Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ವಿಶ್ವಕಪ್‌ ವಿಜೇತ ತಂಡದ ಸದಸ್ಯ ಕನ್ನಡಿಗನಿಗೆ ನಾಗ್ಪುರನಲ್ಲಿ ಅವಮಾನ

ಭಾರತದ ಆಟಗಾರರಿಗೆ ಸ್ಟಾರ್‌ ಗಿರಿ ಇದ್ದೇ ಇರುತ್ತದೆ. ಇವರು ಬೀದಿಯಲ್ಲಿ ತಿರುಗಾಡಿದ್ರೂ ಸಹ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಆದರೆ ತೆರೆಯ ಹಿಂದೆ ಕೆಲಸ ಮಾಡುವ ಆಟಗಾರರನ್ನು ಗುರುತಿಸುವುದು ಕಷ್ಟ. ಆದರೆ ಈಗ ಸಹಾಯಕ ಸಿಬ್ಬಂದಿಗಳು ಸಹ ಎಲ್ಲರ ಆಕರ್ಷಣೆ ಕದ್ದಿದ್ದಾರೆ. ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವಲ್ಲಿ ಕನ್ನಡಿಗನ ಕೊಡುಗೆಯೂ ಅಪಾರ.

ಟಿ20 ವಿಶ್ವಕಪ್‌ ಗೆದ್ದ ತಕ್ಷಣ ಎಲ್ಲ ಆಟಗಾರರು ಈ ಸಿಬ್ಬಂದಿಯ ಗುಣಗಾನ ಮಾಡಿದರು. ಅಲ್ಲದೆ ಟೀಮ್ ಇಂಡಿಯಾದ ಪ್ರಾವೇಟ್‌ ಸೆಲೆಬ್ರೇಷನ್‌ಗಳಲ್ಲಿ ಇವರಿಗೂ ಸ್ಥಾನ. ಒಂದೇ ಒಂದು ಪಂದ್ಯವಾಡದೇ ಇದ್ದರೂ, ಸ್ಟಾರ್ ಆಟಗಾರರಿಗೆ ಟ್ರೇನ್ ಕೊಡುವ ಇವರು ನಿಜಕ್ಕೂ ಭಾರತ ತಂಡದ ಖಾಯಂ ಕೋಚಿಂಗ್ ಸಿಬ್ಬಂದಿ. ಇವರನ್ನು ಆಟಗಾರರು ಹಾಗೂ ಅಭಿಮಾನಿಗಳು ಥ್ರೋ ಡೌನ್‌ ಸ್ಪೇಷಲಿಸ್ಟ್‌ ರಾಘು ಎಂದೇ ಕರೆಯುತ್ತಾರೆ. ಇವರ ಪುರ್ತಿಯ ಹೆಸರು ರಾಘವೇಂದ್ರ. ಟೀಮ್ ಇಂಡಿಯಾದ ದಿಗ್ಗಜ ಆಟಗಾರರಿಂದ ಹಿಡಿದು, ಈಗಿನ ಯುವ ಪೀಳಿಗೆಯ ಆಟಗಾರರಿಗೆ ರಘು ಎಂದರೆ ಅಚ್ಚು ಮೆಚ್ಚು.

Throw Down Specialist karnataka Raghu s Unwavering Dedication Shines Despite Nagpur Incident

ರಾಘು ಮೈದಾನದಲ್ಲಿ ಥ್ರೋ ಡೌನ್‌ ಮಾಡುತ್ತಾ ಇದ್ದರೆ, ಇವರ ಶರವೇಗದ ಎಸೆತಗಳನ್ನು ಎದುರಿಸಲು ಬ್ಯಾಟರ್‌ಗಳು ಕಷ್ಟ ಪಡುತ್ತಾರೆ, ಈ ಸಿಬ್ಬಂದಿ ಸದ್ಯ ಭಾರತದಲ್ಲಿ ಟೀಮ್ ಇಂಡಿಯಾ ಆಟಗಾರರಷ್ಟೇ ಫೇಮಸ್‌. ಆದರೆ ನಾಗ್ಪುದಲ್ಲಿ ಕನಡ ಸಿಬ್ಬಂದಿಗೆ ಅವಮಾನ ಆಗಿದೆ.

