ಇಂಡಿಯನ್ ಪ್ರೀಮಿಯರ್ ಲೀಗ್‌ನ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಳ್ಳುವ ಹಂತಕ್ಕೆ ಬಂದಿವೆ. ಈ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್‌ಗಳಿಗೆ, ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ವಿಶೇಷ ಪ್ರಶಸ್ತಿ ನೀಡುತ್ತಾರೆ. ಈ ವೇಳೆ ಆರೆಂಜ್ ಕ್ಯಾಪ್ ಮೇಲೆ ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್ ಒಬ್ಬರು ಕಣ್ಣು ನೆಟ್ಟಿದ್ದರು. ಆದರೆ ಅವರ ಪ್ರಯಾಣ ಅರ್ಧದಲ್ಲೇ ಮುಕ್ತಾಯವಾಗಿದೆ.
ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಮಂಗಳವಾರ ನವದೆಹಲಿಯಲ್ಲಿ ನಡೆಯಿತು. ಇದು ರಾಯಲ್ಸ್ ತಂಡದ ಲೀಗ್ ಹಂತದ ಕೊನೆಯ ಪಂದ್ಯವಾಗಿತ್ತು. ರಾಜಸ್ಥಾನ ಗೆಲುವಿನೊಂದಿಗೆ ಲೀಗ್‌ಗೆ ವಿದಾಯ ಹೇಳಿದೆ. ಈ ತಂಡದ ಸ್ಟಾರ್ ಆಟಗಾರ ಯಶಸ್ವಿ ಜೈಸ್ವಾಲ್ ಈ ಪಂದ್ಯದಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ಬಿಗ್ ಇನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ. ಈ ಮೂಲಕ ಯಶಸ್ವಿ ಜೈಸ್ವಾಲ್ ಲೀಗ್‌ಗೆ ವಿದಾಯ ಹೇಳಿದ್ದಾರೆ.

ಯಶಸ್ವಿ ಜೈಸ್ವಾಲ್ ಆರೆಂಜ್ ಕ್ಯಾಪ್ ಮೇಲೆ ಕಣ್ಣು ನೆಟ್ಟ ಆಟಗಾರರಲ್ಲಿ ಒಬ್ಬರು. ಕಳೆದ ಕೆಲವು ಆವೃತ್ತಿಗಳಲ್ಲಿ ಇವರು ಐಪಿಎಲ್‌ನಲ್ಲಿ ಭಾಗವಹಿಸುತ್ತಿದ್ದರೂ ಒಮ್ಮೆಯೂ ಆರೆಂಜ್ ಕ್ಯಾಪ್ ಗೆದ್ದಿರಲಿಲ್ಲ. ಆದರೆ 18ನೇ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ಗೆಲ್ಲುವ ಕನಸು ಕಂಡಿದ್ದರು. ಆದರೆ ಈ ಆಸೆ ಸಹ ಅರ್ಧಕ್ಕೆ ನಿಂತಿದೆ. ಯಶಸ್ವಿ ಜೈಸ್ವಾಲ್ ಈ ಲೀಗ್‌ನಲ್ಲಿ ಆಡಿದ 14 ಪಂದ್ಯಗಳಲ್ಲಿ 559 ರನ್ ಸಿಡಿಸಿದ್ದಾರೆ. ಈ ಮೂಲಕ ಇವರ ತಂಡ ಲೀಗ್ ಹಂತದಲ್ಲೇ ಹೊರ ಬಿದ್ದಿದೆ. ಹೀಗಾಗಿ ಇವರಿಗೆ ಮುಂದಿನ ಪಂದ್ಯಗಳನ್ನು ಆಡುವ ಅವಕಾಶ ಸಿಗುವುದಿಲ್ಲ. ಸದ್ಯ ಅತಿ ಹೆಚ್ಚು ರನ್ ಸಾಧಕರ ಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ಸಾಯಿ ಸುದರ್ಶನ್ ಅಗ್ರ ಸ್ಥಾನದಲ್ಲಿದ್ದಾರೆ. ಇವರು 12 ಪಂದ್ಯಗಳಲ್ಲಿ 617 ರನ್ ಸಿಡಿಸಿದ್ದಾರೆ.
ಸಾಯಿ ಸುದರ್ಶನ್ (ಜಿಟಿ), 617 ರನ್
ಶುಭಮನ್ ಗಿಲ್ (ಜಿಟಿ), 601 ರನ್
ಯಶಸ್ವಿ ಜೈಸ್ವಾಲ್ (ಆರ್‌ಆರ್), 559 ರನ್
ಸೂರ್ಯಕುಮಾರ್ ಯಾದವ್ (ಎಂಐ), 510 ರನ್
ವಿರಾಟ್ ಕೊಹ್ಲಿ (ಆರ್‌ಸಿಬಿ), 505 ರನ್

ಇನ್ನು ಪ್ರಸಕ್ತ ಲೀಗ್‌ನಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ಕರ್ನಾಟಕದ ಪ್ರಸಿದ್ಧ ಕೃಷ್ಣಾ ಅವರ ಸದ್ಯ ಅತಿ ಹೆಚ್ಚು ವಿಕೆಟ್ ಪಡೆದ ಸಾಧಕರ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಇವರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನೂರ್ ಅಹ್ಮದ್ ಜಿದ್ದಾಜಿದ್ದಿನ ಫೈಟ್ ನೀಡುತ್ತಿದ್ದಾರೆ. ಉಭಯ ಆಟಗಾರರು ಲೀಗ್‌ನಲ್ಲಿ ಈಗಾಗಲೇ 21 ವಿಕೆಟ್ ಕಬಳಿಸಿದ್ದಾರೆ. ಆದರೆ ಪ್ರಸಿದ್ಧ್ ಕಡಿಮೆ ಪಂದ್ಯವನ್ನು ಆಡಿದ್ದರಿಂದ ಸದ್ಯ ಪರ್ಪಲ್ ಕ್ಯಾಪ್ ಅವರ ಬಳಿ ಇದೆ.
ಆರ್‌ಸಿಬಿ ತಂಡದ ಜೋಶ್ ಹ್ಯಾಜಲ್‌ವುಡ್ ಮೇ 23 ರಂದು ಅಂಗಳಕ್ಕೆ ಇಳಿಯುವ ಸಾಧ್ಯತೆ ಇದೆ. ಈ ವೇಳೆ ಇವರು ಈ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆಯುವಲ್ಲಿ ಸಫಲರಾದರೆ, ಇವರ ತಲೆಯ ಮೇಲೆ ಪರ್ಪಲ್ ಕ್ಯಾಪ್ ಇರಲಿದೆ.
ಪ್ರಸಿದ್ಧ್ ಕೃಷ್ಣ (ಜಿಟಿ), 21 ವಿಕೆಟ್
ನೂರ್ ಅಹ್ಮದ್ (ಸಿಎಸ್‌ಕೆ), 21 ವಿಕೆಟ್
ಜೋಶ್ ಹ್ಯಾಜಲ್‌ವುಡ್ (ಆರ್‌ಸಿಬಿ), 18 ವಿಕೆಟ್
ಟ್ರೆಂಟ್ ಬೌಲ್ಟ್ (ಎಂಐ), 18 ವಿಕೆಟ್
ವರುಣ್ ಚಕ್ರವರ್ತಿ (ಕೆಕೆಆರ್), 17 ವಿಕೆಟ್.