ಭಾರತವನ್ನು ಅವರದ್ದೇ ನೆಲದಲ್ಲಿ ಸೋಲಿಸೋದು ದೊಡ್ಡ ಸಾಧನೆ: ಸ್ಮಿತ್

ಲಕ್ನೋ: ಭಾರತ ತಂಡವನ್ನು ಭಾರತದ್ದೇ ನೆಲದಲ್ಲಿ ಸೋಲಿಸೋದು ಅದೊಂದು ಬಹುದೊಡ್ಡ ಸಾಧನೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ, ಕ್ರಿಕೆಟ್ ಸೌತ್ ಆಫ್ರಿಕಾದ ನಿರ್ದೇಶಕ ಗ್ರೇಮ್ ಸ್ಮಿತ್ ಹೇಳಿದ್ದಾರೆ. ಭಾರತದ ವನಿತೆಯರ ವಿರುದ್ಧದ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವನಿತೆಯರು ಮುನ್ನಡೆಯಲ್ಲಿರುವ ಖುಷಿಗಾಗಿ ಈ ಹೇಳಿಕೆ ನೀಡಿದ್ದಾರೆ.
ಭಾರತಕ್ಕೆ ಪ್ರವಾಸ ಬಂದಿರುವ ದಕ್ಷಿಣ ಆಫ್ರಿಕಾ ಮಹಿಳಾ ತಂಡ, ಉತ್ತರ ಪ್ರದೇಶದ ಲಕ್ನೋವಿನಲ್ಲಿ ಐದು ಪಂದ್ಯಗಳ ಏಕದಿನ ಸರಣಿ ಆಡುತ್ತಿದೆ. ಇದರಲ್ಲಿ ಈಗಾಗಲೇ ನಾಲ್ಕು ಪಂದ್ಯಗಳು ಮುಗಿದಿದ್ದು 3-1ರಿಂದ ದಕ್ಷಿಣ ಆಫ್ರಿಕಾ ಮಹಿಳೆಯರು ಸರಣಿಯನ್ನು ವಶಪಡಿಸಿಕೊಂಡಾಗಿದೆ.
'ಭಾರತದಲ್ಲಿ ಏಕದಿನ ಸರಣಿ ಗೆದ್ದಿರುವ ಪ್ರೋಟಿಯಾಸ್‌ಗೆ ಅಭಿನಂದನೆಗಳು. ಪ್ರವಾಸದ ವೇಳೆ ಅತೀ ಕಠಿಣ ಜಾಗವೆಂದರೆ ಅದು ಭಾರತ. ಅದರಲ್ಲಿ ಆತಿಥೇಯ ಭಾರತವನ್ನು ಅವರದ್ದೇ ನೆಲದಲ್ಲಿ ಸೋಲಿಸೋದು ಅಂದರೆ ಅದೊಂದು ದೊಡ್ಡ ಸಾಧನೆಯೇ ಸರಿ,' ಎಂದು ಸ್ಮಿತ್ ಹೇಳಿದ್ದಾರೆ.
ಭಾರತದ ವಿನಿತೆಯರು ಮತ್ತು ದಕ್ಷಿಣ ಆಫ್ರಿಕಾ ವನಿತೆಯರ ನಡುವಿನ ಕೊನೇ ಏಕದಿನ ಪಂದ್ಯ ಮಾರ್ಚ್ 17ರ ಬುಧವಾರ ನಡೆಯಲಿದೆ. ಅದಾಗಿ ಇತ್ತಂಡಗಳ ಮಧ್ಯೆ ಮೂರು ಪಂದ್ಯಗಳ ಟಿ20ಐ ಸರಣಿ ನಡೆಯಲಿದೆ. ಟಿ20 ಸರಣಿ ಮಾರ್ಚ್ 20ರಿಂದ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications