Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Pro Kabaddi League: ಬುಲ್ಸ್‌ ವಿರುದ್ಧ ಟೈ ಬ್ರೇಕ್‌ ಗೆದ್ದ ಪುಣೇರಿ

ರೋಚಕತೆ ಹುಟ್ಟಿಸಿದ್ದ ಬೆಂಗಳೂರು ಬುಲ್ಸ್‌ ಹಾಗೂ ಪುಣೇರಿ ಪಲ್ಟನ್‌ ನಡುವಣ ಪಂದ್ಯ ಟೈ ಬ್ರೇಕ್‌ ವರೆಗೆ ಸಾಗಿತು. ಈ ಆವೃತ್ತಿಯ ಮೊದಲ ಟೈ ಬ್ರೇಕ್‌ರನಲ್ಲಿ ಬುಲ್ಸ್‌ ಸೋಲು ಕಂಡಿದೆ. ಈ ಮೂಲಕ ಪುಣೇರಿ ಪಲ್ಟನ್‌ ಟೈ ಬ್ರೇಕ್‌ರನಲ್ಲಿ ಅಮೋಗ ಪ್ರದರ್ಶನ ನೀಡಿ ಜಯ ಸಾಧಿಸಿತು. ಈ ಮೂಲಕ ಪುಣೇರಿ ಶುಭಾರಂಭ ಮಾಡಿದೆ. ಬುಲ್ಸ್‌ ಜಿದ್ದು ಸೋತಿದೆ.

ಬೆಂಗಳೂರು ಬುಲ್ಸ್ ಹಾಗೂ ಪುಣೇರಿ ಪಲ್ಟನ್‌ ನಡುವಣ ಪಂದ್ಯ ನಿಗದಿತ ಓವರ್‌ಗಳಲ್ಲಿ ಡ್ರಾ ಆಗಿದ್ದರಿಂದ ಟ್ರೈ ಬೇಕ್‌ಗೆ ಸಾಗಿತು. ಶುಕ್ರವಾರ 12ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್‌ನ 2ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ಹಾಗೂ ಪುಣೇರಿ ತಂಡಗಳು 32 ಅಂಕಗಳನ್ನು ಕಲೆ ಹಾಕಿದವು. ಬುಲ್ಸ್‌ ತಂಡದ ಸ್ಟಾರ್‌ ರೈಡರ್‌ ಆಕಾಶ್‌ ಶಿಂದೆ ನಿಗದಿತ 40 ನಿಮಿಷದಲ್ಲಿ 16 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 12 ಅಂಕಗಳನ್ನು ಕಲೆ ಹಾಕಿದರು. ಸ್ಟಾರ್‌ ರೈಡರ್‌ ಆಕಾಶ್‌ ಮಲಿಕ್‌ 8 ಅಂಕಗಳನ್ನು ಪಡೆದು ಮಿಂಚಿದರು.

Thrilling Tiebreaker Puneri Paltan beats Bengaluru Bulls in a nail-biting Pro Kabaddi League opener

ಉಭಯ ತಂಡಗಳು ಮೊದಲಾವಧಿಯಲ್ಲಿ ಜಿದ್ದಾಜಿದ್ದಿನ ಪ್ರದರ್ಶನ ನೀಡಿದವು. ಈ ಪಂದ್ಯದಲ್ಲಿ ಬುಲ್ಸ್‌ 13 ಅಂಕಗಳನ್ನು ಕಲೆ ಹಾಕಿದರೆ, ಪುಣೇರಿ 13 ಅಂಕಗಳನ್ನು ಕಲೆ ಹಾಕಿತು. ಈ ವೇಳೆ ಪುಣೇರಿ ರೈಡಿಂಗ್‌ನಲ್ಲಿ 9, ಬುಲ್ಸ್‌ ದಾಳಿಯಲ್ಲಿ 8 ಅಂಕಗಳನ್ನು ಕಲೆ ಹಾಕಿತು. ಇನ್ನು ಉಭಯ ತಂಡಗಳು ರಕ್ಷಣಾ ವಿಭಾಗದಲ್ಲಿ ಸಮಬಲದ ಪ್ರದರ್ಶನ ನೀಡಿದವು. ಎರಡನೇ ಅವಧಿಯಲ್ಲೂ ಇದೇ ರೀತಿಯ ಪ್ರದರ್ಶನವನ್ನು ಎರಡೂ ತಂಡಗಳು ಪ್ರದರ್ಶಿಸಿದವು. ಈ ಅವಧಿಯಲ್ಲಿ ಬುಲ್ಸ್‌ ಹಾಗೂ ಪಲ್ಟನ್‌ ತಲಾ 19 ಅಂಕಗಳನ್ನು ಕಲೆ ಹಾಕಿತು. ಈ ವೇಳೆ ಬುಲ್ಸ್‌ ಒಂದು ಬಾರಿ ಆಲೌಟ್ ಆಯಿತು. ಆದರೆ ಪುಣೇರಿ ಆಲ್‌ಔಟ್ ಆಗುವ ಭೀತಿಯಿಂದ ಪುಣೇರಿ ಪಾರಾಯಿತು.

ತಲೈವಾಸ್‌ ಜಯ

ಶುಕ್ರವಾರ ವಿಶ್ವನಾಥ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‌ನ 12 ನೇ ಸೀಸನ್‌ನ ಮೊದಲ ಪಂದ್ಯದಲ್ಲಿ ತಮಿಳು ತಲೈವಾಸ್ 38-35 ಅಂಕಗಳಿಂದ ಆತಿಥೇಯ ತೆಲುಗು ಟೈಟಾನ್ಸ್ ತಂಡವನ್ನು ಸೋಲಿಸಿತು. ಅರ್ಜುನ್‌ ದೇಶ್ವಾಲ್‌ ಅವರ (12) ಅಮೋಘ ದಾಳಿಯ ನೆರವಿನಿಂದ ತಮಿಳು ತಲೈವಾಸ್ ಜಯ ಸಾಧಿಸಿತು. ಪವನ್‌ ಶೆರವಾತ್ (9) ಉತ್ತಮ ಆಟದ ನೆರವಿನಿಂದ ತಂಡ ಗೆಲುವು ಸಾಧಿಸಿತು. ಭರತ್ 11 ಅಂಕಗಳನ್ನು ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.

Thrilling Tiebreaker Puneri Paltan beats Bengaluru Bulls in a nail-biting Pro Kabaddi League opener

ಶನಿವಾರ ನಡೆಯಲಿರುವ ತೆಲುಗು ಟೈಟಾನ್ಸ್‌ ಹಾಗೂ ಯುಪಿ ಯೋಧಾಸ್‌ ಕಾದಾಟ ನಡೆಸಲಿವೆ. ಎರಡನೇ ಪಂದ್ಯದಲ್ಲಿ ಯು ಮುಂಬಾ ಹಾಗೂ ಗುಜರಾತ್‌ ಟೈಟಾನ್ಸ್‌ ತಂಡಗಳು ಹೋರಾಟ ನಡೆಸಲಿವೆ.

Story first published: Friday, August 29, 2025, 22:42 [IST]
Other articles published on Aug 29, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+