ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಈ ಆರ್‌ಸಿಬಿ ಬೌಲರ್‌ಗಳಿಗೆ ಗೇಟ್‌ಪಾಸ್?; ಕೋಚ್ ಸುಳಿವು
ಬುಧವಾರ, ಮೇ 23ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ನಿರ್ಣಾಯಕ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್‌ಗಳಿಂದ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಪಂದ್ಯಾವಳಿಯಿಂದ ಹೊರಬಿದ್ದಿದೆ.
ಈ ಮೂಲಕ ಒಮ್ಮೆಯಾದರೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ರೋಫಿ ಗೆಲ್ಲುವ ಆರ್‌ಸಿಬಿ ತಂಡದ ಆಸೆ ಅಂತ್ಯಗೊಂಡಿದೆ. ಬರೋಬ್ಬರಿ 17ನೇ ವರ್ಷವೂ ಐಪಿಎಲ್ ಟ್ರೋಫಿ ಬರ ಆರ್‌ಸಿಬಿ ತಂಡ ಎದುರಿಸುವಂತಾಗಿದೆ ಮತ್ತು ಅಭಿಮಾನಿಗಳ ಕಾಯುವಿಕೆ ಮುಂದುವರೆದಿದೆ.

ಇದೇ ವೇಳೆ ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ತಂಡದಲ್ಲಿ ಹಲವು ಬದಲಾವಣೆ ಕಾಣಬಹುದು. ಯಾವ ಆಟಗಾರರನ್ನು ಉಳಿಸಿಕೊಳ್ಳಬಹುದು ಮತ್ತು ಯಾರನ್ನು ಕೈಬಿಡಬಹುದು ಎಂಬ ಕುತೂಹಲ ಮೂಡಿಸಿದೆ. ಈ ಬಗ್ಗೆ ಆರ್‌ಸಿಬಿ ಕೋಚ್ ಆಂಡಿ ಫ್ಲವರ್ ಕೆಲವು ಮುನ್ಸೂಚನೆ ನೀಡಿದ್ದಾರೆ.
ಎಂ ಚಿನ್ನಸ್ವಾಮಿಯಲ್ಲಿ ಸ್ಥಿರವಾಗಿ ಟಿ20 ಪಂದ್ಯಗಳನ್ನು ಗೆಲ್ಲಲು ಕೇವಲ ವೇಗ ಮಾತ್ರ ಎಂದಿಗೂ ಸಾಕಾಗುವುದಿಲ್ಲ. ವಿಭಿನ್ನ ಕೌಶಲ್ಯಗಳನ್ನು ಹೊಂದಿರುವ ಬೌಲರ್‌ಗಳು ಬೇಕಿದೆ. ಆರ್‌ಸಿಬಿ ತಂಡದ ನಿರ್ದಿಷ್ಟ ಯೋಜನೆಯನ್ನು ಕಾರ್ಯಗತಗೊಳಿಸುವುದು ಅಗತ್ಯವಾಗಿರುತ್ತದೆ ಎಂದು ಮುಖ್ಯ ಕೋಚ್ ಆಂಡಿ ಫ್ಲವರ್ ಹೇಳಿದರು.

ಆರ್‌ಸಿಬಿ ಸತತ ಆರು ಪಂದ್ಯಗಳ ಗೆಲುವುಗಳೊಂದಿಗೆ "ಎಲಿಮಿನೇಟರ್'ಗೆ ಅರ್ಹತೆ ಪಡೆದರೆ, ಅದಕ್ಕೂ ಮುನ್ನ ತವರಿನ ಎಂ ಚಿನ್ನಸ್ವಾಮಿಯಲ್ಲಿ ತನ್ನ ಹೆಚ್ಚಿನ ಪಂದ್ಯಗಳನ್ನು ಸೋತಿತು.
ತಂಡದ ಪ್ರಮುಖ ವೇಗಿಗಳಾದ ಮೊಹಮ್ಮದ್ ಸಿರಾಜ್ (ಎಕಾನಮಿ ದರ 9.18), ಲಾಕಿ ಫರ್ಗುಸನ್ (ಎಕಾನಮಿ ದರ 10.62), ಯಶ್ ದಯಾಳ್ (ಎಕಾನಮಿ ದರ 9.14), ರೀಸ್ ಟೋಪ್ಲೆ (ಎಕಾನಮಿ ದರ 11.200 ಮತ್ತು ಕರ್ಣ್ ಶರ್ಮಾ (ಎಕಾನಮಿ ದರ 10.58) ಪಂದ್ಯಾವಳಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.
"ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಿಮಗೆ ನಿಸ್ಸಂಶಯವಾಗಿ ಹೆಚ್ಚು ನುರಿತ ಬೌಲರ್‌ಗಳ ಅಗತ್ಯವಿದೆ. ಕೇವಲ ವೇಗ ಅಲ್ಲಿ ಕೆಲಸ ಮಾಡುವುದಿಲ್ಲ. ನಿಮಗೆ ಕೌಶಲ್ಯಪೂರ್ಣ, ಬುದ್ಧಿವಂತ ಬೌಲರ್‌ಗಳು ಮತ್ತು ಚಿನ್ನಸ್ವಾಮಿಯಲ್ಲಿ ನಿಜವಾಗಿಯೂ ನಿರ್ದಿಷ್ಟ ಯೋಜನೆಗಳಿಗೆ ಬೌಲಿಂಗ್ ಮಾಡುವ ಬೌಲರ್‌ಗಳು ಬೇಕು," ಎಂದು ಆಂಡಿ ಫ್ಲವರ್ ತಿಳಿಸಿದರು.
ಮುಂದಿನ 2025ರ ಐಪಿಎಲ್‌ಗಿಂತ ಮೊದಲು ಮೆಗಾ ಹರಾಜು ನಡೆಯಲಿದ್ದು, ಆರ್‌ಸಿಬಿ ನಿರ್ದಿಷ್ಟ ರೀತಿಯ ಆಟಗಾರರನ್ನು ಆಯ್ಕೆ ಮಾಡಬೇಕೆಂದು ಆಂಡಿ ಫ್ಲವರ್ ಬಯಸಿದರು.
"ನಾನು ಇನ್ನೂ ಆ ವಿಷಯದ ಬಗ್ಗೆ ಮಾತನಾಡಲು ಬಯಸುವುದಿಲ್ಲ, ಈ ಪಂದ್ಯಾವಳಿಯಲ್ಲಿ ಏನಾಯಿತು ಎಂಬುದನ್ನು ನಾನು ಇನ್ನೂ ಜೀರ್ಣಿಸಿಕೊಳ್ಳುತ್ತಿದ್ದೇನೆ. ಆದರೆ, ನಿಮ್ಮ ಪ್ರಶ್ನೆಗೆ ಉತ್ತರವಾಗಿ, ಎಂ ಚಿನ್ನಸ್ವಾಮಿ ಕೆಲವು ನಿರ್ದಿಷ್ಟ ಗುಣಗಳನ್ನು ಹೊಂದಿದ್ದು, ಅದನ್ನು ನಾವು ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ," ಎಂದು ಮುಂದಿನ ವರ್ಷಕ್ಕೆ ಫ್ರಾಂಚೈಸಿಯ ವಿಧಾನವು ಏನು ಎಂದು ಕೇಳಿದಾಗ ಆಂಡಿ ಫ್ಲವರ್ ಉತ್ತರಿಸಿದರು.
ಆರ್‌ಸಿಬಿಗೆ ಪವರ್ ಹಿಟ್ಟರ್‌ಗಳು ಬೇಕಾಗಿದ್ದಾರೆ
ಆರ್‌ಸಿಬಿ ತಂಡವು ಬ್ಯಾಟಿಂಗ್ ಕ್ರಮಾಂಕದಲ್ಲಿ ಉತ್ತಮ ಪವರ್-ಹಿಟ್ಟರ್ ಆಟಗಾರರನ್ನು ಬಯಸುತ್ತದೆ. ಅವರು ಆಟದ ಗತಿಯನ್ನು ಬದಲಿಸಬಹುದು ಎಂದು ಆಂಡಿ ಫ್ಲವರ್ ಹೇಳಿದರು.
"ಇತ್ತೀಚೆಗೆ ಟಿ20 ಕ್ರಿಕೆಟ್‌ನ ಮೇಲೆ ಆಕ್ರಮಣಕಾರಿ ಆಟ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. ಬ್ಯಾಟಿಂಗ್ ಕ್ರಮಾಂಕದಲ್ಲಿ, ಖಂಡಿತವಾಗಿಯೂ ಆ ರೀತಿಯ ಶಕ್ತಿಯೊಂದಿಗೆ ಬ್ಯಾಟ್ಸ್‌ಮನ್‌ಗಳನ್ನು ನೇಮಿಸಿಕೊಳ್ಳಬೇಕು. ಅದು ಪಂದ್ಯದ ಗತಿಯನ್ನು ಬದಲಿಸಬಹುದು," ಎಂದು ತಿಳಿಸಿದರು.
'ಇಂಪ್ಯಾಕ್ಟ್ ಪ್ಲೇಯರ್' ವಿಧಾನ ಬೆಂಬಲಿಸಿದ ಆರ್‌ಸಿಬಿ ಕೋಚ್
ಇಬ್ಬರು ಭಾರತೀಯ ಆಟಗಾರರಿಗೆ ಆಟದಲ್ಲಿ ಭಾಗವಹಿಸಲು ಅವಕಾಶ ನೀಡುತ್ತದೆ ಎಂದು 'ಇಂಪ್ಯಾಕ್ಟ್ ಪ್ಲೇಯರ್' ನಿಯಮವನ್ನು ಆಂಡಿ ಫ್ಲವರ್ ಬೆಂಬಲಿಸಿದರು.
"ಇದು ಸಂಪೂರ್ಣವಾಗಿ ಕೆಲವು ಸಕಾರಾತ್ಮಕ ಅಂಶಗಳನ್ನು ಪಡೆದುಕೊಂಡಿದೆ. ಈಗ ಹೆಚ್ಚುವರಿ ಭಾರತೀಯ ಆಟವಾಡಿದರೆ, ಅದು ಭಾರತೀಯ ಕ್ರಿಕೆಟ್‌ಗೆ ಒಳ್ಳೆಯದು. ಇದು ಬ್ಯಾಟ್ಸ್‌ಮನ್‌ಗಳನ್ನು ವೇಗಗೊಳಿಸುತ್ತದೆ," ಎಂದು ಆಂಡಿ ಫ್ಲವರ್ ಅಭಿಪ್ರಾಯಪಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications