ಕ್ರಿಕೆಟ್ ಆಟಗಾರರಿಗೆ ಇನ್ಮುಂದೆ ಡಿಎನ್ಎ ಪರೀಕ್ಷೆ ಕಡ್ಡಾಯ!

Posted By:

ನವದೆಹಲಿ, ನವೆಂಬರ್ 13: ಟೀಂ ಇಂಡಿಯಾದ ಆಟಗಾರರಲ್ಲಿ ವಿವಿಧ ರೀತಿಯ ಫಿಟ್ನೆಸ್ ಪರೀಕ್ಷೆಗಳು ಮುಂದೆ ಕಾದಿವೆ. ಸ್ಕಿನ್ ಫೋಲ್ಡ್ ಟೆಸ್ಟ್, ಡೆಕ್ಸಾ ಟೆಸ್ಟ್ ನಂತರ ಈಗ ಡಿಎನ್ಎ ಪರೀಕ್ಷೆ ಕಡ್ಡಾಯವಾಗಲಿದೆ.

'ಯೋ ಯೋ' ಪರೀಕ್ಷೆಯಲ್ಲಿ ಫೇಲಾದ ಯುವಿ, ರೈನಾ

ಆಟಗಾರರ ದೇಹದಲ್ಲಿರುವ ಕೊಬ್ಬಿನಾಂಶ ಪತ್ತೆಗೆ ಇದು ಸಹಕಾರಿ, ಡಿಎನ್‌ಎ ಪರೀಕ್ಷೆಯಿಂದ ಆಟಗಾರರ ಅನುವಂಶೀಯ ಫಿಟ್ನೆಸ್ ಬಗ್ಗೆ ತಿಳಿಯಲಿದೆ ಎಂದು ತಂಡದ ತರಬೇತುದಾರ ಶಂಕರ್ ಬಸು ಅವರು ಶಿಫಾರಸು ಮಾಡಿದ್ದು, ಬಿಸಿಸಿಐ ಕೂಡಾ ಸಮ್ಮತಿಸಿದೆ.

To be in sync with Virat Kohli's training regimen, BCCI introduces DNA fitness test

ಟೀಮ್ ಇಂಡಿಯಾದ ಪ್ರತಿಯೊಬ್ಬ ಆಟಗಾರನನ್ನು 25 ಸಾವಿರದಿಂದ 30 ಸಾವಿರ ರೂ. ವೆಚ್ಚದಲ್ಲಿ ಡಿಎನ್‌ಎ ಪರೀಕ್ಷೆಗೊಳಪಡಿಸಲಾಗುತ್ತದೆ.ಈ ಹಿಂದೆ ಅಮೆರಿಕದಲ್ಲಿ ಮೊದಲ ಬಾರಿ ಎನ್‌ಬಿಎ(ಬಾಸ್ಕೆಟ್‌ಬಾಲ್) ಮತ್ತು ಎನ್‌ಎಫ್‌ಎಲ್ ಆಟಗಾರರ ಡಿಎನ್‌ಎ ಪರೀಕ್ಷೆ ನಡೆಸಲಾಗಿತ್ತು.

ನ್ಯೂಜಿಲೆಂಡ್ ಆಟಗಾರರೊಂದಿಗೆ ಧೋನಿ 'ಲೆಗ್ ವಾಲಿಬಾಲ್'

ಆಟಗಾರರ ವೇಗವರ್ಧನೆ ಕೊಬ್ಬು ಕರಗಿಸಲು, ಸಹಿಷ್ಣುತೆ, ಚೇತರಿಸಿಕೊಳ್ಳುವ ಸಮಯ ಮತ್ತು ಸ್ನಾಯುವನ್ನು ಇನ್ನಷ್ಟು ಬಲಿಷ್ಟಗೊಳಿಸಲು ಯಾವೆಲ್ಲ ಕ್ರಮ ಅನುಸರಿಸಬೇಕು ಎಂಬುದನ್ನು ಡಿಎನ್ಎ ವರದಿ ಮೂಲಕ ತಿಳಿಯಬಹುದಾಗಿದೆ.

ವ್ಯಕ್ತಿಯ ದೇಹದಲ್ಲಿರುವ 40ಕ್ಕೂ ಅಧಿಕ ಜೀನ್‌ಗಳು ವ್ಯಕ್ತಿಗೆ ಫಿಟ್‌ನೆಸ್, ಆರೋಗ್ಯ ಮತ್ತು ಪೌಷ್ಟಿಕತೆಯೊಂದಿಗೆ ಯಾವ ರೀತಿ ವರ್ತಿಸುತ್ತದೆ ಎಂದು ತಿಳಿಯಲು ಡಿಎನ್‌ಎ ಅಥವಾ ಅನುವಂಶಿಕ ಫಿಟ್ನೆಸ್ ಪರೀಕ್ಷೆ ನೆರವಾಗಲಿದೆ.

ಹೊಸ ಫಿಟ್ನೆಸ್ ವಿಧಾನದಿಂದ ಆಟಗಾರರ ಕ್ಷಮತೆ ಹೆಚ್ಚಾಗಲಿದೆ. ಉದಾಹರಣೆಗೆ ವೇಗಿ ಭುವನೇಶ್ವರ್ ಕುಮಾರ್ ಅವರು ಚಾಂಪಿಯನ್ಸ್ ಟ್ರೋಫಿ ನಂತರ 19 ಏಕದಿನ ಪಂದ್ಯ, 7 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಸ್ಕಿನ್ ಫೋಲ್ಡ್ ಟೆಸ್ಟ್, ಡೆಕ್ಸಾ ಟೆಸ್ಟ್ ಬದಲಿಗೆ ಈಗ ಡಿಎನ್ಎ ಪರೀಕ್ಷೆ ಅನಿವಾರ್ಯವಾಗಲಿದ್ದು, ಯೋ ಯೋ ಪರೀಕ್ಷೆ ಕೂಡಾ ಆಟಗಾರರಿಗೆ ನೆರವಾಗಲಿದೆ.(ಪಿಟಿಐ)

Story first published: Monday, November 13, 2017, 9:11 [IST]
Other articles published on Nov 13, 2017
Please Wait while comments are loading...