ಟೆಸ್ಟ್ ತಂಡದಿಂದ ಔಟ್ ಆಗಿದ್ದ ಮುರಳಿ ವಿಜಯ್ ಗೆ 'ಇಂಗ್ಲೆಂಡ್'ನಿಂದ ಆಫರ್

ಬೆಂಗಳೂರು, ಆಗಸ್ಟ್ 27: ಭಾರತ ಏಕದಿನ ಮತ್ತು ಟಿ-ಟ್ವೆಂಟಿ ತಂಡದಿಂದ ಶಾಶ್ವತವಾಗಿ ಹೊರಗುಳಿದಿರುವ ಮುರಳಿ ವಿಜಯ್ ಟೆಸ್ಟ್ ತಂಡದಲ್ಲಿ ಖಾಯಂ ಸ್ಥಾನ ಪಡೆದುಕೊಂಡಿದ್ದರು. ಆದರೆ, ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಮುರಳಿ ವಿಜಯ್ ಅವರನ್ನು ತಂಡದಿಂದ ಕೈಬಿಟ್ಟು ಬಿಸಿಸಿಐ ಆಯ್ಕೆದಾರರು ಅಚ್ಚರಿ ನೀಡಿದ್ದರು.
ಇದೀಗ, ಮುರಳಿ ವಿಜಯ್ ಗೆ ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ಕ್ಲಬ್ ಕಡೆಯಿಂದ ಆಫರ್ ಬಂದಿದೆ. ಒಲಿದು ಬಂದ ಅವಕಾಶವನ್ನ ಒಪ್ಪಿಕೊಂಡಿರುವ ಟೆಸ್ಟ್ ಓಪನರ್, ಇಂಗ್ಲೆಂಡ್ ಗೆ ಹಾರಲಿದ್ದಾರೆ. ಈ ಮೂಲಕ ಮುಂಬರುವ ದಿನದಲ್ಲಿ ದಕ್ಷಿಣ ಆಫ್ರಿಕಾ ಸರಣಿಗೆ ಆಯ್ಕೆಯಾಗುವ ತಯಾರಿ ಆರಂಭಿಸಿದ್ದಾರೆ. ಅಷ್ಟಕ್ಕೂ, ಮುರಳಿ ವಿಜಯ್ ಇಂಗ್ಲೆಂಡ್ ಕೌಂಟಿಯಲ್ಲಿ ಯಾವ ತಂಡದ ಪರ ಆಡಲಿದ್ದಾರೆ? ಮುಂದೆ ಓದಿ....

ಸಮರ್ ಸೆಟ್ ತಂಡದಲ್ಲಿ ಮುರಳಿ
ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಸ್ಪೆಕ್ ಸೇವರ್ಸ್ ಕೌಂಟಿ ಚಾಂಪಿಯನ್ ಷಿಪ್ ಟೂರ್ನಿಯಲ್ಲಿ ಸಮರ್ ಸೆಟ್ ತಂಡದ ಪರ ಭಾರತದ ಮುರಳಿ ವಿಜಯ್ ಅಖಾಡಕ್ಕೆ ಇಳಿಯಲಿದ್ದಾರೆ. ಕೊನೆಯ ಮೂರು ಪಂದ್ಯಗಳಲ್ಲಿ ಸಮರ್ ಸೆಟ್ ತಂಡದ ಓಪನರ್ ಆಗಿ ಬ್ಯಾಟ್ ಬೀಸಲಿದ್ದಾರೆ ಮುರಳಿ ವಿಜಯ್.

ಅಜರ್ ಅಲಿ ಔಟ್, ಮುರಳಿ ಇನ್
ಸಮರ್ ಸೆಟ್ ತಂಡದ ಪರವಾಗಿ ಆಡುತ್ತಿದ್ದ ಪಾಕಿಸ್ತಾನದ ಅಜರ್ ಅಲಿ ತಂಡದಿಂದ ಹೊರಗುಳಿದಿದ್ದಾರೆ. ಪಾಕಿಸ್ತಾನ ತಂಡದಿಂದ ಅಜರ್ ಗೆ ಬುಲಾವ್ ಬಂದಿದ್ದು, ಆ ಜಾಗಕ್ಕೆ ಮುರಳಿ ವಿಜಯ್ ಆಯ್ಕೆಯಾಗಿದ್ದಾರೆ ಎಂದು ಸಮರ್ ಸೆಟ್ ಕ್ರಿಕೆಟ್ ಕ್ಲಬ್ ಅಧಿಕೃತವಾಗಿ ತಿಳಿಸಿದೆ.

ಕಳೆದ ವರ್ಷ ಅಬ್ಬರಿಸಿದ್ದ ವಿಜಯ್
ಕಳೆದ ವರ್ಷ ಇಂಗ್ಲೆಂಡ್ ಕೌಂಟಿಯಲ್ಲಿ ಎಸೆಕ್ಸ್ ತಂಡದ ಪರ ಆಡಿದ್ದ ಮುರಳಿ ವಿಜಯ್ ಮೂರು ಪಂದ್ಯಗಳಲ್ಲಿ 64.60 ಸರಾಸರಿಯಲ್ಲಿ 320 ರನ್ ಬಾರಿಸಿದ್ದರು. ಇದರಲ್ಲಿ ಮೂರು ಅರ್ಧ ಶತಕ ಮತ್ತು ಒಂದು ಶತಕ ಒಳಗೊಂಡಿತ್ತು. ವಿಜಯ್ ಅಮೋಘ ಆಟಕ್ಕೆ ಫಿದಾ ಆಗಿದ್ದ ಸಮರ್ ಸೆಟ್ ಈ ಬಾರಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ.

ತಂಡಕ್ಕೆ ಮರುಳಲು ಒಳ್ಳೆಯ ಅವಕಾಶ
ಭಾರತ ಟೆಸ್ಟ್ ತಂಡದ ಖಾಯಂ ಆಟಗಾರನಾಗಿದ್ದ ವಿಜಯ್ ಗೆ ಈಗ ಪೈಪೋಟಿ ಹೆಚ್ಚಿದೆ. ಮಯಾಂಕ್ ಅಗರ್ ವಾಲ್, ಕೆಎಲ್ ರಾಹುಲ್ ಅಂತಹ ಯುವ ಆಟಗಾರರು ರೇಸ್ ನಲ್ಲಿದ್ದಾರೆ. ಇಂಗ್ಲೆಂಡ್ ಕೌಂಟಿಯಲ್ಲಿ ಉತ್ತಮ ಪ್ರದರ್ಶನ ನೀಡಿ ತವರಿನಲ್ಲಿ ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೆ ಕಂಬ್ಯಾಕ್ ಮಾಡಬೇಕಾದ ಅನಿವಾರ್ಯತೆ ಇದೆ. ಒಂದು ವೇಳೆ ದಕ್ಷಿಣ ಆಫ್ರಿಕಾ ಸರಣಿಯಿಂದಲೂ ವಿಜಯ್ ಹೊರಗುಳಿದರೆ ವಿಜಯ್ ವೃತ್ತಿ ಬದುಕು ಬಹುತೇಕ ಮುಚ್ಚಿದಂತೆ.

ಮುರಳಿ ವಿಜಯ್ ಅಂಕಿ-ಅಂಶ
35 ವರ್ಷದ ಮುರಳಿ ವಿಜಯ್ ಭಾರತದ ಪರ 61 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. 38.28 ಸರಾಸರಿಯಲ್ಲಿ ಒಟ್ಟು 3982 ರನ್ ಬಾರಿಸಿದ್ದಾರೆ. ವೈಯಕ್ತಿಕವಾಗಿ ವಿಜಯ್ ಅವರ ಗರಿಷ್ಠ ಸ್ಕೋರ್ 167. ಲೀಸ್ಟ್ ಎ ಕ್ರಿಕೆಟ್ ನಲ್ಲಿ 131 ಟೆಸ್ಟ್ ಪಂದ್ಯಗಳನ್ನ ಆಡಿರುವ ವಿಜಯ್ 42.79ರ ಸರಾಸರಿಯಲ್ಲಿ 9116ರನ್ ಪೇರಿಸಿದ್ದಾರೆ. 266 ವೈಯಕ್ತಿಕವಾಗಿ ಗರಿಷ್ಠ ಸ್ಕೋರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications