Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Tilak Varma: ಏಕದಿನ ಕ್ರಿಕೆಟ್‌ನಲ್ಲಿ ಶ್ರೇಯಸ್ ಅಯ್ಯರ್ ಸ್ಥಾನಕ್ಕೆ ತಿಲಕ್ ಪೈಪೋಟಿ!

ಭಾರತ ಏಕದಿನ ತಂಡಕ್ಕೆ ಹೊಸ ಭವಿಷ್ಯದ ಸೂಪರ್‌ಸ್ಟಾರ್ ಮತ್ತು ಮ್ಯಾಚ್ ವಿನ್ನರ್ ಆಟಗಾರ ಸಿಕ್ಕಿದ್ದಾರೆ. ಎದುರಾಳಿ ತಂಡದ ಬೌಲರ್‌ಗಳಿಗೆ ನಡುಕ ಹುಟ್ಟಿಸುವ ಸ್ಪೋಟಕ ಬ್ಯಾಟರ್. ಭಾರತದ ಏಕದಿನ ತಂಡದಲ್ಲಿ ಖಾಯಂ ನಂಬರ್-4 ಬ್ಯಾಟರ್ ಆಗಲು ಅರ್ಹರಾಗಿದ್ದಾರೆ. ಈ ಸ್ಪೋಟಕ ಬ್ಯಾಟರ್ ಪ್ರದರ್ಶನ ಶ್ರೇಯಸ್ ಅಯ್ಯರ್ ಸ್ಥಾನಕ್ಕೆ ಕುತ್ತು ತಂದಿದೆ. ಭಾರತದ ಈ ಪ್ರತಿಭಾವಂತ ಬ್ಯಾಟರ್ ಬೇರೆ ಯಾರೂ ಅಲ್ಲ, ತಿಲಕ್ ವರ್ಮಾ. ತಿಲಕ್ ವರ್ಮಾ ಇತ್ತೀಚೆಗೆ ಬಿರುಸಿನ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಚೆನ್ನೈನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ತಿಲಕ್ ವರ್ಮಾ ಇಂಗ್ಲೆಂಡ್ ಬೌಲರ್‌ಗಳಿಗೆ ಬೆವರಿಳಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ತಿಲಕ್ ವರ್ಮಾ ಬ್ಯಾಟಿಂಗ್ ಮಾಡಿದ ರೀತಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೆ, ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ನಂತರ ಮತ್ತೊಬ್ಬ ಜವಾಬ್ದಾರಿಯುವ ಬ್ಯಾಟಿಂಗ್ ಮಾಡುವ ಆಟಗಾರ ತಿಲಕ್ ರೂಪದಲ್ಲಿ ಸಿಕ್ಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮತ್ತೊಂದೆಡೆ ಏಕದಿನ ಕ್ರಿಕೆಟ್‌ನಲ್ಲಿ ಶ್ರೇಯಸ್ ಅಯ್ಯರ್ ಸ್ಥಾನವನ್ನು ತಿಲಕ್ ಆಕ್ರಮಿಸಿಕೊಳ್ಳುವುದರಲ್ಲಿ ಎರಡನೇ ಮಾತಿಲ್ಲ.

Tilak Varma competes for Shreyas Iyer place in ODI cricket

ತಿಲಕ್ ವರ್ಮಾ ಅವರ ಅಜೇಯ 72 ರನ್‌ಗಳ ಇನ್ನಿಂಗ್ಸ್‌ನ ಆಧಾರದ ಮೇಲೆ ಭಾರತವು ಎರಡನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 2 ವಿಕೆಟ್‌ಗಳಿಂದ ಸೋಲಿಸಿತು. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಈಗ 2-0 ಮುನ್ನಡೆ ಸಾಧಿಸಿದೆ. ತಿಲಕ್ ವರ್ಮಾ 55 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ ಅಜೇಯ 72 ರನ್ ಗಳಿಸಿದರು. ತಿಲಕ್ ವರ್ಮಾ ಅವರು ತಮ್ಮ ಕೊನೆಯ 4 ಟಿ20 ಅಂತರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ 107*, 120*, 19* ಮತ್ತು 72* ರನ್ ಗಳಿಸಿದ್ದಾರೆ. ಅವರ ಸಾಮರ್ಥ್ಯದಿಂದಾಗಿ, ಏಕದಿನ ತಂಡದಲ್ಲಿ ತಿಲಕ್ ವರ್ಮಾ ಅವರನ್ನು ನಂಬರ್ -4 ಬ್ಯಾಟಿಂಗ್ ಸ್ಥಾನದಲ್ಲಿ ಆಡಿಸಬೇಕು ಎಂಬ ಸಲಹೆಗಳು ಬರುತ್ತಿವೆ.

ಟಿ20 ನಂತರ ತಿಲಕ್ ವರ್ಮಾ ಏಕದಿನ ಮಾದರಿಯಲ್ಲಿ ರನ್ ಗಳಿಸಬಹುದು. ಕ್ಷಣಮಾತ್ರದಲ್ಲಿ ಪಂದ್ಯವನ್ನು ಬದಲಿಸುವುದರಲ್ಲಿ ತಿಲಕ್ ವರ್ಮಾ ನಿಪುಣರು. ತಿಲಕ್ ವರ್ಮಾ ಅತ್ಯಂತ ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಏಕದಿನ ಕ್ರಿಕೆಟ್‌ನಲ್ಲಿ ತಿಲಕ್ ನಂಬರ್-4ರಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಭಾರತಕ್ಕೆ ನೆರವಾಗಬಹುದು. ಆದರೆ, ಈಗಾಗಲೇ ನಂಬರ್-4ರಲ್ಲಿ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಒಂದು ವೇಳೆ ಏಕದಿನ ಭಾರತ ತಂಡದಲ್ಲಿ ತಿಲಕ್ ವರ್ಮಾ ಸ್ಥಾನ ಪಡೆದರೆ ಶ್ರೇಯಸ್‌ ಅಯ್ಯರ್ ಜೊತೆಗೆ ಪೈಪೋಟಿ ಇರಲಿದೆ.

ಭಾರತ ಏಕದಿನ ತಂಡದಿಂದ ತಿಲಕ್ ವರ್ಮಾ ಅವರನ್ನು ದೀರ್ಘಕಾಲ ದೂರ ಇಡುವುದು ತುಂಬಾ ಕಷ್ಟ. ತಿಲಕ್ ವರ್ಮಾ 21 ಡಿಸೆಂಬರ್ 2023 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಪರ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ತಿಲಕ್ ವರ್ಮಾ ಇದುವರೆಗೆ 4 ಏಕದಿನ ಪಂದ್ಯಗಳಲ್ಲಿ ಒಂದು ಅರ್ಧಶತಕ ಸೇರಿದಂತೆ 68 ರನ್ ಗಳಿಸಿದ್ದಾರೆ. ಶ್ರೇಯಸ್ ಅಯ್ಯರ್ ಏಕದಿನ ಕ್ರಿಕೆಟ್‌ನಲ್ಲಿ ಭಾರತ ಪರ 4ನೇ ಸ್ಥಾನದಲ್ಲಿ ಬ್ಯಾಟ್ ಮಾಡುತ್ತಾರೆ. ಆದರೆ ಮುಂಬರುವ ದಿನಗಳಲ್ಲಿ ಅವರು ತಿಲಕ್ ವರ್ಮಾರಿಂದ ಕಠಿಣ ಪೈಪೋಟಿ ಎದುರಿಸಲಿದ್ದಾರೆ.

ತಿಲಕ್ ವರ್ಮಾ ಟೀಮ್ ಇಂಡಿಯಾ ಪರ 22 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 58.92 ಸರಾಸರಿ ಮತ್ತು 156.07 ಸ್ಟ್ರೈಕ್ ರೇಟ್‌ನಲ್ಲಿ 57 ಬೌಂಡರಿಗಳು ಮತ್ತು 41 ಸಿಕ್ಸರ್‌ಗಳನ್ನು ಒಳಗೊಂಡಂತೆ 707 ರನ್ ಗಳಿಸಿದ್ದಾರೆ. ಈ ವೇಳೆ 2 ಶತಕ ಹಾಗೂ 3 ಅರ್ಧ ಶತಕ ಬಾರಿಸಿದ್ದಾರೆ. ಇದಲ್ಲದೇ ತಿಲಕ್ ವರ್ಮಾ 4 ಏಕದಿನ ಪಂದ್ಯಗಳಲ್ಲಿ 22.67ರ ಸರಾಸರಿಯಲ್ಲಿ 68 ರನ್ ಗಳಿಸಿದ್ದಾರೆ. ತಿಲಕ್ ವರ್ಮಾ ಏಕದಿನ ಕ್ರಿಕೆಟ್‌ನಲ್ಲಿ 1 ಅರ್ಧಶತಕ ಗಳಿಸಿದ್ದಾರೆ. ತಿಲಕ್ ವರ್ಮಾ 38 ಐಪಿಎಲ್ ಪಂದ್ಯಗಳಲ್ಲಿ 146.33 ಸ್ಟ್ರೈಕ್ ರೇಟ್‌ನಲ್ಲಿ 90 ಬೌಂಡರಿ ಮತ್ತು 58 ಸಿಕ್ಸರ್‌ಗಳನ್ನು ಒಳಗೊಂಡಂತೆ 1156 ರನ್ ಗಳಿಸಿದ್ದಾರೆ. ತಿಲಕ್ ವರ್ಮಾ ಐಪಿಎಲ್‌ನಲ್ಲಿ 6 ಅರ್ಧ ಶತಕ ಸಿಡಿಸಿದ್ದಾರೆ. ಐಪಿಎಲ್‌ನಲ್ಲಿ ತಿಲಕ್ ವರ್ಮಾ ಅವರ ಅತ್ಯುತ್ತಮ ಸ್ಕೋರ್ 84 ರನ್.

Story first published: Sunday, January 26, 2025, 12:57 [IST]
Other articles published on Jan 26, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+