Tilak Varma: ಹಲವು ವರ್ಷಗಳಿಂದ ಭಾರತ ತಂಡ ಹುಡುಕಾಡುತ್ತಿದ್ದ ಆಟಗಾರ ಈತ!
ತಿಲಕ್ ವರ್ಮಾ, ಸದ್ಯ ಭಾರತೀಯ ಕ್ರಿಕೆಟ್‌ನಲ್ಲಿ ಭರವಸೆಯ ಮತ್ತೊಂದು ಹೆಸರು. 20 ವರ್ಷದ ಈ ಯುವ ಕ್ರಿಕೆಟಿಗ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಆಡಿದ ಚೊಚ್ಚಲ ಪಂದ್ಯದಲ್ಲೇ 22 ಎಸೆತಗಳಲ್ಲಿ 39 ರನ್ ಗಳಿಸಿ ಗಮನ ಸೆಳೆದರು.
ಎರಡನೇ ಟಿ20 ಪಂದ್ಯದಲ್ಲಿ 41 ಎಸೆತಗಳಲ್ಲಿ 51 ರನ್ ಗಳಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಚೊಚ್ಚಲ ಅರ್ಧಶತಕ ಗಳಿಸಿದರು, ಮೂರನೇ ಟಿ20 ಪಂದ್ಯದಲ್ಲಿ ಅಜೇಯ 49 ರನ್ ಗಳಿಸಿ ಮಿಂಚಿದರು. 5ನೇ ಏಕದಿನ ಪಂದ್ಯದಲ್ಲಿ ಕೂಡ 27 ರನ್ ಗಳಿಸಿದ್ದಲ್ಲದೆ, ತಮ್ಮ ಬೌಲಿಂಗ್‌ನ ಎರಡನೇ ಎಸೆತದಲ್ಲೇ ಒಂದು ವಿಕೆಟ್ ಪಡೆದು ಮಿಂಚಿದರು.

5 ಪಂದ್ಯಗಳಿಂದ 57.67 ಸರಾಸರಿಯಲ್ಲಿ 140.65 ಸ್ಟ್ರೈಕ್‌ರೇಟ್‌ನಲ್ಲಿ 173 ರನ್ ಗಳಿಸುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಒಂದು ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಲ್ಲಿ ಕೊಹ್ಲಿ ನಂತರ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ತಂಡದ ಕದ ತಟ್ಟಿದ ಈ ಯುವ ಬ್ಯಾಟರ್ ಈಗ ಭಾರತದ ತಂಡದ ಭವಿಷ್ಯದ ಆಟಗಾರ ಎಂದೇ ನಂಬಲಾಗುತ್ತಿದೆ. ವೆಸ್ಟ್
ಭಾರತ ತಂಡದ ಆ ಸಮಸ್ಯೆಗೆ ಪರಿಹಾರ
ಭಾರತ ತಂಡಕ್ಕೆ ಈಗ ನಾಲ್ಕೈದು ವರ್ಷಗಳಿಂದ ಒಂದು ಕೊರತೆ ಕಾಡುತ್ತಿದೆ. ಅದು ನಾಲ್ಕನೇ ಕ್ರಮಾಂಕದ ಆಟಗಾರನ ಸಮಸ್ಯೆ. ಹಲವು ವರ್ಷಗಳಿಂದ ಈ ಕ್ರಮಾಂಕಕ್ಕೆ ಹೊಂದಿಕೊಳ್ಳುವ ಆಟಗಾರ ಭಾರತ ತಂಡಕ್ಕೆ ಸಿಕ್ಕೇ ಇಲ್ಲ!. ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಅವರಂತಹ ಆಟಗಾರರನ್ನು ಈ ಕ್ರಮಾಂಕದಲ್ಲಿ ಆಡಿಸಲಾಗಿದೆಯಾದರೂ ಯಾರೊಬ್ಬರನ್ನು ಅಂತಿಮಗೊಳಿಸಲು ಆಗಿಲ್ಲ.
ಸೂರ್ಯಕುಮಾರ್ ಯಾದವ್ ಅವರಿಗೆ ನಾಲ್ಕನೇ ಕ್ರಮಾಂಕದಲ್ಲಿ ಸತತ ಅವಕಾಶ ನೀಡಿದರು ರನ್ ಗಳಿಸಲಿಲ್ಲ. ಈಗಲೂ ನಾಲ್ಕನೇ ಕ್ರಮಾಂಕದಲ್ಲಿ ಯಾರು ಆಡಬೇಕು ಎನ್ನುವ ಗೊಂದಲ ಭಾರತ ತಂಡದಲ್ಲಿದೆ. ತಿಲಕ್ ವರ್ಮಾ ಈಗ ಆ ಸಮಸ್ಯೆಗೆ ಪರಿಹಾರ ಎನ್ನುವಂತೆ ನೋಡಲಾಗುತ್ತಿದೆ.
