ಏನ್ ಬ್ಯಾಟಿಂಗ್ ಗುರು.. ಎದುರಾಳಿಗಳಿಗೆ ನಡುಕ ಶುರು, ಚೆನ್ನೈ ವಿರುದ್ಧ ಟೀಮ್ ಡೇವಿಡ್ ಅಬ್ಬರ
ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಡುವಣ ಪಂದ್ಯದಲ್ಲಿ ಆತಿಥೇಯ ತಂಡ ಅಬ್ಬರಿಸಿದೆ. ಮೊದಲು ಕರ್ನಾಟಕದ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್ ಅರ್ಧಶತಕ ಬಾರಿಸಿ ತಂಡಕ್ಕೆ ಆಧಾರವಾದರೆ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಟೀಮ್ ಡೇವಿಡ್ ವಿಸ್ಫೋಟಕ ಬ್ಯಾಟಿಂಗ್ ನಡೆಸಿದರು. ನೇರ ಪ್ರಸಾರದ ಪಂದ್ಯವೇ ಹೈಲೈಟ್ಸ್ ರೀತಿ ಕಾಣಿಸಿಕೊಂಡಿತು. ಈ ಸ್ಫೋಟಕ ಬ್ಯಾಟರ್‌ನ ಬ್ಯಾಟಿಂಗ್ ಕಂಡು ನಿಶ್ಚಿತವಾಗಿ ಐಪಿಎಲ್‌ನಲ್ಲಿ ಬೇರೆ ತಂಡಗಳಿಗೆ ನಡುಕ ಶುರುವಾಗಿದೆ.
ಎಂ ಚಿನ್ನಸ್ವಾಮಿ ಅಂಗಳದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫೀಲ್ಡರ್‌ಗಳಿಗಿಂತ ಕೊನೆಯ ಐದು ಓವರ್‌ಗಳಲ್ಲಿ ಅಭಿಮಾನಿಗಳೇ ಹೆಚ್ಚಿನ ಚೆಂಡನ್ನು ಹಿಡಿದರು. ಕೊನೆಯ ಐದು ಓವರ್‌ಗಳಲ್ಲಿ ಅಕ್ಷರಶಃ ಆರ್‌ಸಿಬಿ ಬ್ಯಾಟರ್‌ಗಳು ಅಬ್ಬರಿಸಿದರು. ಈ 30 ಎಸೆತಗಳಲ್ಲಿ ಆರ್‌ಸಿಬಿ 97 ರನ್ ಸೇರಿಸಿತು. ಈ ಹಂತದಲ್ಲಿ ಟೀಮ್ ಡೇವಿಡ್ ಅವರ ಆರ್ಭಟಕ್ಕೆ ಬ್ರೇಕ್ ಹಾಕುವಲ್ಲಿ ಸಿಎಸ್‌ಕೆ ಬೌಲರ್‌ಗಳು ಕಂಗಾಲಾದರು.

ಚೆನ್ನೈ ವಿರುದ್ಧ ಐಪಿಎಲ್ ಇತಿಹಾಸದಲ್ಲಿ ಯಾವುದೇ ತಂಡ ಮಾಡದ ಸಾಧನೆಯನ್ನು ಆರ್‌ಸಿಬಿ ಮಾಡಿತು. ಆರ್‌ಸಿಬಿ ಸಿಎಸ್‌ಕೆ ವಿರುದ್ಧ 250ಕ್ಕೂ ಹೆಚ್ಚು ರನ್ ಕಲೆ ಹಾಕಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಒಂದೇ ಓವರ್‌ನಲ್ಲಿ 30 ರನ್
ಟೀಮ್ ಡೇವಿಡ್ ತಮ್ಮ ಅನುಭವವನ್ನು ಬಳಸಿಕೊಂಡು ಬ್ಯಾಟ್ ಮಾಡಿ ಆರ್ಭಟಿಸಿದರು. ಇವರು ಜೇಮಿ ಓವರ್‌ಟನ್ ಅವರ ಎಸೆತವನ್ನು ಡೀಪ್ ಮಿಡ್‌ವಿಕೆಟ್ ಮೇಲಿನಿಂದ ಸಿಕ್ಸರ್ ಬಾರಿಸಿದರು. ಇವರ ಈ ಬಿಗ್ ಸಿಕ್ಸರ್‌ಗೆ ಚೆಂಡು ಮೈದಾನದ ಆಚೆಗೆ ಬಿದ್ದಿತು. ಈ ವೇಳೆ ಟೀಮ್ ಡೇವಿಡ್ 106 ಮೀಟರ್ ಉದ್ದದ ಸಿಕ್ಸರ್ ಬಾರಿಸಿದರು. ಜೇಮಿ ಓವರ್ ಟನ್ ಬೌಲ್ ಮಾಡಿದ 19ನೇ ಓವರ್‌ನಲ್ಲಿ ಟೀಮ್ ಡೇವಿಡ್ 30 ರನ್ ಬಾರಿಸಿದರು.
ಭರವಸೆಯ ಬ್ಯಾಟರ್ ಟೀಮ್ ಡೇವಿಡ್ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 8 ಬಿಗ್ ಸಿಕ್ಸರ್ ನೆರವಿನಿಂದ ಅಜೇಯ 70 ರನ್ ಸಿಡಿಸಿದರು. ಈ ವೇಳೆ ಇವರ ಸ್ಟ್ರೈಕ್ ರೇಟ್ 280 ರನ್ ಆಗಿತ್ತು. ಅಂತಿಮವಾಗಿ ಆರ್‌ಸಿಬಿ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 250 ರನ್ ಸೇರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications