Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

TNPL 3: ಹಾಲಿ ಚಾಂಪಿಯನ್ ಚೆಪಾಕ್ ಸೂಪರ್ ಗಿಲ್ಲಿಸ್ ಗೆ ಮುಖಭಂಗ

TNPL 3 : Murugan Ashwin takes a blinder to dismiss Srikkanth Anirudha

ಚೆನ್ನೈ, ಜುಲೈ 22: ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್ ಪಿಎಲ್) ನ 10ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆಪಾಕ್ ಸೂಪರ್ ಗಿಲ್ಲಿಸ್ ತಂಡವು ಕಾರೈಕುಡಿ ಕಾಲೈ ತಂಡದ ವಿರುದ್ಧ ಸೋಲು ಕಂಡಿದೆ. ಹಾಲಿ ಚಾಂಪಿಯನ್ ಗಳಿಗೆ ಇದು ಸತತ ಮೂರನೇ ಸೋಲಾಗಿದೆ.

ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಿನ್ನೆ ರಾತ್ರಿ ನಡೆದ ಪಂದ್ಯದಲ್ಲಿ 194ರನ್ ಚೇಸ್ ಮಾಡಲು ಆಗದೆ 47ರನ್ ಗಳಿಂದ ಗಿಲ್ಲಿಸ್ ತಂಡವು ಸೋಲು ಕಂಡಿದೆ.

ಸ್ಕೋರ್ ವಿವರ:
ಐಡ್ರೀಮ್ಸ್ ಕಾರೈಕುಡಿ ಕಾಲೈ 193/5 (ಅನಿರುದ್ಧ ಶ್ರೀಕಾಂತ್ 56ರನ್, ಎಂ ಶಹಜಹಾನ್ ಅಜೇಯ 43, ಎಸ್ ಹರೀಶ್ ಕುಮಾರ್ 2/36)
ಚೆಪಾಕ್ ಸೂಪರ್ ಗಿಲ್ಲೀಸ್ 146/6, 20 ಓವರ್ಸ್(ಗೋಪಿನಾಥ್ 47, ಮುರುಗನ್ ಅಶ್ವಿನ್ ಅಜೇಯ 33, ಯೋ ಮಹೇಶ್ 1/21).

ಅನಿರುಧ್ ವಿಕೆಟ್- ಮುರುಗನ್ ಕ್ಯಾಚ್: ಕಾರೈಕುಡಿ ಕಾಲೈ ತಂಡದ ನಾಯಕ ಅನಿರುದ್ಧ ಶ್ರೀಕಾಂತ್ ಅವರು ನೀಡಿದ ಕ್ಯಾಚನ್ನು ಬೌಂಡರಿ ಗೆರೆ ಬಳಿಯಲ್ಲಿದ್ದ ಗಿಲ್ಲೀಸ್ ತಂಡ ಆಟಗಾರ ಮುರುಗನ್ ಅಶ್ವಿನ್ ಅದ್ಭುತವಾಗಿ ಹಿಡಿದರು.

ಜುಲೈ 11ರಿಂದ ಆಗಸ್ಟ್ 12ರ ತನಕ ಟಿಎನ್ ಪಿಎಲ್ ನ ಮೂರನೇ ಸೀಸನ್ ನ 32 ಪಂದ್ಯಗಳು ನಡೆಯಲಿವೆ. ರವಿಚಂದ್ರನ್ ಅಶ್ವಿನ್, ಮುರಳಿ ವಿಜಯ್, ದಿನೇಶ್ ಕಾರ್ತಿಕ್ ಸೇರಿದಂತೆ ಹಲವು ಜನಪ್ರಿಯ ಆಟಗಾರರು ಲೀಗ್ ನಲ್ಲಿದ್ದಾರೆ.

Story first published: Sunday, July 22, 2018, 12:45 [IST]
Other articles published on Jul 22, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+