ತ್ರಿಕೋನ ಸರಣಿಗೆ ಭಾರತ "ಎ" ತಂಡ ಪ್ರಕಟ, ವೈಭವ್ ಸೂರ್ಯವಂಶಿಗೆ ಸ್ಥಾನ
ಶ್ರೀಲಂಕಾದಲ್ಲಿ ನಡೆಯಲಿರುವ ತ್ರಿಕೋನ್ ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ಎ ತಂಡವನ್ನು ಪ್ರಕಟಿಸಿದೆ. ಜೂನ್ 9 ರಿಂದ ಆರಂಭವಾಗಲಿರುವ ತ್ರಿಕೋನ ಸರಣಿಗೆ ಬಿಸಿಸಿಐ ಹಲವು ಯುವ ಆಟಗಾರರಿಗೆ ಅವಕಾಶವನ್ನು ನೀಡಿದೆ. ಈ ಯುವ ತಂಡವನ್ನು ಭರವಸೆಯ ಮಿಡ್ಲ್ ಅರ್ಡರ್ ಬ್ಯಾಟರ್ ತಿಲಕ್ ವರ್ಮಾ ಮುನ್ನಡೆಸಲಿದ್ದಾರೆ. ಈ ತಂಡದ ಉಪನಾಯಕ ಪಟ್ಟವನ್ನು ರಿಯಾನ್ ಪರಾಗ್ ಅವರಿಗೆ ಕಟ್ಟಲಾಗಿದೆ. ಈ ತ್ರಿಕೋನ ಸರಣಿಯಲ್ಲಿ ಭಾರತ, ಆತಿಥೇಯ ಶ್ರೀಲಂಕಾ, ಅಫ್ಘಾನಿಸ್ತಾನ ತಂಡಗಳು ಕಾದಾಟ ನಡೆಸಲಿವೆ. ತ್ರಿಕೋನ ಸರಣಿಯ ಫೈನಲ್ ಜೂನ್ 21 ರಂದು ನಡೆಯಲಿದೆ.
ಬಿಸಿಸಿಐ ಪ್ರಕಟಿಸಿದ ಪ್ರಕಟಿತ ಭಾರತ "ಎ" ತಂಡದಲ್ಲಿ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರಿಗೆ ಸ್ಥಾನ ನೀಡಲಾಗಿದೆ. ಐಪಿಎಲ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಆಟಗಾರರಾದ ಪ್ರಿಯಾಂಶ್ ಆರ್ಯ ಮತ್ತು ಪ್ರಭಸಿಮ್ರಾನ್ ಸಿಂಗ್ ಅವರಿಗೆ ಅವಕಾಶ ನೀಡಲಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೊನಚಾದ ದಾಳಿ ಸಂಘಟಿಸಿ ಎಲ್ಲರ ಗಮನ ಸೆಳೆದ ವೇಗದ ಬೌಲರ್ ಅನ್ಶುಲ್ ಕಾಂಬೋಜ್ ಅವರಿಗೂ ಅವಕಾಶ ಲಭಿಸಿದೆ. ಯಶ್ ಠಾಕೂರ್, ವಿಪ್ರರಾಜ್ ನಿಗಮ್, ಮತ್ತು ಆಯುಷ್ ಬದೋನಿ ಮತ್ತು ಹರ್ಷ್ ದುಬೆ ಸೇರಿದ್ದಾರೆ.
ಆರ್‌ಸಿಬಿ ಆಟಗಾರರಿಗೆ ಇಲ್ಲ ಅವಕಾಶ
ಐಪಿಎಲ್‌ನಲ್ಲಿ ಮಿಂಚಿದ ಹಲವು ಆಟಗಾರರಿಗೆ ಭಾರತ "ಎ" ತಂಡದಲ್ಲಿ ಸ್ಥಾನ ನೀಡಲಾಗಿದೆ. ಆದರೆ ಆರ್‌ಸಿಬಿ ತಂಡದ ಪರ ಐಪಿಎಲ್‌ನಲ್ಲಿ ಮಿಂಚು ಹರಿಸುತ್ತಿರುವ ಆಟಗಾರರಿಗೆ ಅವಕಾಶ ನೀಡಲಾಗಿಲ್ಲ.
ತ್ರಿಕೋನ ಸರಣಿಗೆ ಭಾರತ 'ಎ' ತಂಡ: ತಿಲಕ್ ವರ್ಮಾ (ನಾಯಕ), ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ರಿಯಾನ್ ಪರಾಗ್ (ಉಪನಾಯಕ), ಆಯುಷ್ ಬದೋನಿ, ನಿಶಾಂತ್ ಸಿಂಧು, ಹರ್ಷ್ ದುಬೆ, ಸೂರ್ಯಾಂಶ್ ಶೆಡ್ಜ್, ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ವಿಪ್ರಜ್ ನಿಗಮ್, ಯಶ್ ಠಾಕೂರ್, ಯುಧ್ವೀರ್ ಸಿಂಗ್, ಅನ್ಶುಲ್ ಕಾಂಬೋಜ್ ಮತ್ತು ಅರ್ಷದ್ ಖಾನ್.
ತ್ರಿಕೋನ ಸರಣಿಗೆ ಭಾರತ ತಂಡದ ವೇಳಾಪಟ್ಟಿ
ಜೂನ್ 9, ಶ್ರೀಲಂಕಾ "ಎ" ವಿರುದ್ಧ
ಜೂನ್ 11, ಅಫ್ಘಾನಿಸ್ತಾನ "ಎ" ವಿರುದ್ಧ
ಜೂನ್ 15, ಶ್ರೀಲಂಕಾ "ಎ" ವಿರುದ್ಧ
ಜೂನ್ 17, ಅಫ್ಘಾನಿಸ್ತಾನ "ಎ" ವಿರುದ್ಧ
ಅಂಕ ಪಟ್ಟಿಯಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ಜೂನ್ 21 ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕಾದಾಟ ನಡೆಸಲಿವೆ.

ಶ್ರೀಲಂಕಾ ಪ್ರವಾಸದಲ್ಲಿ ಭಾರತ ಸೀಮಿತ ಓವರ್‌ಗಳ ಪಂದ್ಯಗಳ ಜೊತೆಗೆ ಎರಡು ರೆಡ್ ಬಾಲ್ ಪಂದ್ಯಗಳು ಸಹ ನಡೆಯಲಿದೆ. ಈ ಸರಣಿಗೆ ಭಾರತ ತಂಡವನ್ನು ಇನ್ನೇನು ಕೆಲವೇ ದಿನಗಳಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಈ ಎರಡೂ ಪಂದ್ಯಗಳು ಗಾಲೆ ಕ್ರೀಡಾಂಗಣದಲ್ಲಿ ನಡೆಯಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications