ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತನ್ನ ಸುದೀರ್ಘ ಕಾಲದ ಕನಸನ್ನು ಹಂಚಿಕೊಂಡ ಇಂಗ್ಲೆಂಡ್ ಸ್ಪಿನ್ನರ್ ಜಾಕ್ ಲೀಚ್

To come here and bowl spin is the dream I had says Jack Leach

ಇಂಗ್ಲೆಂಡ್ ಕ್ರಿಕೆಟ್ ತಂದ ಸ್ಪಿನ್ನರ್ ಜಾಕ್ ಲೀಚ್ ಭಾರತದ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದಾರೆ. ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ಲೀಚ್ ತನ್ನ ಸುದೀರ್ಘ ಕಾಲದ ಕನಸೊಂದನ್ನು ಹಂಚಿಕೊಂಡಿದ್ದಾರೆ. ಇಂಗ್ಲೆಂಡ್ ತಂಡದ ಪರವಾಗಿ ಕ್ರಿಕೆಟ್ ಆಡಲು ಆರಂಭಿಸಿದಾಗಿನಿಂದಲೂ ಈ ಕನಸನ್ನು ನಾನು ಹೊಂದಿದ್ದೆ ಎಂದಿದ್ದಾರೆ ಜಾಕ್ ಲೀಚ್.

ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲು ಆರಂಭಿಸಿದಾಗಿನಿಂದಲೂ ಇಂಗ್ಲೆಂಡ್ ಕ್ರಿಕೆಟ್ ತಂಡದ ಪರವಾಗಿ ಭಾರತ ಪ್ರವಾಸದಲ್ಲಿ ಕ್ರಿಕೆಟ್ ಆಡಬೇಕು. ಸ್ಪಿನ್ ಬೌಲಿಂಗ್ ದಾಳಿಯನ್ನು ನಡೆಸಬೇಕು ಎಂಬುದು ನನ್ನ ಕನಸಾಗಿತ್ತು. ಆ ಕನಸು ಈಗ ಸಾಕಾರಗೊಳ್ಳುವ ಸಂದರ್ಭ ಬಂದಿದೆ ಎಂದು ಜಾಖ್ ಲೀಚ್ ಹೇಳಿಕೊಂಡಿದ್ದಾರೆ.

ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದ ಹೊರಾಂಗಣ ಅಭ್ಯಾಸ ಶುರುಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದ ಹೊರಾಂಗಣ ಅಭ್ಯಾಸ ಶುರು

"ತುಂಬಾ ಕಾಲ ಕ್ರಿಕೆಟ್‌ಅನ್ನು ಮಿಸ್‌ ಮಾಡಿಕೊಂಡಿದ್ದರಿಂದ ಈ ಕ್ಷಣಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಆನಂದಿಸಲು ಪ್ರಶಸ್ತವಾಗಿದೆ. ಭಾರತದಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಆಡಲು ಬಂದಿದ್ದೇನೆ. ಇಲ್ಲಿಗೆ ಬಂದು ಸ್ಪಿನ್ ಬೌಲಿಂಗ್ ನಡೆಸಬೇಕೆಂಬ ಕನಸನ್ನು ಸುದೀರ್ಘ ಕಾಲದಿಂದ ನಾನು ಹೊಂದಿದ್ದೆ. ಇದೀಗ ಅದ್ಭುತವಾದ ಅವಕಾಶ ಒದಗಿಬಂದಿದೆ. ಅದನ್ನು ನಾನು ಆನಂದಿಸಬೇಕು" ಎಂದಿದ್ದಾರೆ.

"ಮರಳಿ ಕ್ರಿಕೆಟ್ ಆಡುವ ಅನುಭವ ನಿಜಕ್ಕೂ ಆನಂದವಾಗಿದೆ. ನಾವು ಅದಕ್ಕಾಗಿಯೇ ಪರಿಶ್ರಮಪಡುತ್ತೇವೆ. ಹಾಗಾಗಿ ಮರಳಿ ಆಡುವ ಅವಕಾಶ ದೊರೆತಿರುವುದು ತುಂಬಾ ಉತ್ತಮ ಅನುಭವ" ಎಂದು ಜಾಕ್ ಲೀಚ್ ತನ್ನ ಅನುಭವವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾಕ್ಕೆ ಎಚ್ಚರಿಸಿದ ಕಿರಣ್ ಮೋರೆಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾಕ್ಕೆ ಎಚ್ಚರಿಸಿದ ಕಿರಣ್ ಮೋರೆ

"ಇದು ಉತ್ಕೃಷ್ಠವಾದ ಟೆಸ್ಟ್ ಪಂದ್ಯವಾ? ಹೌದು ಎನಿಸುತ್ತದೆ. ಇದಕ್ಕಿಂತ ಹೆಚ್ಚಿನ ಉತ್ಸಾಹ ಸಾಧ್ಯವಿಲ್ಲ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು ಗೆದ್ದು ಅವರು(ಟೀಮ್ ಇಂಡಿಯಾ) ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ ಮರಳಿದ್ದಾರೆ. ಹೀಗಾಗಿ ವಿಶ್ವದ ಉತ್ಕೃಷ್ಟ ತಂಡದ ಜೊತೆಗೆ ಆಡಲು ಸಿಕ್ಕ ಶ್ರೇಷ್ಠವಾದ ಅವಕಾಶವಿದು ಎನಿಸುತ್ತದೆ" ಎಂದು ಜಾಕ್ ಲೀಜ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Story first published: Tuesday, February 2, 2021, 17:15 [IST]
Other articles published on Feb 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X