For Quick Alerts
ALLOW NOTIFICATIONS  
For Daily Alerts
 

Tilak Varma: ಟಿ20 ಕ್ರಿಕೆಟ್‌ನಲ್ಲಿ ತಿಲಕ್‌ ಅಜೇಯ ದಾಖಲೆ: ಮತ್ತೊಂದು ರೆಕಾರ್ಡ್‌ ನಿರ್ಮಿಸಿದ ವರ್ಮಾ

ತಿಲಕ್ ವರ್ಮಾ ಚೆನ್ನೈನಲ್ಲಿ ಆಡಿದ ಇನಿಂಗ್ಸ್‌ ನೋಡಿದರೆ, ಅವರ ಎಷ್ಟು ಪಕ್ವವಾಗಿದ್ದಾರೆ ಎಂಬುದು ತಿಳಿಯುತ್ತದೆ. ಒತ್ತಡದ ಸನ್ನಿವೇಶದಲ್ಲಿ ಬ್ಯಾಟ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ತಿಲಕ್, ಎದುರಾಳಿ ಬೌಲರ್‌ಗಳನ್ನು ಕಾಡಿದ್ದಾರೆ. ಕೆಳ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಜೊತೆಗೂಡಿ ಭಾರತ ತಂಡ್ಕಕೆ ಗೆಲುವಿನ ಮಾಲೆ ತೊಡಿಸಿದ ತಿಲಕ್‌ ಎರಡನೇ ಟಿ20 ಪಂದ್ಯದಲ್ಲಿ ಅಬ್ಬರಿಸಿದರು. ಇವರ ಅಜೇಯ 77 ರನ್‌ಗಳ ಬಲದಿಂದ ಟೀಮ್ ಇಂಡಿಯಾ ಎರಡು ವಿಕೆಟ್‌ ಜಯ ಸಾಧಿಸಿತು. ಈ ಮೂಲಕ ತಿಲಕ್ ವಿಶೇಷ ದಾಖಲೆ ಬರೆದಿದ್ದಾರೆ.

ಚೆನ್ನೈನಲ್ಲಿ ತಮ್ಮ ನೈಜ ಆಟವನ್ನು ಆಡಿದ ತಿಲಕ್ ಅಬ್ಬರಿಸಿದರು. ಇವರು ಶನಿವಾರ ನಡೆದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಒತ್ತಡವನ್ನೇಲ್ಲಾ ತಮ್ಮ ಹೆಗಲ ಮೇಲೆ ಹಾಕಿಕೊಂಡು ಬ್ಯಾಟ್ ಮಾಡಿದರು. ಎದುರಾಳಿಗಳು ನೀಡಿದ್ದ ಸ್ಪರ್ಧಾತ್ಮಕ ಗುರಿಯನ್ನು ಹಿಂಬಾಲಿಸುವಗ ಸ್ಟಾರ್ ಆಟಗಾರರು ರನ್‌ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಆದರೆ ತಿಲಕ್ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧರವಾದರು. ಈ ಮೂಲಕ ವಿಶೇಷ ಸಾಧನೆಯನ್ನು ಬರೆದಿದ್ದಾರೆ.

Tilak Varma s Unbeaten 77 in Chennai Leads Team India to Victory Setting a New T20I Record

ತಿಲಕ್ ವರ್ಮಾ ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಔಟ್ ಆಗದೇ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಹೌದು ತಿಲಕ್‌ ವರ್ಮಾ ಕಳೆದ ನಾಲ್ಕು ಅಂತಾರಾಷ್ಟ್ರೀಯ ಇನಿಂಗ್ಸ್‌ಗಳಲ್ಲಿ ಔಟ್ ಆಗದೇ ಬ್ಯಾಟ್ ಮಾಡಿದ್ದಾರೆ. ಈ ಮೂಲಕ ವಿಶೇಷ ದಾಖಲೆ ಬರೆದಿದ್ದಾರೆ. ಎರಡನೇ ಟಿ20 ಪಂದ್ಯದಲ್ಲಿ ಅಜೇಯ 72 ರನ್‌ ಬಾರಿಸಿದ ತಿಲಕ, ಒಟ್ಟು ಔಟ್ ಆಗದೆ 318 ರನ್‌ ಗಳಿಸಿದ್ದಾರೆ.

ಅಜೇಯ ಓಟ

ತಿಲಕ್ ವರ್ಮಾ ಕಳೆದ ನಾಲ್ಕು ಟಿ20 ಇನ್ನಿಂಗ್ಸ್‌ಗಳಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ದಕ್ಷಿಣ ಆಫ್ರಿಕಾ ಪ್ರವಾಸದ ಕೊನೆಯ ಎರಡು ಪಂದ್ಯಗಳಲ್ಲಿ ಅಜೇಯ ಶತಕ ಬಾರಿಸಿದ್ದರು. ಅಲ್ಲದೆ ಮೊದಲ ಪಂದ್ಯದಲ್ಲಿ ಅಜೇಯ 19 ರನ್‌ ಸಿಡಿಸಿದ್ದರು. ತಿಲಕ್‌ ಅಜೇಯವಾಗಿ 107, 120, 19 ಮತ್ತು 72 ರನ್ ಗಳಿಸಿ ಅಜೇಯರಾಗಿ 318 ರನ್ ಗಳಿಸಿದ್ದಾರೆ.

Tilak Varma s Unbeaten 77 in Chennai Leads Team India to Victory Setting a New T20I Record

ತಿಲಕ್ ಅವರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪೂರ್ಣ ಸದಸ್ಯರ ತಂಡದ ಆಟಗಾರನಾಗಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ವಿಷಯದಲ್ಲಿ ತಿಲಕ್, ನ್ಯೂಜಿಲೆಂಡ್ ಆಟಗಾರ ಮಾರ್ಕ್ ಚಾಪ್ಮನ್ ಅವರ ದಾಖಲೆ ಅಳಿಸಿದ್ದಾರೆ. ಚಾಪ್ಮನ್‌ 271 ರನ್‌ಗಳನ್ನು ಅಜೇಯರಾಗಿ ಕಲೆ ಹಾಕಿದ್ದರು.

ತಿಲಕ್‌ ಹೇಳಿದ್ದೇನು?

ಶುಕ್ರವಾರ ಪಿಚ್‌ ನೋಡಿದ ಮೇಲೆ ನಾನು ಕೋಚ್‌ ಬಳಿ ಹೋಗಿದ್ದಾಗ, ಅವರು ವಿಕೆಟ್‌ ಮೇಲೆ ಡಬಲ್‌ ಬೌನ್ಸ್ ಇರುವುದಾಗಿ ತಿಳಿಸಿದರು. ಪರಿಸ್ಥಿತಿಗೆ ತಕ್ಕನಾಗಿ ಬ್ಯಾಟ್ ಮಾಡುವಂತೆ ಸಲಹೆ ನೀಡಿದರು. ಎಡಗೈ, ಬಲಗೈ ಬ್ಯಾಟರ್‌ಗಳ ಗೊಂದಲ ಬೌಲರ್‌ಗಳಿಗೆ ಆಗುವುದು ಸಾಮಾನ್ಯ. ಅವರ ಲೈನ್‌ ಹಾಳಾಗುತ್ತದೆ. ನೆಟ್ಸ್‌ನಲ್ಲಿ ಸತತ ಪರಿಶ್ರಮ ಪಟ್ಟವಾಗಿ ನಮಗೆ ಈ ಗೆಲುವು ಲಭಿಸಿದೆ ಎಂದು ತಿಳಿಸಿದ್ದಾರೆ. ಇವರ ಅಮೋಘ ಆಟಕ್ಕೆ ಪಂದ್ಯ ಶ್ರೇಷ್ಠ ಗರಿ ಸಂದಿದೆ.

Story first published: Sunday, January 26, 2025, 9:00 [IST]
Other articles published on Jan 26, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+