IND vs SA: ಹಾರ್ದಿಕ್ ಪಾಂಡ್ಯ ಬಿರುಸಿನ ಬ್ಯಾಟಿಂಗ್; ದ.ಆಫ್ರಿಕಾಕ್ಕೆ ಸವಾಲಿನ ಮೊತ್ತ
ಅಹಮದಾಬಾದ್: ಭರವಸೆಯ ಬ್ಯಾಟರ್ ತಿಲಕ್ ವರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಅವರ ಬಿರುಸಿನ ಬ್ಯಾಟಿಂಗ್ ಪ್ರದರ್ಶನದ ಬಲದಿಂದ ಟೀಮ್ ಇಂಡಿಯಾ ಐದನೇ ಟಿ20 ಪಂದ್ಯದಲ್ಲಿ ಭಾರತ ಸವಾಲಿನ ಗುರಿಯನ್ನು ದಕ್ಷಿಣ ಆಫ್ರಿಕಾ ತಂಡಕ್ಕೆ ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭ ಭರ್ಜರಿಯಾಗಿತ್ತು. ಉಪನಾಯಕ ಶುಭಮನ್ ಗಿಲ್ ಅವರ ಅನುಪಸ್ಥಿತಿಯಲ್ಲಿ ತಂಡ ಸೇರಿದ ಸಂಜು ಸ್ಯಾಮ್ಸನ್ ಅವಕಾಶವನ್ನು ಬಳಸಿಕೊಂಡರು. ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಜೋಡಿ ಮೊದಲ ವಿಕೆಟ್‌ಗೆ 5.4 ಓವರ್‌ಗಳಲ್ಲಿ 63 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 34 ರನ್ ಬಾರಿಸಿ ಕಾರ್ಬಿನ್ ಬಾಷ್ ಅವರು ಎಸೆದ ಬೌನ್ಸರ್ ಎಸೆತವನ್ನು ತಪ್ಪಾಗಿ ಅರಿತು ಕ್ವಿಂಟನ್ ಡಿಕಾಕ್ ಅವರಿಗೆ ಕ್ಯಾಚ್ ನೀಡಿದರು.

ಸುಮಾರು ಒಂದು ವರ್ಷದ ಬಳಿಕ ಟಿ20 ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಆಡುವ ಅವಕಾಶವನ್ನು ಪಡೆದ ಸಂಜು ಸ್ಯಾಮ್ಸನ್ ಉತ್ತಮ ಆಟದ ಪ್ರದರ್ಶನ ನೀಡಿದರು. ಇವರು 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 37 ರನ್ ಸಿಡಿಸಿ ಔಟ್ ಆದರು. ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ಫಾರ್ಮ್ ಕಂಡು ಕೊಳ್ಳುವಲ್ಲಿ ಎಡವಿದರು. 5ನೇ ಪಂದ್ಯದಲ್ಲಿ ಸೂರ್ಯ 5 ರನ್ ಬಾರಿಸಿ ಪೆವಿಲಿಯನ್ ಸೇರಿದರು.
ಹಾರ್ದಿಕ್ ಅಬ್ಬರ
115 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಟೀಮ ಇಂಡಿಯಾಕ್ಕೆ ತಿಲಕ್ ವರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಜೊಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ದಕ್ಷಿಣ ಆಫ್ರಿಕಾದ ಬೌಲರ್‌ಗಳನ್ನು ಕಾಡಿ ರನ್ ಮಹಲ್ ಕಟ್ಟಿದರು. ಈ ಜೋಡಿ 44 ಎಸೆತಗಳಲ್ಲಿ 105 ರನ್ ಸೇರಿಸಿತು. ಟೀಮ್ ಇಂಡಿಯಾದ ಭರವಸೆಯ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 25 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಬ್ಬರಿಸಿದರು. ಈ ವೇಳೆ ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 252 ಆಗಿದೆ.
ತಿಲಕ್ ವರ್ಮಾ ಅರ್ಧಶತಕ
ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರ ತಿಲಕ್ ವರ್ಮಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 10 ಬೌಂಡರಿ, 1 ಸಿಕ್ಸರ್ ನೆರವಿನಿಂದ 73 ರನ್ ಸಿಡಿಸಿದರು. ಶಿವಂ ದುಬೆ ಅಜೇಯ 10 ರನ್ ಬಾರಿಸಿದರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 231 ರನ್ ಸೇರಿಸಿತು. ದಕ್ಷಿಣ ಆಫ್ರಿಕಾದ ಪರ ಕಾರ್ಬಿನ್ ಬಾಷ್ 2 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications