ಆರ್‌ಎಚ್‌ ವಿರುದ್ಧ ಭರ್ಜರಿ ಜಯ ಸಾಧಿಸಿತು.

ಡೆಲ್ಲಿ vs ಪಂಜಾಬ್ (ಐಪಿಎಲ್ 2020)

ಈ ಪಂದ್ಯದಲ್ಲಿ ಉಭಯ ತಂಡಗಳು 157 ರನ್‌ ಸಿಡಿಸಿದವು. ಮೊದಲು ಬ್ಯಾಟ್ ಮಾಡಿದ ಪಂಜಾಬ್ 3 ರನ್‌ ಸಿಡಿಸಿದರೆ, ಡೆಲ್ಲಿ 4 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

ಆರ್‌ಸಿಬಿ vs ಮುಂಬೈ (ಐಪಿಎಲ್‌ 2020)

ಈ ಪಂದ್ಯದಲ್ಲಿ ಉಭಯ ತಂಡಗಳು ತಮ್ಮ ಬ್ಯಾಟಿಂಗ್‌ ಶಕ್ತಿಯನ್ನು ಅನವಾರಣ ಮಾಡಿದ್ದವು. ಈ ವೇಳೆ 201 ರನ್‌ಗಳನ್ನು ಎರಡೂ ತಂಡಗಳು ಬಾರಿಸಿದವು. ಕೊನೆಯಲ್ಲಿ ನಡೆದ ಸೂಪರ್‌ ಓವರ್‌ನಲ್ಲಿ ಆರ್‌ಸಿಬಿ 8 ರನ್‌ಗಳ ಗುರಿಯನ್ನು ಮುಂಬೈ ವಿರುದ್ಧ ಡಿಫೆಂಡ್ ಮಾಡಿಕೊಂಡಿತು.

ಕೆಕೆಆರ್‌ vs ಎಸ್‌ಆರ್‌ಎಚ್‌ (ಐಪಿಎಲ್‌ 2020)

ಈ ಪಂದ್ಯದಲ್ಲಿ ಎರಡೂ ತಂಡಗಳು 163 ರನ್‌ ಸಿಡಿಸಿದ್ದವು. ಸೂಪರ್‌ ಓವರ್‌ನಲ್ಲಿ ಕೆಕೆಆರ್‌ ನೀಡಿದ್ದ 3 ರನ್‌ಗಳ ಬದಲಿಗೆ ಎಸ್‌ಆರ್‌ಎಚ್‌ ಕೇವಲ 2 ರನ್‌ ಸೇರಿಸಿತು.

ಮುಂಬೈ vs ಪಂಜಾಬ್‌ (ಐಪಿಎಲ್‌ 2020)

ಐಪಿಎಲ್‌ ಇತಿಹಾಸದ ಅತ್ಯಂತ ರೋಚಕ ಕಾಳಗದಲ್ಲಿ ಐಪಿಎಲ್‌ 2020ರಲ್ಲಿ ನಡೆದ ಮುಂಬೈ ಹಾಗೂ ಪಂಜಾಬ್ ನಡುವಣ ಪಂದ್ಯವನ್ನು ಹೆಸರಿಸಲಾಗುತ್ತದೆ. ಈ ಪಂದ್ಯದಲ್ಲಿ ಉಭಯ ತಂಡಗಳು ನಿಗದಿತ ಓವರ್‌ಗಳಲ್ಲಿ 176 ರನ್‌ ಸಿಡಿಸಿದರೆ, ಸೂಪರ್‌ ಓವರ್‌ನಲ್ಲೂ ಸಮನಾದ ರನ್‌ ಸಿಡಿಸಿದವು. ಪರಿಣಾಮ ಎರಡನೇ ಸೂಪರ್ ಓವರ್ ಆಡಿಸಲಾಯಿತು. ಈ ವೇಳೆ ಮುಂಬೈ ನೀಡಿದ್ದ 12 ರನ್‌ ಗುರಿಯನ್ನು ಪಂಜಾಬ್ ಯಶಸ್ವಿಯಾಗಿ ಬೆನ್ನಟ್ಟಿತು.

ಡೆಲ್ಲಿ vs ಎಸ್‌ಆರ್‌ಎಚ್‌ (ಐಪಿಎಲ್ 2021)

ಈ ಪಂದ್ಯದಲ್ಲಿ ಉಭಯ ತಂಡಗಳು 159 ರನ್‌ ಸಿಡಿಸಿದವು. ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 8 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಎಸ್‌ಆರ್‌ಎಚ್‌ 7 ರನ್‌ಗಳಿಸಲಷ್ಟೇ ಶಕ್ತವಾಯಿತು.

ಐಪಿಎಲ್ 2021ರಿಂದ ಈ ವರೆಗೆ ನಡೆದ ಮೂರು ಆವೃತ್ತಿಯ ಐಪಿಎಲ್‌ನಲ್ಲಿ ಒಂದೇ ಸೂಪರ್‌ ಓವರ್‌ ನಡೆದಿಲ್ಲ.

Story first published: Friday, March 14, 2025, 7:18 [IST]
Other articles published on Mar 14, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+