Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

TNPL 2023: 1 ಎಸೆತದಲ್ಲಿ 18 ರನ್ ಬಿಟ್ಟುಕೊಟ್ಟ ವೇಗಿ; ಅತಿ ಕೆಟ್ಟ ದಾಖಲೆ ಬರೆದ ತಮಿಳುನಾಡು ಬೌಲರ್!: ವಿಡಿಯೋ

ತಮಿಳುನಾಡು ಪ್ರೀಮಿಯರ್ ಲೀಗ್‌ನ 7ನೇ ಆವೃತ್ತಿ ಆರಂಭವಾಗಿದ್ದು ಭರ್ಜರಿ ಆರಂಭ ಪಡೆದುಕೊಂಡಿದೆ. ಈ ಟೂರ್ನಿಯ ಎರಡನೇ ಪಂದ್ಯದಲ್ಲಿಯೇ ಬೇಡದ ದಾಖಲೆಯೊಂದು ಸೃಷ್ಟಿಯಾಗಿದೆ. ಚೆಪಾಕ್ ಗಿಲ್ಲೀಸ್ ಹಾಗೂ ಸೇಲಂ ಸ್ಪಾರ್ಟನ್ಸ್ ತಂಡಗಳು ಎರಡನೇ ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಸೇಲಂ ಸ್ಪಾರ್ಟನ್ಸ್ ತಂಡದ ಬೌಲರ್ ಅಭಿಶೇಕ್ ತನ್ವರ್ ಎದುರಾಳಿ ತಂಡಕ್ಕೆ ರನ್ ಬಿಟ್ಟುಕೊಟ್ಟಿದ್ದಾರೆ.

ಸೇಲಂ ಸ್ಪಾರ್ಟನ್ಸ್ ಪರ ಕೊನೆಯ ಓವರ್ ಬೌಲಿಂಗ್ ಮಾಡಲು ಕಣಕ್ಕಿಳಿದ ವೇಗಿ ಅಭಿಶೇಕ್ ಮೊದಲ ಐದು ಎಸೆತಗಳಲ್ಲಿ ಕೇವಲ 7 ರನ್‌ಗಳನ್ನು ಬಿಟ್ಟುಕೊಟ್ಟು ಉತ್ತಮವಾಗಿಯೇ ಬೌಲಿಂಗ್ ಮಾಡಿದ್ದರು. ಕೊನೆಯ ಎಸೆತವನ್ನು ಕೂಡ ಅಭಿಶೇಕ್ ಅದ್ಭುತ ಯಾರ್ಕರ್ ಎಸೆದು ಬ್ಯಾಟರ್‌ಅನ್ನು ಬೌಲ್ಡ್ ಮಾಡಿದರು. ಆದರೆ ಅದು ನೋಬಾಲ್ ಎಂದು ಅಂಪೈರ್ ಘೋಷಿಸಿದಾಗ ನಿರಾಸೆ ಅನುಭವಿಸಿದರು. ನಂತರ ಮತ್ತೆ ಇನ್ನಿಂಗ್ಸ್‌ನ ಕೊನೆಯ ಎಸೆತವನ್ನು ಎಸೆದ ಅಭಿಶೇಕ್ ಎಸೆತವನ್ನು ಕ್ರೀಸ್‌ನಲ್ಲಿದ್ದ ಸಂಜಯ್ ಯಾದವ್ ಭರ್ಜರಿ ಸಿಕ್ಸರ್‌ಗ ಅಟ್ಟಿದರು. ಅದು ಕೂಡ ನೋಬಾಲ್ ಎಂದು ಅಂಫೈರ್ ಘೋಷಿಸಿದರು.

TNPL 2023: Abhishek Tanwar Created history of Conceding Highest Score in a ball

ನಂತರ ಎಸೆದ ಎಸೆತ ಕೂಡ ನೋಬಾಲ್. ಆಗ ಎರಡು ರನ್‌ಗಳು ಎದುರಾಳಿ ತಂಡದ ಖಾತೆಗೆ ದೊರೆಯಿತು. ನಾಲ್ಕನೇ ಬಾರಿಗೆ ಕೊನೆಯ ಎಸೆತವನ್ನು ಎಸೆದಾಗ ಅದು ವೈಡ್ ಆಗಿ ಮತ್ತೊಂದು ಎಕ್ಸ್ಟ್ರಾ ರನ್ ತಂಡಕ್ಕೆ ಸೇರ್ಪಡೆಯಾಯಿತು. ಬಳಿಕ ಕಡೆಗೂ ಲೀಗಲ್ ಎಸೆತವನ್ನು ಎಸೆದರೆ ಅದನ್ನು ಕೂಡ ಸಿಕ್ಸರ್‌ಗೆ ಅಟ್ಟಿದರು ಸಂಜಯ್ ಯಾದವ್.

