Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ ಕ್ರಿಕೆಟರ್ಸ್ ಕೊಹ್ಲಿಯನ್ನು ದ್ವೇಷಿಸಲು ಇಷ್ಟಪಡುತ್ತಾರೆ: ಪೈನ್

Tim Paine says Australian cricketers ‘love to hate’ Virat Kohli

ಸಿಡ್ನಿ: ವಿರಾಟ್ ಕೊಹ್ಲಿ ಅಂದರೆ ಎದುರಾಳಿ ತಂಡದ ಆಟಗಾರರಿಗೆ ಸಣ್ಣ ಮಟ್ಟಿಗೆ ಮತ್ಸರ ಇದ್ದೇ ಇರುತ್ತದೆ. ಕೊಹ್ಲಿ ಕೂಡ ಕಿಚ್ಚಿನ ಆಟಗಾರ ಅನ್ನಿಸಿಕೊಂಡಿರುವುದು ಇದಕ್ಕೆ ಕಾರಣ. ಕೊಹ್ಲಿಗಿರುವ ಖ್ಯಾತಿಯೂ ಕೊಹ್ಲಿಯನ್ನು ಕೆಲ ಆಟಗಾರರು ದ್ವೇಷಿಸುವಂತೆ ಮಾಡಿರಬಹುದು.

ಸದ್ಯ ಬೇರೆ ತಂಡಗಳಿಗೆ ಹೋಲಿಸಿದರೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎದುರಾಳಿತ್ವ ಜೋರಿದೆ. ಕೊಹ್ಲಿ ಮತ್ತು ಆಸ್ಟ್ರೇಲಿಯಾ ಆಟಗಾರರ ಮಧ್ಯೆ ಕಹಿ ಅನುಭವಗಳಾಗಿದ್ದೂ ಇದೆ. ಈಗ ಮತ್ತೆ ಭಾರತ-ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗುವುದರಲ್ಲಿವೆ. ಭಾರತ ತಂಡ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದೆ.

ಕೊಹ್ಲಿ ಬಗ್ಗೆ ಆಸ್ಟ್ರೇಲಿಯಾ ಆಟಗಾರರಿಗಿರುವ ಅಭಿಪ್ರಾಯವನ್ನು ಆಸ್ಟ್ರೇಲಿಯಾ ಟೆಸ್ಟ್ ನಾಯಕ ಟಿಮ್ ಪೈನ್ ಹೇಳಿಕೊಂಡಿದ್ದಾರೆ. ಆಸ್ಟ್ರೇಲಿಯಾ ಆಟಗಾರರು ಕೊಹ್ಲಿಯನ್ನು ಒಬ್ಬ ಎದುರಾಳಿಯಾಗಿ ದ್ವೇಷಿಸಲು ಬಯಸುತ್ತಾರೆ. ಹಾಗೇನೆ, ಅಭಿಮಾನಿಯಾಗಿ ಅವರ ಬ್ಯಾಟಿಂಗ್ ನೋಡಲು ಇಷ್ಟಪಡುತ್ತಾರೆ ಎಂದು ಹೇಳಿದ್ದಾರೆ.

'ವಿರಾಟ್ ಒಬ್ಬ ತಮಾಷೆಯ ವ್ಯಕ್ತಿ. ಅವರನ್ನು ಎದುರಾಳಿಯಾಗಿ ನಾವು ದ್ವೇಷಿಸಲು ಇಷ್ಟಪಡುತ್ತೇವೆ. ಹಾಗೇನೆ ಅಭಿಮಾನಿಗಳಾಗಿ ಅವರ ಬ್ಯಾಟಿಂಗ್ ನೋಡಬಯಸುತ್ತೇವೆ. ನೇರವಾಗಿ ಹೇಳೋದಾದ್ರೆ ನಮಗೆ ಕೊಹ್ಲಿಯ ಬ್ಯಾಟಿಂಗ್ ನೋಡಲು ಇಷ್ಟ. ಆದರೆ ಅವರು ಹೆಚ್ಚು ರನ್ ಗಳಿಸುವುದನ್ನು ನೋಡಲು ಇಷ್ಟವಾಗಲ್ಲ,' ಎಂದು ಪೈನ್ ಹೇಳಿಕೊಂಡಿದ್ದಾರೆ.

Story first published: Friday, November 20, 2020, 15:04 [IST]
Other articles published on Nov 20, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+