TNPL 2023 Final: ಲೈಕಾ ಕೋವೈ ಕಿಂಗ್ಸ್ vs ನೆಲ್ಲೈ ರಾಯಲ್ ಕಿಂಗ್ಸ್ ಪಂದ್ಯದ ವಿವರ; ಟಿವಿ, ಲೈವ್‌ಸ್ಟ್ರೀಮಿಂಗ್ ಮಾಹಿತಿ
ಬುಧವಾರ, ಜುಲೈ 12ರಂದು ತಿರುನೆಲ್ವೆಲ್ಲಿಯ ಇಂಡಿಯನ್ ಸಿಮೆಂಟ್ಸ್ ಕ್ರಿಕೆಟ್ ಮೈದಾನದಲ್ಲಿ 2023ರ ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‌ಪಿಎಲ್) ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಲೈಕಾ ಕೋವೈ ಕಿಂಗ್ಸ್ (ಎಲ್‌ಕೆಕೆ) ಮತ್ತು ನೆಲ್ಲೈ ರಾಯಲ್ಸ್ ಕಿಂಗ್ಸ್ (ಎನ್‌ಆರ್‌ಕೆ) ತಂಡಗಳು ಸೆಣಸಾಡಲಿವೆ.
ಎಂ ಶಾರುಖ್ ಖಾನ್ ನಾಯಕತ್ವದ ಲೈಕಾ ಕೋವೈ ಕಿಂಗ್ಸ್ ಚಾಂಪಿಯನ್‌ಗೆ ತಕ್ಕಂತೆ ಆಡಿ, ಲೀಗ್ ಹಂತಗಳ ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು. ಕ್ವಾಲಿಫೈಯರ್ 1ರಲ್ಲಿ ದಿಂಡುಗಲ್ ಡ್ರ್ಯಾಗನ್ಸ್ ತಂಡವನ್ನು 30 ರನ್‌ಗಳಿಂದ ಸೋಲಿಸಿ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿತು.

ಗುಜರಾತ್ ಟೈಟನ್ಸ್ ಬ್ಯಾಟರ್ ಸಾಯಿ ಸುದರ್ಶನ್ ಅವರು ದುಲೀಪ್ ಟ್ರೋಫಿಯಲ್ಲಿ ದಕ್ಷಿಣ ವಲಯ ತಂಡವನ್ನು ಸೇರಿಕೊಳ್ಳುವ ಮೊದಲು ಲೈಕಾ ಕೋವೈ ಕಿಂಗ್ಸ್ ತಂಡಕ್ಕಾಗಿ ಸ್ಟಾರ್ ಪ್ರದರ್ಶನಕಾರ ಆಗಿದ್ದರು.
"ನಾವು ಇಷ್ಟಪಟ್ಟಂತೆ ಈವರೆಗೆ ಆಡಿದ್ದೇವೆ ಮತ್ತು ಆಟಗಾರರ ಮನಸ್ಥಿತಿಯೊಂದಿಗೆ ಮಧ್ಯಪ್ರವೇಶಿಸಲು ಬಯಸುವುದಿಲ್ಲ. ನಾವು ಆಟಗಾರರಿಗೆ ನಿರ್ದಿಷ್ಟ ಪಾತ್ರಗಳನ್ನು ನೀಡಿದ್ದೇವೆ ಮತ್ತು ಅದನ್ನು ಮುಂದುವರಿಸಲು ಅವರಿಗೆ ಅವಕಾಶ ನೀಡಿದ್ದೇವೆ," ಎಂದು ಫೈನಲ್ ಪಂದ್ಯಕ್ಕೂ ಮುನ್ನ ಸ್ಪೋರ್ಟ್‌ಸ್ಟಾರ್‌ಗೆ ಲೈಕಾ ಕೋವೈ ಕಿಂಗ್ಸ್ ತಂಡದ ನಾಯಕ ಶಾರುಖ್ ಖಾನ್ ಹೇಳಿದರು.
ಮತ್ತೊಂದೆಡೆ, ನೆಲ್ಲೈ ರಾಯಲ್ಸ್ ಕಿಂಗ್ಸ್ ತಂಡವು ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ 2ರ ಎರಡು ರೋಮಾಂಚಕ ಪ್ಲೇಆಫ್ ಪಂದ್ಯಗಳನ್ನು ಗೆದ್ದು ಫೈನಲ್ ತಲುಪಲು ಶ್ರಮಪಟ್ಟಿತು.
ಎಲಿಮಿನೇಟರ್ ಪಂದ್ಯದಲ್ಲಿ ನೆಲ್ಲೈ ರಾಯಲ್ಸ್ ಕಿಂಗ್ಸ್ ತಂಡವು 4 ರನ್‌ಗಳಿಂದ ಗೆದ್ದರೆ, ದಿಂಡುಗಲ್ ಡ್ರ್ಯಾಗನ್ಸ್ ವಿರುದ್ಧ ಕ್ವಾಲಿಫೈಯರ್ 2ರಲ್ಲಿ 37 ರನ್‌ಗಳಿಂದ ಗೆಲುವು ಕಂಡಿತು.