ಈ ಮೂಲಕ ಒಂದೇ ಎಸೆತದಲ್ಲಿ 18 ರನ್‌ಗಳನ್ನು ಕಲೆಹಾಕಿತು ಚೆಪಾಕ್ ಗಿಲ್ಲೀಸ್ ತಂಡ. ಈ ಕಾರಣದಿಂದಾಗಿ ನಿಗದಿತ 20 ಓವರ್‌ಗಳಲ್ಲಿ ಚೆಪಾಕ್ ತಂಡ 5 ವಿಕೆಟ್ ಕಳೆದುಕೊಂಡು 217 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಲು ಯಶಸ್ವಿಯಾಯಿತು. ಸಂಜಯ್ ಯಾದವ್ ಕೇವಲ 12 ಎಸೆತಗಳಲ್ಲಿ 31 ರನ್‌ಗಳನ್ನು ಗಳಿಸಿದರೆ ಆರಂಭಿಕ ಆಟಗಾರ ಪ್ರದೋಶ್ ಪೌಲ್ 55 ಎಸೆತಗಳಲ್ಲಿ 88 ರನ್‌ಗಳನ್ನು ಬಾರಿಸಿ ಅಬ್ಬರಿಸಿದರು.

ಇನ್ನು ಈ ಮೊತ್ತವನ್ನು ಬೆನ್ನಟ್ಟಿದ ಸೇಲಂ ಸ್ಪಾರ್ಟನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಯಿತು. ಮಹ್ಮದ್ ಅದ್ನಾನ್ ಖಾನ್ ಅಂತಿಮ ಹಂತದಲ್ಲಿ ಕೇವಲ 15 ಎಸೆತಗಳಲ್ಲಿ 47 ರನ್‌ಗಳಿಸಿದರಾದರೂ ಅದು ತಂಡದ ನೆರವಿಗೆ ಬರಲಿಲ್ಲ. ಉಳಿದ ಆಟಗಾರರು ನೀರಸ ಪ್ರದರ್ಶನ ನೀಡಿದ ಕಾರಣ ಸೋಲು ಚೆಪಾಕ್ ಗಿಲ್ಲೀಸ್ ವಿರುದ್ಧ ಸೋಲು ಅನುಭವಿಸಿತು.

ಚೆಪಾಕ್ ಸೂಪರ್ ಗಿಲ್ಲೀಸ್: ಎಸ್ ಅಭಿಷೇಕ್, ಕೌಶಿಕ್ ಗಾಂಧಿ, ಆರ್ ಎಸ್ ಮೋಕಿತ್ ಹರಿಹರನ್, ಅಮಿತ್ ಸಾಥ್ವಿಕ್ (ವಿಕೆಟ್ ಕೀಪರ್), ಮಾನ್ ಬಫ್ನಾ, ಸನ್ನಿ ಸಂಧು, ಅಭಿಷೇಕ್ ತನ್ವರ್ (ನಾಯಕ), ಮುಹಮ್ಮದ್ ಅದ್ನಾನ್ ಖಾನ್, ಸಚಿನ್ ರಾಠಿ, ಎಂ ಗಣೇಶ್ ಮೂರ್ತಿ, ಆಕಾಶ್ ಸುಮ್ರಾ, ಎಸ್ ಅರವಿಂದ್
ಬೆಂಚ್: ರವಿ ಕಾರ್ತಿಕೇಯನ್, ಆರ್ ಕವಿನ್, ಜೆ ಗೌರಿ ಶಂಕರ್, ಜಗನಾಥ್ ಸಿನಿವಾಸ್, ಎನ್ ಸೆಲ್ವ ಕುಮಾರನ್, ಪ್ರಶಾಂತ್ ರಾಜೇಶ್, ವಿಆರ್‌ಎಸ್ ಗುರು ಕೇದಾರನಾಥ್

ಸೇಲಂ ಸ್ಪಾರ್ಟನ್ಸ್: ಬಾಬಾ ಅಪರಾಜಿತ್, ಎಸ್ ಹರೀಶ್ ಕುಮಾರ್, ಎನ್ ಜಗದೀಸನ್ (ನಾಯಕ & ವಿಕೆಟ್ ಕೀಪರ್), ಪ್ರದೋಶ್ ಪಾಲ್, ರಾಹಿಲ್ ಶಾ, ರಾಮಲಿಂಗಂ ರೋಹಿತ್, ಸಂಜಯ್ ಯಾದವ್, ಉತಿರಾಸಾಮಿ ಸಸಿದೇವ್, ರಾಜಗೋಪಾಲ್ ಸತೀಶ್, ಎಂ ಸಿಲಂಬರಸನ್, ಎಂ ವಿಜು ಅರುಲ್, ರಾಕಿ ಭಾಸ್ಕರ್
ಬೆಂಚ್: ಬಿ ಐಯಪ್ಪನ್, ಸಂತೋಷ್ ಶಿವ್, ಲೋಕೇಶ್ ರಾಜ್, ಎಸ್ ಮದನ್ ಕುಮಾರ್, ಆರ್ ಸಿಬಿ

Story first published: Wednesday, June 14, 2023, 14:48 [IST]
Other articles published on Jun 14, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+