ಏಕದಿನ ತಂಡಕ್ಕೆ ಆಯ್ಕೆ?
ಏಷ್ಯಾಕಪ್ ಮತ್ತು ವಿಶ್ವಕಪ್ ಮುಂದೆ ನಡೆಯಲಿರುವ ಕಾರಣ ವರ್ಮಾ ಇನ್ನೂ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿಲ್ಲ. ವೆಸ್ಟ್ ಇಂಡೀಸ್ ವಿರುದ್ಧ ಆತ ನೀಡಿದ ಪ್ರದರ್ಶನ ನೋಡಿದ ಬಳಿಕ, ಆದಷ್ಟು ಬೇಗನೆ ಅವರು ಏಕದಿನ ಕ್ರಿಕೆಟ್ ಆಡುವುದರಲ್ಲಿ ಅನುಮಾನವಿಲ್ಲ.
ಏಷ್ಯಾ ಕಪ್ ಮತ್ತು ವಿಶ್ವಕಪ್ ತಂಡಕ್ಕೆ ಮಧ್ಯಮ ಕ್ರಮಾಂಕದ ಆಟಗಾರನ ಸಮಸ್ಯೆ ಮಾತ್ರ ಉಳಿದಿದೆ. ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಗಾಯಗಳಿಂದ ಚೇತರಿಸಿಕೊಂಡಿದ್ದು ಅವರು ತಂಡಕ್ಕೆ ಮರಳುವುದು ಖಚಿತವಾಗಿದೆ. ಅನುಭವಿ ಆಟಗಾರರು ಇರುವಾಗ ವರ್ಮಾ ಆಯ್ಕೆ ಕಠಿಣವಾಗಿದೆ. ಉತ್ತಮ ಪ್ರದರ್ಶನ ನೀಡದೇ ಇದ್ದರೂ ಸೂರ್ಯಕುಮಾರ್ ಯಾದವ್‌ಗೆ ಇನ್ನಷ್ಟು ಅವಕಾಶ ನೀಡುವ ಬಗ್ಗೆ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದಾರೆ.
ತಿಲಕ್ ವರ್ಮಾ ಯಾಕೆ ಉತ್ತಮ ಆಯ್ಕೆ?
ತಿಲಕ್ ವರ್ಮಾ ಉತ್ತರ ಬ್ಯಾಟರ್ ಮಾತ್ರವಲ್ಲ, ಅವರೊಬ್ಬ ಅದ್ಭುತ ಫೀಲ್ಡರ್ ಮತ್ತು ಅರೆಕಾಲಿಕ ಬೌಲರ್ ಕೂಡ ಹೌದು. ಎಲ್ಲಕ್ಕಿಂತ ಹೆಚ್ಚಾಗಿ ಅವರು ಎಡಗೈ ಬ್ಯಾಟರ್. ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಏಷ್ಯಾಕಪ್ ಮತ್ತು ವಿಶ್ವಕಪ್‌ನಲ್ಲಿ ಎಡಗೈ ಸ್ಪಿನ್ನರ್‌ಗಳನ್ನು ಎದುರಿಸಲು ವರ್ಮಾ ಉತ್ತಮ ಆಯ್ಕೆಯಾಗಬಲ್ಲರು.
ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಗಾಯದ ಪರಿಸ್ಥಿತಿಯನ್ನು ಪರಿಗಣಿಸಿ ತಿಲಕ್ ವರ್ಮಾರನ್ನು 18 ಸದಸ್ಯರ ತಂಡದಲ್ಲಿ ಹೆಸರಿಸಿದರೂ ಅಚ್ಚರಿ ಪಡುವಂತಿಲ್ಲ. ತಿಲಕ್ ವರ್ಮಾ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8 ರವರೆಗೆ ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ 2023 ಗಾಗಿ ಭಾರತ ತಂಡದಲ್ಲಿ ಆಡಲಿದ್ದಾರೆ, ವಿಶ್ವಕಪ್‌ಗೆ ಆಯ್ಕೆಯಾದರೂ ಅವರು ಏಷ್ಯನ್ ಗೇಮ್ಸ್‌ನಲ್ಲಿ ಆಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications