IND vs SA 2nd T20: ಸರಣಿಯಲ್ಲಿ ಪುಟಿದೆದ್ದ ದ.ಆಫ್ರಿಕಾ: ಸೂರ್ಯ ಪಡೆ ಬ್ಯಾಟರ್‌ಗಳ ವೈಫಲ್ಯ
ಭರವಸೆಯ ಬ್ಯಾಟರ್ ತಿಲಕ್ ವರ್ಮಾ ಬಾರಿಸಿದ ಅರ್ಧಶತಕದ ಹೊರತಾಗಿಯೂ ಟೀಮ್ ಇಂಡಿಯಾ ನ್ಯೂ ಚಂಡೀಗಢ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 51 ರನ್ ಸೋಲು ಕಂಡಿದೆ. ಈ ಗೆಲುವಿನ ಮೂಲಕ ಪ್ರವಾಸಿ ದಕ್ಷಿಣ ಆಫ್ರಿಕಾ 5 ಪಂದ್ಯಗಳ ಟಿ20 ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದೆ.
ಸವಾಲಿನ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಟರ್‌ಗಳು ರನ್‌ಕಲೆ ಹಾಕುವಲ್ಲಿ ವಿಫಲರಾದರು. ಅಭಿಷೇಕ್ ಶರ್ಮಾ, ಶುಭಮನ್ ಗಿಲ್ ಒತ್ತಡವನ್ನು ಮೆಟ್ಟಿನಿಂತು ರನ್ ಕಲೆ ಹಾಕಲಿಲ್ಲ. ಸೂರ್ಯಕುಮಾರ್ ಯಾದವ್ ಸಹ ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಅಕ್ಷರ್ ಪಟೇಲ್ 21 ರನ್ ಬಾರಿಸಿದರು.

ಮೊದಲ ಟಿ20 ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ನೀಡಿದ್ದ ಹಾರ್ದಿಕ್ ಪಾಂಡ್ಯ ಗುರುವಾರ ಕೇವಲ 20 ರನ್ ಬಾರಿಸುವಲ್ಲಿ ಸಫಲರಾದರು. ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ 27 ರನ್ ಸೇರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಉಳಿದಂತೆ ಯಾವೊಬ್ಬ ಬ್ಯಾಟರ್ ನೆಲಕಚ್ಚಿ ನಿಂತು ಬ್ಯಾಟ್ ಮಾಡಲಿಲ್ಲ.
ತಿಲಕ್ ಹೋರಾಟ ವ್ಯರ್ಥ
ಭರವಸೆಯ ಬ್ಯಾಟರ್ ತಿಲಕ್ ವರ್ಮಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 34 ಎಸೆತಗಳಲ್ಲಿ 2 ಬೌಂಡರಿ, 5 ಸಿಕ್ಸರ್ ಸಹಾಯದಿಂದ 62 ರನ್ ಬಾರಿಸಿ ಔಟ್ ಆದರು. ಅಂತಿಮವಾಗಿ ಭಾರತ 19.1 ಓವರ್‌ಗಳಲ್ಲಿ 162 ರನ್ ಕಲೆ ಹಾಕಿ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾದ ಪರ ಒಟ್ನೀಲ್ ಬಾರ್ಟ್‌ಮನ್ 4 ವಿಕೆಟ್ ಕಬಳಿಸಿದರೆ, ಲುಂಗಿ ಎನ್‌ಗಿಡಿ ಮತ್ತು ಮಾರ್ಕೊ ಜಾನ್ಸನ್ ತಲಾ 2 ವಿಕೆಟ್ ಪಡೆದರು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡದ ಆರಂಭ ಸಾಧಾರಣವಾಗಿತ್ತು. ತಂಡದ ಮೊತ್ತ 38 ಆಗಿದ್ದಾಗ ರಿಜಾ ಹೆಂಡ್ರಿಕ್ಸ್ (8) ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದರು. ಎರಡನೇ ವಿಕೆಟ್‌ಗೆ ಕ್ವಿಂಟನ್ ಡಿಕಾಕ್ ಹಾಗೂ ಏಡನ್ ಮಾರ್ಕ್ರಮ್ (29) ಜೋಡಿ ಅಬ್ಬರದ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 83 ರನ್ ಸೇರಿಸಿತು.
ಮಧ್ಯಮ ಕ್ರಮಾಂಕದಲ್ಲಿ ಡೇವಲ್ಡ್ ಬ್ರಾವಿಸ್ (14), ಡೊನೊವನ್ ಫೆರೀರಾ (ಅಜೇಯ 30) ಡೇವಿಡ್ ಮಿಲ್ಲರ್ (ಅಜೇಯ 20) ತಂಡದ ಮೊತ್ತ ಹಿಗ್ಗಿಸಿದರು. ಆರಂಭಿಕ ಕ್ವಿಂಟನ್ ಡಿ ಕಾಕ್ 5 ಬೌಂಡರಿ, 7 ಸಿಕ್ಸರ್ ಸಹಾಯದಿಂದ 90 ರನ್ ಬಾರಿಸಿ ಅಬ್ಬರಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 213 ರನ್ ಕಲೆ ಹಾಕಿತು. ಭಾರತದ ಪರ ಬೌಲರ್‌ಗಳು ರನ್‌ಗಳನ್ನು ನೀಡಿ ಕೈ ಸುಟ್ಟುಕೊಂಡರು. ವರುಣ್ ಚಕ್ರವರ್ತಿ ಮಾತ್ರ ಬಿಗುವಿನ ದಾಳಿ ನಡೆಸುವಲ್ಲಿ ಸಫಲರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications