Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೆಸ್ಟ್: ಭಾರತಕ್ಕೆ ತಲೆ ಬಾಗಿದ್ದೇವೆ ಎಂದ ಪೈನೆ, ಟ್ವಿಟರ್ ಪ್ರತಿಕ್ರಿಯೆಗಳು

Tim Paine reacted on Kohli And Teams Win, twitter reactions

ಸಿಡ್ನಿ, ಜನವರಿ 7: ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಮುಕ್ತಾಯಗೊಂಡ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯನ್ನು 2-1ರಿಂದ ಜಯಿಸಿರುವ ಟೀಮ್ ಇಂಡಿಯಾಕ್ಕೆ ಟ್ವಿಟರ್ ಲೋಕದಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಟಿಮ್ ಪೈನೆ ಕೂಡ ವಿಶೇಷವಾಗಿ ಪ್ರತಿಕ್ರಿಯಿಸಿದ್ದಾರೆ.

'ಟೋಪಿ ಕಳಚಿ (ಹ್ಯಾಟ್ಸ್ ಆಫ್) ಭಾರತಕ್ಕೆ ತಲೆಬಾಗಿ ಗೌರವಿಸುತ್ತಿದ್ದೇವೆ. ಭಾರತಕ್ಕೆ ಹೋದಾಗ ಮತ್ತು ಅಂತಾರಾಷ್ಟ್ರೀಯ ನೆಲದಲ್ಲಿ ಆಡುವಾಗ ಭಾರತ ಸೋಲಿಸೋದು ಎಷ್ಟು ಕಷ್ಟ ಅನ್ನೋದನ್ನು ಗಮನಿಸಿದ್ದೇವೆ. ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿ ಶಾಸ್ತ್ರಿ ಅವರಿಗೆ ಅಭಿನಂದನೆಗಳು' ಎಂದು ಟಿಮ್ ಪೈನೆ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ.

ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಅಡಿಲೇಡ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ 31 ರನ್ ಮತ್ತು ಮೆಲ್ಬರ್ನ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ 137 ರನ್ ಗೆಲುವು ದಾಖಲಿಸಿತ್ತು. ಆಸೀಸ್ ತಂಡ ಪರ್ತ್ ನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್‌ನಲ್ಲಿ 146 ರನ್ ಜಯ ಗಳಿಸಿತ್ತು. ಸರಣಿ ಗೆದ್ದ ಬಳಿಕ ಟೀಮ್ ಇಂಡಿಯಾ, ಟ್ವಿಟರ್ ಜಗತ್ತಿನಲ್ಲಿ ಮುನುಗಿದ ಪರಿ ಕೆಳಗಿದೆ.

ಭಾರತ-ಪಾಕ್ ಹೋಲಿಕೆ

ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಆಸ್ಟ್ರೇಲಿಯಾ-ಭಾರತ ಮತ್ತು ಆಸೀಸ್-ಪಾಕ್ ಮುಖಾಮುಖಿಯನ್ನು ಸ್ಮರಿಸಿಕೊಂಡು ಪಾರ್ಥ ಶರ್ಮಾ ಅವರು ಟ್ವೀಟ್ ಮಾಡಿದ್ದಾರೆ. ಎಂಸಿಜಿಯಲ್ಲಿ 2016ರಲ್ಲಿ ನಡೆದಿದ್ದ 2ನೇ ಟೆಸ್ಟ್ ನಲ್ಲಿ ಆಸೀಸ್ ವಿರುದ್ಧ ಪಾಕ್ ಮೊದಲ ಇನ್ನಿಂಗ್ಸ್‌ನಲ್ಲಿ 443 ರನ್ ಪೇರಿಸಿತ್ತು. ಆದರೆ ಆ ಪಂದ್ಯವನ್ನು ಪಾಕ್ 18 ರನ್‌ಗಳಿಂದ ಸೋತಿತ್ತು. ಇದೇ ಮೈದಾನದಲ್ಲಿ 2018-19ರಲ್ಲಿ ನಡೆದಿದ್ದ 3ನೇ ಟೆಸ್ಟ್‌ನಲ್ಲಿ ಆಸೀಸ್ ವಿರುದ್ಧ ಭಾರತ ಕೂಡ ಮೊದಲ ಇನ್ನಿಂಗ್ಸ್‌ನಲ್ಲಿ 443 ರನ್ ಪೇರಿಸಿತ್ತು. ಪಂದ್ಯವನ್ನು 137 ರನ್ ಗಳಿಂದ ಭಾರತ ಗೆದ್ದಿತ್ತು!

ದೇವರಿಗೊಂದು ಥ್ಯಾಂಕ್ಸ್

ಆಸ್ಟ್ರೆಲಿಯಾ ಮಣ್ಣಿನಲ್ಲಿ ಭಾರತ ಟೆಸ್ಟ್ ಸರಣಿ ಗೆದ್ದು ಸಂಭ್ರಮಿಸುವಂತೆ ಮಾಡಿದ ದೇವರೆ ನಿಂಗೊಂದು ಥ್ಯಾಂಕ್ಸ್ ಎಂದು ಮನ್‌ಪ್ರೀತ್‌ ಸಿಂಗ್ ಟ್ವೀಟ್ ಮಾಡಿದ್ದಾರೆ. ಮೊದಲ ಟೆಸ್ಟ್ ಸರಣಿ ಜಯಿಸಿದ್ದಕ್ಕೆ ಟೀಮ್ ಇಂಡಿಯಾಕ್ಕೆ ಶುಭಾಶಯಗಳು ಎಂದಿದ್ದಾರೆ.

ಉತ್ತುಂಗದಲ್ಲಿ ಭಾರತ

ಆಸ್ಟ್ರೇಲಿಯಾದಲ್ಲಿ ಭಾರತ ಟೆಸ್ಟ್ ಸರಣಿ ಜಯಿಸಿದ್ದು ಭಾರತ ಕ್ರಿಕೆಟ್ ತಂಡದ ಅತ್ಯುತ್ತಮ ಸಾಧನೆ. ಈ ಸಾಧನೆಯಿಂದಾಗಿ ಭಾರತ ಕ್ರಿಕೆಟ್ ತಂಡ ಸಾಧನೆಯ ಉತ್ತುಂಗಕ್ಕೇರಿದೆ. 2-1ರಿಂದ ಸರಣಿ ಜಯಿಸಿದ್ದಕ್ಕೆ ವಿರಾಟ್ ಕೊಹ್ಲಿ ಮತ್ತು ಬಳಗಕ್ಕೆ ಅಭಿನಂದನೆಗಳು ಎಂದು ಸೌರಭ್ ಟ್ವೀಟ್.

ಇಡೀ ಭಾರತೀಯರಿಗೆ ಹೆಮ್ಮೆ

ಆಸ್ಟ್ರೇಲಿಯಾದಲ್ಲಿ ಮೊದಲ ಟೆಸ್ಟ್ ಸರಣಿ ಜಯಿಸಿದ್ದಕ್ಕೆ ಟೀಮ್ ಇಂಡಿಯಾಕ್ಕೆ ಅಭಿನಂದನೆಗಳು. ಎಲ್ಲಾ ಭಾರತೀಯರಿಗೆ ಹೆಮ್ಮೆ ಅನ್ನಿಸುವ ಸಾಧನೆಯನ್ನು ನೀವು ಮಾಡಿದ್ದೀರಿ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಮುಂಚೂಣಿಯಲ್ಲಿ ಯಾಕಿದೆ ಎಂಬುದನ್ನೂ ನೀವು ತೋರಿಸಿಕೊಟ್ಟಿದ್ದೀರಿ ಎಂದು ಮೂರನೇ ಟೆಸ್ಟ್ ಪಂದ್ಯ ಜಯಿಸಿ ಭಾರತ 2-1ರ ಮುನ್ನಡೆ ಪಡೆದುಕೊಂಡಾಗ ಮೊಹಮ್ಮದ್ ಇಲ್ಯಾಸ್ ಮಾಡಿದ್ದ ಟ್ವೀಟ್. ಭಾರತ ಟೆಸ್ಟ್ ಸರಣಿ ಜಯಿಸುವ ಮುನ್ಸೂಚನೆ ಆವತ್ತೇ ಸಿಕ್ಕಿತ್ತು.

71 ವರ್ಷಗಳ ನಂತರ ಜಯ

1948-49ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೆಸ್ಟ್ ಸರಣಿಯನ್ನು ಭಾರತ ಜಯಿಸಿತ್ತು. ಅನಂತರ ಸುಮಾರು 71 ವರ್ಷಗಳ ಕಾಲ ಆಸೀಸ್ ತಂಡ ತವರಿನಲ್ಲಿ ಭಾರತ ಗೆಲ್ಲದಂತೆ ತಡೆದಿತ್ತು. ಆದರೆ ಈ ಸಾರಿ ಕೊಹ್ಲಿ ಬಳಗ ಐತಿಹಾಸಿಕ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು.

Story first published: Monday, January 7, 2019, 19:24 [IST]
Other articles published on Jan 7, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+