Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB ತಂಡದ ಆಲ್‌ರೌಂಡರ್‌ 8 ಸಿಕ್ಸರ್‌, 4 ಬೌಂಡರಿ ಆರ್ಭಟ: ಆಸ್ಟ್ರೇಲಿಯಾಗೆ 17 ರನ್‌ ಜಯ

ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಟಿ20 ಪಂದ್ಯ ಭಾನುವಾರ ನಡೆಯಿತು. ಈ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಸೋಲು ಕಂಡಿತು. ಆಸ್ಟ್ರೇಲಿಯಾ ತಂಡ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿತು. ಈ ಗೆಲುವಿನಲ್ಲಿ ಆಸ್ಟ್ರೇಲಿಯಾ ಸ್ಟಾರ್ ಆಲ್‌ರೌಂಡರ್‌ ಟೀಮ್ ಡೇವಿಡ್ ಅಬ್ಬರಿಸಿದ್ದಾರೆ.

ಟಾಸ್‌ ಗೆದ್ದು ದಕ್ಷಿಣ ಆಫ್ರಿಕಾ ತಂಡದ ಮೊದಲು ಬೌಲಿಂಗ್ ಮಾಡುವ ಆಯ್ಕೆಯನ್ನು ಮಾಡಿಕೊಂಡಿತು. ಆಸ್ಟ್ರೇಲಿಯಾ ತಂಡದ ಆರಂಭಿಕ ಮಿಚೆಲ್‌ ಮಾರ್ಷ್‌ (13), ಟ್ರಾವಿಸ್‌ ಹೆಡ್‌ (2), ಜೋಶ್‌ ಇಂಗ್ಲೀಷ್‌ (0) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಆಸೀಸ್‌ 30 ರನ್‌ ಕಲೆ ಹಾಕುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಲ್ಕನೇ ವಿಕೆಟ್‌ಗೆ ಕ್ಯಾಮರೂನ್‌ ಗ್ರೀನ್‌ ಹಾಗೂ ಟೀಮ್ ಡೇವಿಡ್‌ ಜೋಡಿ ಸ್ಥಿರ ಪ್ರದರ್ಶನ ನೀಡಿತು. ಈ ಜೋಡಿ 16 ಎಸೆತಗಳಲ್ಲಿ 40 ರನ್‌ ಸೇರಿಸಿತು. ಈ ವೇಳೆ ಕ್ಯಾಮರೂನ್‌ ಗ್ರೀನ್‌ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 35 ರನ್‌ ಸಿಡಿಸಿತು.

Tim David s Explosive Hitting Powers Australia to a 17-Run Victory

ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರರು ದೊಡ್ಡ ಇನಿಂಗ್ಸ್‌ ಕಟ್ಟಲಿಲ್ಲ. 7ನೇ ವಿಕೆಟ್‌ಗೆ ಬೆನ್ ದ್ವಾರ್ಶುಯಿಸ್ (17) ಹಾಗೂ ಟೀಮ್ ಡೇವಿಡ್‌ ಜೋಡಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು. ಈ ಜೋಡಿ 42 ಎಸೆತಗಳಲ್ಲಿ 59 ರನ್‌ ಸೇರಿಸಿತು. 8ನೇ ವಿಕೆಟ್‌ಗೆ ಡೇವಿಡ್‌ ಜೊತೆಗೂಡಿದ ನಾಥನ್ ಎಲ್ಲಿಸ್ ಸಹ 30 ರನ್‌ಗಳ ಜೊತೆಯಾಟವನ್ನು ನೀಡಿದರು.

ಟೀಮ್ ಡೇವಿಡ್‌

ಇದೇ ವೇಳೆ ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ಟೀಮ್ ಡೇವಿಡ್‌ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಟೀಮ್ ಡೇವಿಡ್‌ 52 ಎಸೆತಗಳಲ್ಲಿ 83 ರನ್‌ ಸೇರಿಸಿತು. ಈ ವೇಳೆ 4 ಬೌಂಡರಿ, 8 ಸಿಕ್ಸರ್‌ ಸಿಡಿಸಿದರು. ಅಂತಿಮವಾಗಿ ಆಸೀಸ್‌ 20 ಓವರ್‌ಗಳಲ್ಲಿ 178 ರನ್‌ಗಳಿಗೆ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾದ ಪರ ಕ್ವೇನಾ ಮಾಫಕ 4, ಕಗಿಸೊ ರಬಾಡ 2 ವಿಕೆಟ್‌ ಪಡೆದರು.

Tim David s Explosive Hitting Powers Australia to a 17-Run Victory

ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾದ ಆರಂಭ ಸಹ ಕಳಪೆಯಾಗಿತ್ತು. ಲುವಾನ್-ಡ್ರೆ ಪ್ರಿಟೋರಿಯಸ್ (12), ಐಡೆನ್ ಮಾರ್ಕ್ರಾಮ್ (14), ಡೆವಾಲ್ಡ್ ಬ್ರೆವಿಸ್ (2) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ರಯಾನ್ ರಿಕೆಲ್ಟನ್ ಹಾಗೂ ಟ್ರಿಸ್ಟಾನ್ ಸ್ಟಬ್ಸ್ ಜೋಡಿ 4ನೇ ವಿಕೆಟ್‌ಗೆ ಭರ್ಜರಿ ಜೊತೆಯಾಟ ನಡೆಸಿತು. ಈ ಜೋಡಿ 52 ಎಸೆತಗಳಲ್ಲಿ 72 ರನ್‌ ಕಲೆ ಹಾಕಿತು. ಟ್ರಿಸ್ಟಾನ್ ಸ್ಟಬ್ಸ್ 5 ಬೌಂಡರಿ ಸಹಾಯದಿಂದ 37 ರನ್ ಬಾರಿಸಿ ಔಟ್ ಆದರು. ಆರಂಭಿಕ ರಯಾನ್ ರಿಕೆಲ್ಟನ್ 55 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ 71 ರನ್ ಬಾರಿಸಿ ಮಿಂಚಿದರು. ಉಳಿದ ಆಟಗಾರರು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಆಸ್ಟ್ರೇಲಿಯಾದ ಪರ ಜೋಶ್‌ ಹ್ಯಾಜಲ್‌ವುಡ್‌ ಹಾಗೂ ಬೆನ್ ದ್ವಾರ್ಶುಯಿಸ್ ತಲಾ ಮೂರು ವಿಕೆಟ್‌ ಪಡೆದರು.

Story first published: Monday, August 11, 2025, 7:30 [IST]
Other articles published on Aug 11, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+