Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2020ರ ಟಿ20 ವಿಶ್ವಕಪ್ ಮುಂದೂಡಿಕೆ: ಟಿಕೆಟ್ ಕೊಂಡವರ ಕತೆಯೇನು?!

Tickets bought for postponed T20 World Cup will remain valid if Australia hosts it in 2021

ಸಿಡ್ನಿ, ಜುಲೈ 21: ಕೊರೊನಾ ಆತಂಕದ ಕಾರಣ ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದ ಟಿ20 ವಿಶ್ವಕಪ್ ಟೂರ್ನಿಯನ್ನು ಮುಂದೂಡಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಸೋಮವಾರ ನಿರ್ಧಾರ ಪ್ರಕಟಿಸಿತ್ತು. ಹಾಗಾದರೆ 2020ರ ಟಿ20 ವಿಶ್ವಕಪ್‌ಗೆ ಈಗಾಗಲೇ ಟಿಕೆಟ್ ಕೊಂಡಿರುವವರ ಕತೆಯೇನು?

ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದ 2020ರ ಟಿ20 ವಿಶ್ವಕಪ್, ಭಾರತದ ಬದಲು ಆಸ್ಟ್ರೇಲಿಯಾದಲ್ಲೇ 2021ರಲ್ಲಿ ನಡೆದರೆ 2020ರ ವಿಶ್ವಕಪ್‌ಗಾಗಿ ಕೊಂಡ ಟಿಕೆಟ್‌ಗಳು ಮಾನ್ಯ ಇರಲಿದೆ. ಆದರೆ 2021ರ ವಿಶ್ವಕಪ್ ಯಾವ ದೇಶದಲ್ಲಿ ನಡೆಯಲಿದೆ ಅನ್ನೋದು ಇನ್ನೂ ಐಸಿಸಿ ಸ್ಪಷ್ಟಪಡಿಸಿಲ್ಲ.

ಒಂದು ವೇಳೆ ಟಿ20 ವಿಶ್ವಕಪ್ 2022ಕ್ಕೆ ಮುಂದೂಡಲ್ಪಟ್ಟರೆ, ಟಿಕೆಟ್ ಕೊಂಡವರ ಸಂಪೂರ್ಣ ಹಣವನ್ನು ಹಿಂದಿರುಗಿಸಲಾಗುವುದು ಎಂದು ಐಸಿಸಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಸೋಮವಾರ ಟಿ20 ವಿಶ್ವಕಪ್ ಮುಂದೂಡಿರುವುದನ್ನು ಘೋಷಿಸಲುತ್ತಲೇ ಐಸಿಸಿ, ಈಗಾಗಲೇ ಟಿಕೆಟ್ ಕೊಂಡವರಿಗೆ ಈ ಮಾಹಿತಿ ಪ್ರಕಟಿಸಿತ್ತು.

2020ರ ಟಿ20 ವಿಶ್ವಕಪ್ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯುವುದರಲ್ಲಿತ್ತು. ಆದರೆ ಕೊರೊನಾ ಭೀತಿ ಹೆಚ್ಚುತ್ತಿರುವುದರಿಂದ ಪ್ರತಿಷ್ಠಿತ ಟೂರ್ನಿ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ. ಸದ್ಯದ ಮಾಹಿತಿಯ ಪ್ರಕಾರ 2021ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿ 2021ರ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿದೆ. ಫೈನಲ್ ಪಂದ್ಯ 2021ರ ನವೆಂಬರ್ 14ರಂದು ನಡೆಯಲಿದೆ.

Story first published: Tuesday, July 21, 2020, 20:23 [IST]
Other articles published on Jul 21, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+