For Quick Alerts
ALLOW NOTIFICATIONS  
For Daily Alerts
 

Tim Southee: ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನ್ಯೂಜಿಲೆಂಡ್ ಮಾಜಿ ನಾಯಕ

ನ್ಯೂಜಿಲೆಂಡ್‌ನ ಮಾಜಿ ನಾಯಕ ಮತ್ತು ಬಲಗೈ ಸ್ಟಾರ್ ವೇಗದ ಬೌಲರ್ ಟಿಮ್ ಸೌಥಿ ತಮ್ಮ ನಿವೃತ್ತಿಯ ಸುಳಿವು ನೀಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಯ ನಂತರ ಅವರು ತಮ್ಮ ಟೆಸ್ಟ್ ಕ್ರಿಕೆಟ್‌ನ ವೃತ್ತಿಜೀವನವನ್ನು ಕೊನೆಗೊಳಿಸಲಿದ್ದಾರೆ. ನವೆಂಬರ್ 28 ರಿಂದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ 3 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಟಿಮ್ ಸೌಥಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಡಿಸೆಂಬರ್ 14-18 ರ ನಡುವೆ ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್‌ನಲ್ಲಿ ಆಡಲಿದ್ದಾರೆ.

ಟಿಮ್ ಸೌಥಿ ತಮ್ಮ ವೃತ್ತಿಜೀವನದಲ್ಲಿ ಒಟ್ಟು 1124 ವಿಕೆಟ್ ಕಬಳಿಸಿದ್ದಾರೆ. ನ್ಯೂಜಿಲೆಂಡ್ ಪರ ಇದುವರೆಗೆ ಅವರು ಒಟ್ಟು 104 ಪಂದ್ಯಗಳನ್ನು ಆಡಿದ್ದು, 385 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಕಿವೀಸ್ ಪರ ಅತಿಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ. ಮಾಜಿ ದಿಗ್ಗಜ ಆಟಗಾರ ರಿಚರ್ಡ್ ಹ್ಯಾಡ್ಲಿ ಅವರು 431 ಟೆಸ್ಟ್ ವಿಕೆಟ್‌ಗಳನ್ನು ಉರುಳಿಸಿದ್ದಾರೆ.

Tim Southee announced retirement from international test cricket

ಡಬ್ಲ್ಯೂಟಿಸಿ ಫೈನಲ್ ಆಡುವ ಸಾಧ್ಯತೆ

ಟಿಮ್ ಸೌಥಿ 2008 ರಲ್ಲಿ ಇಂಗ್ಲೆಂಡ್ ವಿರುದ್ಧ ನೇಪಿಯರ್‌ನಲ್ಲಿ ನ್ಯೂಜಿಲೆಂಡ್‌ಗಾಗಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ಅಂದಿನಿಂದ ಟಿಮ್ ಸೌಥಿ ಕಿವೀಸ್ ಪರ ಮೂರು ಮಾದರಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈಗ ಟೆಸ್ಟ್ ಕ್ರಿಕೆಟ್‌ಗೆ ಗುಡ್ ಬೈ ಹೇಳಲು ಟಿಮ್ ಸೌಥಿ ರೆಡಿಯಾಗಿದ್ದಾರೆ. ಒಂದು ವೇಳೆ ನ್ಯೂಜಿಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ (ಡಬ್ಲ್ಯೂಟಿಸಿ) ‌ಗೆ ಅರ್ಹತೆ ಪಡೆದರೆ, ಜೂನ್‌ನಲ್ಲಿ ಲಾರ್ಡ್ಸ್‌ನಲ್ಲಿ ನಡೆಯಲಿರುವ ಪಂದ್ಯಕ್ಕೆ ಹಾಜರಾಗುವುದಾಗಿ ಅವರು ತಿಳಿಸಿದ್ದಾರೆ.

ವೃತ್ತಿಜೀವನ

ಟಿಮ್ ಸೌಥಿ 104 ಟೆಸ್ಟ್, 161 ಏಕದಿನ ಮತ್ತು 125 ಟಿ20 ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ್ದಾರೆ. ಎಲ್ಲಾ ಮೂರು ಸ್ವರೂಪಗಳಲ್ಲಿ 770 ವಿಕೆಟ್‌ಗಳನ್ನು ಪಡೆದಿದ್ದಾರೆ. ಸೌಥಿ 4 ಏಕದಿನ ವಿಶ್ವಕಪ್‌, 7 ಟಿ20 ವಿಶ್ವಕಪ್‌ ಮತ್ತು 2 ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳಲ್ಲಿ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 2019-2021ರ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದ ತಂಡದ ಸದಸ್ಯರೂ ಆಗಿದ್ದರು.

ಟಿಮ್ ಸೌಥಿ 104 ಟೆಸ್ಟ್ ಪಂದ್ಯಗಳಲ್ಲಿ 385 ವಿಕೆಟ್‌ಗಳ ಜೊತೆಗೆ 2185 ರನ್‌ಗಳನ್ನು ಕಲೆ ಹಾಕಿದ್ದಾರೆ. ಅವರು ಬೌಲಿಂಗ್ ಜೊತೆಗೆ ಉತ್ತಮ ಬ್ಯಾಟರ್ ಕೂಡ ಆಗಿದ್ದಾರೆ. ಡೆತ್ ಓವರ್‌ಗಳಲ್ಲಿ ಬಿಗ್ ಶಾಟ್ ಹೊಡೆಯುವುದಕ್ಕೆ ಅವರು ಹೆಸರುವಾಸಿಯಾಗಿದ್ದಾರೆ. ಬ್ರೆಂಡನ್ ಮೆಕಲಮ್ ನಂತರ, ಸೌಥಿ ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್‌ ಪರ
ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಟಿಮ್ ಸೌಥಿ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಒಟ್ಟು 93 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

Story first published: Friday, November 15, 2024, 15:46 [IST]
Other articles published on Nov 15, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+