ಆಗಿದ್ದೇನು?

ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಏಕದಿನ ಪಂದ್ಯ ನಾಗ್ಪುರದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾಗವಹಿಸಲು ಟೀಮ್ ಇಂಡಿಯಾ ಆಟಗಾರರ ಹಾಗೂ ಇಂಗ್ಲೆಂಡ್ ಆಟಗಾರರು ನಾಗ್ಪುರ ತಲುಪಿದ್ದಾರೆ. ಈ ವೇಳೆ ಟೀಮ್ ಇಂಡಿಯಾ ಕೋಚಿಂಗ್‌ ಸಿಬ್ಬಂದಿ ಬಸ್‌ನಿಂದ ಹಿಂದೆಯೇ ಇಳಿದು ಬಿಟ್ಟರು. ಬಳಿಕ ಅವರು ಹೊಟೇಲ್‌ ಒಳಗೆ ಹೋಗಲು ಮುಂದಾದರು. ಆಗ ಅಲ್ಲಿ ಬಂದೋಬಸ್ತ್‌ಗೆ ನಿಂತಿದ್ದ ಪೊಲೀಸರು ಇವರನ್ನು ತಡೆದು ಒಳಗಡೆ ಬಿಡಲಿಲ್ಲ. ಈ ವೇಳೆ ಶೂಟಿಂಗ್ ಮಾಡಲು ಬಂದ ವಿಡಿಯೋ ಜರ್ನಲಿಸ್ಟ್‌ಗಳು ಇವರು ಟೀಮ್ ಇಂಡಿಯಾದ ಭಾಗ ಎಂದು ಹೇಳಿದರು.

Throw Down Specialist karnataka Raghu s Unwavering Dedication Shines Despite Nagpur Incident

ಆದರೂ ಸಹ ಪೊಲೀಸರು ಅವರ ಮಾತಿಗೆ ಸೊಪ್ಪು ಹಾಕದೆ ತಡೆದರು. ಅಲ್ಲಿಯೇ ನಿಂತಿದ್ದ ರಘು ಮುಗ್ಳನಗುತ್ತಾ ಮುಂದೆ ಸಾಗಿದರು. ಬಳಿಕ ತಂಡದೊಂದಿಗೆ ಹೊಟೇಲ್‌ ಒಳಗಡೆ ಹೊರಟರು. ಆಗ ಪೊಲೀಸರು ತಾವು ಮಾಡಿದ ತಪ್ಪಿಗೆ ಪ್ರಾಯಶ್ಚಾತ ಪಡುವಂತೆ ಮುಖ ಮಾಡಿದ್ದರು. ಉತ್ತರ ಕನ್ನಡದ ಅಪ್ಪಟ ಪ್ರತಿಭೆ ರಘು ಟೀಮ್ ಇಂಡಿಯಾದ ಪರ ಹಲವು ವರ್ಷಗಳಿಂದ ಥ್ರೋಡೌನ್‌ ಸ್ಪೇಷಲಿಸ್ಟ್‌ ಆಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

ಫೆಬ್ರವರಿ 6ರಿಂದ ಭಾರತ ಹಾಗೂ ಇಂಗ್ಲೆಂಡ್‌ ವಿರುದ್ಧ ಏಕದಿನ ಸರಣಿಯ ಮೊಲದ ಪಂದ್ಯ ಆರಂಭವಾಗಲಿದೆ. ಈ ಸರಣಿಯ ಬಳಿಕ ಟೀಮ್ ಇಂಡಿಯಾ ದುಬೈ ಪ್ರಯಾಣ ಬೆಳಸಲಿದ್ದು, ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾಗವಹಿಸಲಿದೆ.

Story first published: Tuesday, February 4, 2025, 16:46 [IST]
Other articles published on Feb 4, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+