ಆರ್‌ಸಿಬಿ ಈ ಬಾರಿ ಸ್ಥಿರ ಪ್ರದರ್ಶನ ನೀಡಿ ಅಭಿಮಾನಿಗಳ ಮನಕ್ಕೆ ಎಂಟ್ರಿ ನೀಡ್ತಾ ಇದೆ. ಈ ಐಪಿಎಲ್‌ನಲ್ಲಿ ಆರ್‌ಸಿಬಿ 16 ಅಂಕಗಳನ್ನು ಕಲೆ ಹಾಕಿದ್ದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆರ್‌ಸಿಬಿ ಪರ ಸ್ಟಾರ್ ಆಟಗಾರರು ಭರ್ಜರಿ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಿಂಚುತ್ತಿದ್ದಾರೆ. ಇದೇ ವೇಳೆ ಆರ್‌ಸಿಬಿ ತಂಡದ ಸ್ಟಾರ್ಸ್ ಸಾಮಾಜಿಕ ತಾಣಗಳಲ್ಲೂ ಧಮಾಕಾ ಮಾಡ್ತಾಇದ್ದಾರೆ.
ಆರ್‌ಸಿಬಿ ತಂಡದ ಪರ ಡೆತ್ ಓವರ್‌ಗಳಲ್ಲಿ ಬ್ಯಾಟ್ ಮಾಡಿ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಟೀಮ್ ಡೇವಿಡ್ ಈಗ ಸಾಮಾಜಿಕ ತಾಣದಲ್ಲಿ ಅಬ್ಬರಿಸುತ್ತಿದ್ದಾರೆ. ಮಿಸ್ಟರ್ ನ್ಯಾಗ್ಸ್ ನಡೆಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಟೀಮ್ ಡೇವಿಡ್ ಅವರಿಗೆ ನ್ಯಾಗ್ಸ್ ಹಲವು ಪ್ರಶ್ನೆಗಳನ್ನು ಕೇಳಿದ್ರು. ಆದರೆ ಆ ಪ್ರಶ್ನೆ ಕಿವಿಗೆ ಬೀಳುತ್ತಲೆ ಆ ಚಿತ್ರ ನೋಡಿದ್ದೇನೆ ಎಂದು ಟೀಮ್ ಡೇವಿಡ್ ತಿಳಿಸಿದ್ದಾರೆ.

ಅಂದಹಾಗೆ ಟೀಮ್ ಡೇವಿಡ್ ಆಸ್ಟ್ರೇಲಿಯಾ ಪರ ಬ್ಯಾಟ್ ಮಾಡುವ ಆಟಗಾರ. ಆಸೀಸ್ ತಂಡದ ಪರ ಸ್ಫೊಟಕ ಇನಿಂಗ್ಸ್‌ಗಳನ್ನು ಕಟ್ಟಿ ಸೈ ಎನಿಸಿಕೊಂಡಿದ್ದಾರೆ. ಆದರೆ ಇವರು ಹುಟ್ಟಿದ್ದು ಮಾತ್ರ ಸಿಂಗಾಪುರದಲ್ಲಿ.. ಇದನ್ನೇ ಇಟ್ಟುಕೊಂಡು ಮಿಸ್ಟರ್ ನ್ಯಾಗ್ಸ್ ಒಂದು ಪ್ರಶ್ನೆ ಕೇಳ್ತಾರೆ. ನನಗೆ ಸಿಂಗಾಪುರ್ ಇದೆ ಎಂಬುದು ತಿಳಿದಿದ್ದೇ ಕನ್ನಡದ ಆ ಒಂದು ಚಿತ್ರದ ಮೂಲಕ ಎಂದು ನ್ಯಾಗ್ಸ್ ಹೇಳ್ತಾರೆ. ಆಗ ಅವರು ಸಿಂಗಾಪುರ್‌ದಲ್ಲಿ ರಾಜಾ ಕುಳ್ಳು ಎಂದು ಚಿತ್ರದ ಹೆಸರನ್ನು ಹೇಳುತ್ತಾರೆ.
ಈ ಚಿತ್ರದ ಹೆಸರನ್ನು ಕೇಳುತ್ತಲೇ ಟೀಮ್ ಡೇವಿಡ್ ಎಸ್.. ಈ ಚಿತ್ರವನ್ನು ನಾನು ನೋಡಿದ್ದೇನೆ. ನಾನು ಸಿಂಗಾಪುರ್‌ದಲ್ಲಿ ರಾಜಾ ಕುಳ್ಳು ಚಿತ್ರ ನೋಡಿ ಖುಷಿ ಪಟ್ಟಿದ್ದೇನೆ. ಅಲ್ಲದೆ ಈ ಚಿತ್ರದಲ್ಲಿ ಡಾಕ್ಟರ್ ವಿಷ್ಣುವರ್ಧನ್ ಹಾಗೂ ದ್ವಾರಕೇಶ್ ನಟನೆಯ ಬಗ್ಗೆ ಟೀಮ್ ಡೇವಿಡ್ ಮಾತನಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ತಾಣದಲ್ಲಿ ಆರ್‌ಸಿಬಿ ಆಫಿಸಿಯಲ್ ಆಕೌಂಟ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಸಖತ್ ವೈರಲ್ ಆಗುತ್ತಿದೆ.
1978ರ ದಶಕದಲ್ಲಿ ಸಿವಿ ರಾಜೇಂದ್ರನ್ ಅವರ ನಿರ್ದೇಶನದಲ್ಲಿ ಸಿಂಗಾಪುರ್‌ದಲ್ಲಿ ರಾಜಾ ಕುಳ್ಳು ಚಿತ್ರವನ್ನು ದ್ವಾರಕೇಶ್ ನಿರ್ಮಿಸಿದ್ದರು. ಈ ಚಿತ್ರ ಕನ್ನಡದಲ್ಲಿ ಸೂಪರ್ ಹಿಟ್ ಆಗಿತ್ತು. ಈ ಚಿತ್ರದ ಗೀತೆಗಳು ಸಹ ಸೂಪರ್ ಹಿಟ್ ಆಗಿತ್ತು. ಕರ್ನಾಟಕ ಅಷ್ಟೇ ಅಲ್ಲ ಈ ಚಿತ್ರ ವಿದೇಶಗಳಲ್ಲೂ ಸದ್ದು ಮಾಡಿತ್ತು ಎಂಬುವುದಕ್ಕೇ ಇದುವೆ ಬೆಸ್ಟ್ ಉದಾಹರಣೆ.
ಟೀಮ್ ಡೇವಿಡ್ ಆರ್‌ಸಿಬಿ ಪರ 11 ಇನಿಂಗ್ಸ್‌ಗಳನ್ನು ಪ್ರಸಕ್ತ ಐಪಿಎಲ್‌ನಲ್ಲಿ ಆಡಿದ್ದು, 93ರ ಸರಾಸರಿಯಲ್ಲಿ 186 ರನ್ ಕಲೆ ಹಾಕಿದ್ದಾರೆ. ಈ ವೇಳೆ ಇವರ ಬ್ಯಾಟ್‌ನಿಂದ 16 ಬೌಂಡರಿ, 14 ಸಿಕ್ಸರ್‌ಗಳು ಹರಿದು ಬಂದಿವೆ. ಡೇವಿಡ್ ಆರ್‌ಸಿಬಿ ಪರ ಡೆತ್ ಓವರ್‌ಗಳಲ್ಲಿ ಬಿರುಸಿನ ಬ್ಯಾಟಿಂಗ್‌ನಿಂದ ಹೆಸರುವಾಸಿ.