For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್‌ನ ಕ್ಷಮೆ ಯಾಚಿಸಿದ ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್

Tim Paine apologises for predicting India would comfortably beat New Zealand in WTC final

ಸಿಡ್ನಿ: ನ್ಯೂಜಿಲೆಂಡ್ ಕ್ರಿಕೆಟ್ ತಂಡದೊಂದಿಗೆ ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ಕ್ಷಮೆ ಯಾಚಿಸಿದ್ದಾರೆ. ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದ ವಿಜೇತರನ್ನು ಊಹಿಸಿದ್ದಕ್ಕಾಗಿ ಪೈನ್ ಬ್ಲ್ಯಾಕ್‌ಕ್ಯಾಪ್ಸ್ ಅನ್ನು ಕ್ಷಮೆ ಕೋರಿದ್ದಾರೆ.

WTC ಫೈನಲ್‌ಗೂ ಮುನ್ನ ಅನೇಕ ಕ್ರಿಕೆಟ್ ಪರಿಣಿತರು ಫೈನಲ್‌ನಲ್ಲಿ ಗೆಲ್ಲುವ ತಂಡವನ್ನು ಊಹಿಸಿ ಪ್ರತಿಕ್ರಿಯಿಸಿದ್ದರು. ಹೆಚ್ಚಿನವರು ನ್ಯೂಜಿಲೆಂಡ್ ಗೆಲ್ಲುತ್ತದೆ ಎಂದಿದ್ದರೆ, ಇನ್ನು ಕೆಲವರು ಭಾರತ ಗೆಲ್ಲಲಿದೆ ಎಂದಿದ್ದರು. ಟೀಮ್ ಪೈನ್ ಕೂಡ ವಿರಾಟ್ ಕೊಹ್ಲಿ ಪಡೆ ಗೆಲ್ಲಲಿದೆ ಎಂದಿದ್ದರು.

ಆದರೆ ಬುಧವಾರ (ಜೂನ್ 23) ಮುಕ್ತಾಯಗೊಂಡ ಭಾರತ-ನ್ಯೂಜಿಲೆಂಡ್ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಬಳಗ ಭಾರತವನ್ನು 8 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿತ್ತು. ಹೀಗಾಗಿ, ಪೈನ್ ಕ್ಷಮೆ ಯಾಚಿಸಿದ್ದಾರೆ. ಇದಕ್ಕೂ ಮುನ್ನ, ಕಿವೀಸ್ ವಿರುದ್ಧ ಭಾರತ ಸುಲಭವಾಗಿ ಗೆಲ್ಲಲಿದೆ ಎಂದು ಪೈನ್ ಹೇಳಿದ್ದರು.

"ನಾವೆಲ್ಲರೂ ಕೆಲವು ಬಾರಿ ತಪ್ಪುಗಳನ್ನು ಮಾಡುತ್ತೇವೆ. ನಾನು ಕಿವಿ ಅಭಿಮಾನಿಗಳಿಂದ ಸ್ವಲ್ಪ ದೂರವಿರುತ್ತೇನೆ, ಹಾಗಾಗಿ ನಾನು ಆನ್‌ ಏರ್‌ಗೆ ಬಂದು ಕ್ಷಮೆಯಾಚಿಸಬೇಕೆಂದು ಭಾವಿಸಿದೆ. ನ್ಯೂಜಿಲೆಂಡ್‌ನವರು ಅತ್ಯುತ್ತಮ ಆಟ ಆಡಿದರೆಂದು ನನಗನ್ನಿಸಿತು. ಅವರು ಆಡಿ ನಡೆದ ದಾರಿ ನೋಡೋದಕ್ಕೆ ಯಾವತ್ತಿಗೂ ಖುಷಿಯಾಗುತ್ತದೆ," ಎಂದು ನ್ಯೂಸ್‌ಟಾಕ್‌ ಝಡ್‌ಬಿ ಜೊತೆ ಪೈನ್ ಹೇಳಿಕೊಂಡಿದ್ದಾರೆ.

Story first published: Saturday, June 26, 2021, 10:52 [IST]
Other articles published on Jun 26, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+