ಅಡಿಲೇಡ್ ಪ್ರದರ್ಶನದ ಬಳಿಕ ನಾನು ಒತ್ತಡದಲ್ಲಿಲ್ಲ ಎಂದ ಆಸಿಸ್ ನಾಯಕ ಟಿಮ್ ಪೈನ್

ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೈನ್ ಅಡಿಲೇಡ್ ಪಂದ್ಯದಲ್ಲಿ ತಂಡದ ಉತ್ತಮ ಪ್ರದರ್ಶನದ ಬಳಿಕ ನಾನು ಈಗ ಒತ್ತಡದಲ್ಲಿ ಇಲ್ಲ ಎಂದಿದ್ದಾರೆ. ಅಹರ್ನಿಶಿಯಾಗಿ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಟೀಮ್ ಇಂಡಿಯಾವನ್ನು 8 ವಿಕೆಟ್‌ಗಳಿಂದ ಮಣಿಸಿದ್ದು ಮಾತ್ರವಲ್ಲದೆ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತವನ್ನು ಕೇವಲ 36 ರನ್‌ಗಳಿಗೆ ಕಟ್ಟಿಹಾಕಿತು.
ಆಸ್ಟ್ರೇಲಿಯಾ ತಂಡದ ಅದ್ಭುತವಾದ ಬ್ಯಾಟಿಂಗ್ ಲೈನ್‌ಅಪ್‌ನ ಕಾರಣದಿಂದಾಗಿ ನಾನು ಅದೃಷ್ಟವಂತ ಎಂದು ಟಿಮ್ ಪೈನ್ ಹೇಳಿದ್ದಾರೆ. ಬಹುತೇಕ ಸಂದರ್ಭಗಳಲ್ಲಿ ಆಸ್ಟ್ರೇಲುಯಾದ ಬ್ಯಾಟಿಂಗ್ ಲೈನ್‌ಅಪ್ ತನ್ನ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸುತ್ತದೆ. ಹೀಗಾಗಿ ತಂಡವನ್ನು ಮುನ್ನಡೆಸುವ ಸಂದರ್ಭದಲ್ಲಿ ಯಾವುದೇ ರೀತಿಯ ಉತ್ತಡ ಇರುವುದಿಲ್ಲ ಎಂದು ಪೈನ್ ಹೇಳಿದ್ದಾರೆ.
ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ಆಟಗಾರರು ಅಡಿಲೇಡ್ ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ನೀಡಿರುವುದು ಒತ್ತಡವನ್ನುಂಡು ಮಾಡಿದೆಯಾ ಎಂಬ ಪ್ರಶ್ನೆಗೆ ಟಿಮ್ ಪೈನ್ ಉತ್ತರಿಸಿದರು. "ಖಂಡಿತಾ ಇಲ್ಲ. ಬ್ಯಾಟ್ಸ್‌ಮನ್ ಆಗಿ ಕೆಲ ಇನ್ನಿಂಗ್ಸ್‌ಗಳಲ್ಲಿ ನಾನು ಪ್ರಭಾವವನ್ನು ಬೀರಲೇ ಬೇಕಿತ್ತು. ಅತ್ಯುತ್ತಮ ಬ್ಯಾಟಿಂಗ್ ವಿಭಾಗವನ್ನು ಹೊಂದಿರುವುದಕ್ಕೆ ನಾನು ಅದೃಷ್ಟವಂತ" ಎಂದು ಟಿಮ್ ಪೈನ್ ಎನ್‌ಐಗೆ ಪ್ರತಿಕ್ರಿಯಿಸಿದರು.
"ಕಳೆದ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗಿರುವುದು ನನ್ನ ಜವಾಬ್ಧಾರಿಯಾಗಿತ್ತು. ಯಾವಾಗ ನಾನು ಅಂಗಳಕ್ಕೆ ಇಳಿಯುವಾಗ 100 ರನ್‌ಗಳಿಗೆ 5 ವಿಕೆಟ್ ಅಥವಾ 70 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದರೆ ನನಗೆ ನನ್ನ ಕರ್ತವ್ಯ ನಿರ್ವಹಿಸಲು ಅವಕಾಶ ದೊರೆಯುತ್ತದೆ" ಎಂದರು ಪೈನ್ ವಿವರಿಸಿದರು.
ಇನ್ನು ಆಸ್ಟ್ರೇಲಿಯಾದ ಕೋಚ್ ಜಸ್ಟಿನ್ ಲ್ಯಾಂಗರ್ ಟಿಮ್ ಪೈನ್ ಅವರ ನಾಯಕತ್ವದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಇದೇ ಸಂದರ್ಭದಲ್ಲಿ ಜಸ್ಟಿನ್ ಲ್ಯಾಂಗರ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಆಡಂ ಗಿಲ್‌ಕ್ರಿಸ್ಟ್ ಬಳಿಕ ಕಂಡ ಎರಡನೇ ಅತ್ಯುತ್ತಮ ವಿಕೆಟ್ ಕೀಪರ್ ಎಂದು ಟಿಮ್ ಪೈನ್ ಅವರನ್ನು ಹೊಗಳಿದ್ದಾರೆ. ಟಿಮ್ ಪೈನ್ ಅವರ ನಾಯಕತ್ವ ಬ್ಯಾಟಿಂಗ್ ಅಥವಾ ವಿಕೆಟ್ ಕೀಪಿಂಗ್ ಈ ಎಲ್ಲಾ ವಿಚಾರಗಳಲ್ಲಿ ನಾನು ಸಂಪೂರ್ಣವಾದ ನಂಬಿಕೆಯನ್ನು ಹೊಂದಿದ್ದೇನೆ ಎಂದು ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications