Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬದಲಾಗಲಿದೆಯಾ ಆಸ್ಟ್ರೇಲಿಯಾ ಟೆಸ್ಟ್ ನಾಯಕತ್ವ? ಸ್ಪಷ್ಟನೆ ನೀಡಿದ ಕ್ರಿಕೆಟ್ ಆಸ್ಟ್ರೇಲಿಯಾ

Tim Paine has not gone yet, CA has not discussed Steve Smith captaincy yet

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕತ್ವದ ಬಗ್ಗೆ ಮತ್ತೆ ಚರ್ಚೆಗಳು ಆರಂಭವಾಗಿದ್ದವು. ಟಿಮ್ ಪೈನ್ ಬದಲಿಗೆ ಸ್ಟೀವ್ ಸ್ಮಿತ್ ಮತ್ತೆ ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂಬ ಚರ್ಚೆ ಗರಿಗೆದರಿತ್ತು. ಆದರೆ ಈ ಚರ್ಚೆಗೆ ಸ್ವತಃ ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟವಾಗಿ ಪ್ರತಿಕ್ರಿಯೆ ನೀಡಿದೆ.

ಕ್ರಿಕೆಟ್ ಆಸ್ಟ್ರೇಲಿಯಾದ ಆಯ್ಕೆ ಸಮಿತಿಯ ಚೇರ್‌ಮನ್ ಟ್ರೇವರ್ ಹಾನ್ಸ್ ಪ್ರತಿಕ್ರಿಯಿಸಿದ್ದು ಸ್ಟೀವ್ ಸ್ಮಿತ್ ಮತ್ತೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕರಾಗಲಿದ್ದಾರೆ ಎಂಬ ಗಾಳಿಸುದ್ದಿಯನ್ನು ಈಗ ತಡೆಹಿಡಿಯಬಹುದು ಎಂದಿದ್ದಾರೆ. ಈ ಮೂಲಕ ಸದ್ಯ ಆಸ್ಟ್ರೇಲಿಯಾ ತಂಡದ ನಾಯಕತ್ವ ಬದಲಾವಣೆ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕನಾಗಿ ಟಿಮ್ ಪೈನ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಅವರಿನ್ನೂ ಆ ಹುದ್ದೆಯನ್ನು ತೊರೆದಿಲ್ಲ. ಜೊತೆಗೆ ನಾಯಕತ್ವ ಬದಲಾವಣೆ ಮಾಡುವ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಈವರೆಗೆ ಚರ್ಚೆಯನ್ನೇ ನಡೆಸಿಲ್ಲ ಎಂದು ಟ್ರೇವರ್ ಹಾನ್ಸ್ ನಾಯಕತ್ವ ಬದಲಾವಣೆಯ ಚರ್ಚೆಯ ಬಗ್ಗೆ ಸ್ಪಷ್ಟವಾದ ನಿರಾಕರಣೆಯನ್ನು ಮಾಡಿದ್ದಾರೆ.

ಭವಿಷ್ಯದಲ್ಲಿ ಸ್ಟೀವ್ ಸ್ಮಿತ್ ನಾಯಕನಾಗುವ ವಿಚಾರವಾಗಿಯೂ ಟ್ರೇವರ್ ಹ್ಯಾನ್ಸ್ ಮಾತನಾಡಿದರು. "ನಾನು ಈ ಬಗ್ಗೆ ಒಮದು ಮಾತನನ್ಷ್ಟೇ ಸ್ಪಷ್ಟವಾಗಿ ಹೇಳಬಹುದು. ಈ ಬಗ್ಗೆ ಈವರೆಗೆ ಚರ್ಚೆ ಆಗಿಲ್ಲ. ಮುಂದೆ ಆಗಲೂ ಬಹುದು. ನಾಯಕತ್ವಕ್ಕೆ ಆತ ಸ್ಪರ್ಧಿ. ಆದರೆ ನಾವು ಆತನಿಗೆ ನಾಯಕತ್ವ ನೀಡಬೇಕು ಅಥವಾ ನೀಡಬಾರದು ಎಂಬ ವಿಚಾರ ಅಂತಾ ಸಂದರ್ಭ ಉಂಟಾದಾಗ ಉದ್ಭವಿಸುತ್ತದೆ" ಎಂದಿದ್ದಾರೆ.

ಆಸ್ಟ್ರೇಲಿಯಾ ಗುರುವಾರ ಟೆಸ್ಟ್ ಕ್ರಿಕೆಟ್‌ಗೆ 17 ಸದಸ್ಯರ ತಂಡವನ್ನು ಘೋಷಿಸಿತ್ತು. ಇದರಲ್ಲಿ ಪ್ಯಾಟ್‌ಕಮ್ಮಿನ್ಸ್ ಅವರನ್ನು ಟಿನ್ ಪೈನ್‌ಗೆ ಉಪನಾಯಕನ್ನಾಗಿ ಆಯ್ಕೆ ಮಾಡಲಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡದ ನಾಯಕನಾಗಿ ಆರೋನ್ ಫಿಂಚ್ ಮುಂದುವರಿದಿದ್ದಾರೆ.

Story first published: Friday, November 20, 2020, 15:07 [IST]
Other articles published on Nov 20, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+