Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತಿಲಕರತ್ನೆ ದಿಲ್ಶನ್ ಆಲ್ ಟೈಮ್ XIನಲ್ಲಿ ಆಂಗ್ಲರಿಲ್ಲ, ಒಬ್ಬನೇ ಭಾರತೀಯ!

Tillakaratne Dilshan names all-time XI: only one Indian chosen

ಕೊಲಂಬೋ, ಮೇ 12: ಶ್ರೀಲಂಕಾದ ಮಾಜಿ ಬ್ಯಾಟ್ಸ್‌ಮನ್ ತಿಲಕರತ್ನೆ ದಿಲ್ಶನ್ ತಾನು ಜೊತೆಯಾಗಿ ಆಡಿದ ಅಥವಾ ವಿರುದ್ಧ ಆಡಿದ ಆಲ್‌ ಟೈಮ್ ಬೆಸ್ಟ್ ಏಕದಿನ ಕ್ರಿಕೆಟ್ ತಂಡ ಪ್ರಕಟಿಸಿದ್ದಾರೆ. ವಿಶೇಷವೆಂದರೆ ಈ ತಂಡದಲ್ಲಿ ಒಬ್ಬನೇ ಒಬ್ಬ ಇಂಗ್ಲೆಂಡ್ ಕ್ರಿಕೆಟಿಗನಿಲ್ಲ. ಭಾರತ ಮತ್ತು ಪಾಕಿಸ್ತಾನದ ಒಬ್ಬೊಬ್ಬರು ಮಾತ್ರ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ದಿಲ್ಶನ್ ಫೇವರಿಟ್ ಕ್ರಿಕೆಟ್‌ ತಂಡದಲ್ಲಿ ಭಾರತದ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ಶ್ರೀಲಂಕಾದ ಶ್ರೇಷ್ಠ ಕ್ರಿಕೆಟಿಗ ಸನತ್ ಜಯಸೂರ್ಯ ಆರಂಭಿಕರಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಕೂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಿಕ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆರಂಭಿಕರಾಗಿ ಬ್ಯಾಟಿಂಗ್ ಮಾಡಿದ್ದರು.

ವೆಸ್ಟ್ ಇಂಡೀಸ್ ದಂತಕತೆ ಬ್ರಿಯಾನ್ ಲಾರಾ ನಂ.3ರಲ್ಲಿ ಹೆಸರಿಸಲ್ಪಟ್ಟಿದ್ದಾರೆ. ಶ್ರೀಲಂಕಾದ ಮಹೇಲಾ ಜಯವರ್ಧನೆ 4ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿದ್ದಾರೆ. ಆಧುನಿಕ ಯುಗದ ಕ್ರಿಕೆಟಿಗರನ್ನು ಪರಿಗಣಿಸಿದರೆ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ಮಾತ್ರ ಪ್ಲೇಯಿಂಗ್ XIನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ದಿಲ್ಶನ್ ನೆಚ್ಚಿನ ಆಲ್ ಟೈಮ್ ಏಕದಿನ ತಂಡ
ಸನತ್ ಜಯಸೂರ್ಯ (ಶ್ರೀಲಂಕಾ), ಸಚಿನ್ ತೆಂಡೂಲ್ಕರ್ (ಭಾರತ), ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್), ಮಹೇಲಾ ಜಯವರ್ಧನೆ (ಶ್ರೀಲಂಕಾ), ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ), ಜಾಕ್ ಕ್ಯಾಲೀಸ್ (ದಕ್ಷಿಣ ಆಫ್ರಿಕಾ), ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ), ವಾಸಿಮ್ ಅಕ್ರಮ್ (ಪಾಕಿಸ್ತಾನ), ಕರ್ಟ್ನಿ ವಾಲ್ಷ್ (ವೆಸ್ಟ್ ಇಂಡೀಸ್), ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ), ಶೇನ್ ವಾರ್ನ್ (ಆಸ್ಟ್ರೇಲಿಯಾ), ಗ್ಲೆನ್ ಮೆಗ್ರಾತ್ (ಆಸ್ಟ್ರೇಲಿಯಾ, 12ನೇ ಬ್ಯಾಟ್ಸ್‌ಮನ್).

Story first published: Tuesday, May 12, 2020, 19:04 [IST]
Other articles published on May 12, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+