"ಬ್ಯಾಟರ್‌ಗಳು ಮತ್ತು ಬೌಲರ್‌ಗಳು ಹೆಚ್ಚು ಪಂದ್ಯಗಳನ್ನು ಆಡುವುದರಿಂದ ಅವರ ಆಟವು ಉತ್ತಮಗೊಳ್ಳುತ್ತದೆ. ಆಟಗಾರರ ಕೌಶಲ್ಯ ಮಟ್ಟಗಳು ಸಹ ಸುಧಾರಿಸುತ್ತವೆ. ಹಾಗಾಗಿ ನಾವು ಫೈನಲ್ ಪಂದ್ಯಕ್ಕೆ ಚೆನ್ನಾಗಿ ಸಿದ್ಧರಾಗಿದ್ದೇವೆ," ಎಂದು ನೆಲ್ಲೈ ರಾಯಲ್ಸ್ ಕಿಂಗ್ಸ್ ನಾಯಕ ಕೆಬಿ ಅರುಣ್ ಕಾರ್ತಿಕ್ ತಿಳಿಸಿದರು.
TNPL 2023 ಫೈನಲ್ ಪಂದ್ಯದ ವಿವರ
2023ರ ತಮಿಳುನಾಡು ಪ್ರೀಮಿಯರ್ ಲೀಗ್‌ನ ಲೈಕಾ ಕೋವೈ ಕಿಂಗ್ಸ್ vs ನೆಲ್ಲೈ ರಾಯಲ್ಸ್ ಕಿಂಗ್ಸ್ ಫೈನಲ್ ಪಂದ್ಯವು ಜುಲೈ 12, ಬುಧವಾರದಂದು ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಪ್ರಾರಂಭವಾಗುತ್ತದೆ.
ಲೈಕಾ ಕೋವೈ ಕಿಂಗ್ಸ್ vs ನೆಲ್ಲೈ ರಾಯಲ್ಸ್ ಕಿಂಗ್ಸ್ ನಡುವಿನ TNPL 2023ರ ಫೈನಲ್ ಪಂದ್ಯವನ್ನು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಸ್ಟಾರ್ ಸ್ಪೋರ್ಟ್ಸ್ 1 ತಮಿಳು ಮತ್ತು ಸ್ಟಾರ್ ಸ್ಪೋರ್ಟ್ಸ್ 3 ರಲ್ಲಿ ವೀಕ್ಷಿಸಬಹುದು.
ಲೈಕಾ ಕೋವೈ ಕಿಂಗ್ಸ್ vs ನೆಲ್ಲೈ ರಾಯಲ್ಸ್ ಕಿಂಗ್ಸ್ TNPL 2023ರ ಫೈನಲ್ ಪಂದ್ಯವನ್ನು ಭಾರತದಲ್ಲಿ ಫ್ಯಾನ್‌ಕೋಡ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತದೆ.
TNPL 2023 ಫೈನಲ್: LKK vs NRK ಸಂಭಾವ್ಯ ಆಡುವ 11ರ ಬಳಗ
ಲೈಕಾ ಕೋವೈ ಕಿಂಗ್ಸ್: ಎಂ ಶಾರುಖ್ ಖಾನ್ (ನಾಯಕ), ಬಿ ಸಚಿನ್, ಎಸ್ ಸುಜಯ್, ಯು ಮುಕಿಲೇಶ್, ಅತೀಕ್ ಉರ್ ರೆಹಮಾನ್, ಜೆ ಸುರೇಶ್ ಕುಮಾರ್ (ವಿಕೆಟ್ ಕೀಪರ್), ರಾಮ್ ಅರವಿಂದ್, ಮಣಿಮಾರನ್ ಸಿದ್ಧಾರ್ಥ್, ಜಾತವೇಧ್ ಸುಬ್ರಮಣ್ಯನ್, ಎಂ ಮೊಹಮ್ಮದ್, ವಲ್ಲಿಯಪ್ಪನ್ ಯುಧೀಶ್ವರನ್.
ನೆಲ್ಲೈ ರಾಯಲ್ ಕಿಂಗ್ಸ್: ಎನ್‌ಎಸ್ ರಾಜಗೋಪಾಲ್, ಜಿ ಅಜಿತೇಶ್, ಪಿ ಸುಗೇಂದ್ರನ್, ಕೆಬಿ ಅರುಣ್ ಕಾರ್ತಿಕ್ (ನಾಯಕ), ರಿತಿಕ್ ಈಶ್ವರನ್ (ವಿಕೆಟ್ ಕೀಪರ್), ಆರ್ ಸೋನು ಯಾದವ್, ಎಸ್ ಮೋಹನ್ ಪ್ರಸಾತ್, ಎಸ್ ಸಂದೀಪ್ ವಾರಿಯರ್, ಎಂ ಪೊಯಮೊಳಿ, ಎಸ್ ಲಕ್ಷಯ್ ಜೈನ್, ಎನ್ ಎಸ್ ಹರೀಶ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications