ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ಆ್ಯಶಸ್‌ಗಿಂತ ದೊಡ್ಡದು ಹಾಗೂ ಕಠಿಣ"

 To win a Test series in India is bigger and tougher than winning the Ashes: Matt Prior

ಭಾರತದ ವಿರುದ್ಧದ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ತಂಡ ಈಗಾಗಲೇ ಅಭ್ಯಾಸವನ್ನು ಆರಂಭಿಸಿದೆ. ಫೆಬ್ರವರಿ 5 ರಿಂದ ಆರಂಭವಾಗಲಿರುವ ಈ ಟೆಸ್ಟ್ ಸರಣಿ ಎಲ್ಲರ ಕುತೂಹಲವನ್ನು ಕೆರಳಿಸಿದೆ. ಇಂಗ್ಲೆಂಡ್‌ನ ಕೆಲ ಮಾಜಿ ಆಟಗಾರರು ಭಾರತದ ವಿರುದ್ಧದ ಈ ಸರಣಿಯನ್ನು ಆ್ಯಶಸ್‌ಗಿಂತಲೂ ಶ್ರೇಷ್ಠ ಎಂದು ಬಣ್ಣಿಸುತ್ತಿದ್ದಾರೆ. ಇದಕ್ಕೆ ಮ್ಯಾಟ್ ಪ್ರಿಯರ್ ಕೂಡ ಸೇರಿಕೊಂಡಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ಮಾತನಾಡಿದ ಮಾಜಿ ಕ್ರಿಕೆಟಿಗ ಮ್ಯಾಟ್ ಪ್ರಿಯರ್ ಭಾರತದಲ್ಲಿ ಇಂಗ್ಲೆಂಡ್ ತಂಡ ಟೆಸ್ಟ್ ಸರಣಿಯನ್ನು ಗೆಲ್ಲುವುದು ಆ್ಯಶಸ್ ಪಂದ್ಯ ಗೆಲ್ಲುವುದಕ್ಕಿಂತಲೂ ಶ್ರೇಷ್ಠ ಹಾಗೂ ಆ್ಯಶಸ್‌ಗಿಂತಲೂ ಕಠಿಣ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ರಹಾನೆಯಿಂದ ಕೊಹ್ಲಿಗೆ ನಾಯಕತ್ವ ಚರ್ಚೆಗೀಡಾಗಲಿದೆ: ಪೀಟರ್ಸನ್ರಹಾನೆಯಿಂದ ಕೊಹ್ಲಿಗೆ ನಾಯಕತ್ವ ಚರ್ಚೆಗೀಡಾಗಲಿದೆ: ಪೀಟರ್ಸನ್

"ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಎಲ್ಲಾ ರೀತಿಯ ಪ್ರಚಾರವನ್ನೂ ಪಡೆದುಕೊಳ್ಳುತ್ತದೆ. ಪ್ರತಿಯೊಂದು ವಿಚಾರವೂ ಅದರ ಸುತ್ತಲೇ ನಡೆಯುತ್ತದೆ. ಆದರೆ ಭಾರತವೂ ಅದರಷ್ಟೇ ಕಠಿಣ ಸ್ಪರ್ಧಿ. ಅಲ್ಲಿ ಹೋಗಿ ಸರಣಿಯನ್ನು ಗೆಲ್ಲುವುದು ಆ್ಯಶಸ್‌ಗಿಂತಲೂ ನನಗೆ ಶ್ರೇಷ್ಠವೆನಿಸುತ್ತದೆ" ಎಂದಿದ್ದಾರೆ ಮ್ಯಾಟ್ ಪ್ರಿಯರ್.

"2010-11ರಲ್ಲಿ ನಾವು ಆಸ್ಟ್ರೇಲಿಯಾದಲ್ಲಿ ಸರಣಿಯನ್ನು ಗೆದ್ದಾಗ 25 ವರ್ಷಗಳ ಬಳಿಕ ಮೊದಲ ಬಾರಿಗೆ ಆ ಸಾಧನೆಯನ್ನು ಮಾಡಿದ್ದೆವು. ಆದರೆ ಭಾರತದಲ್ಲಿ ಸರಣಿ ಗೆಲುವನ್ನು ಸಾಧಿಸಲು ನಾವು 28 ವರ್ಷ ತೆಗೆದುಕೊಂಡಿದ್ದೇವೆ" ಎಂದು ಭಾರತದ ವಿರುದ್ಧದ ಸರಣಿ ಎಷ್ಟು ಕಠಿಣ ಎಂಬುದನ್ನು ಮ್ಯಾಟ್ ಪ್ರಿಯರ್ ಹೇಳಿದ್ದಾರೆ.

ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಪಂತ್ ಸೇರಿ ಮೂವರು ನಾಮನಿರ್ದೇಶನಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಪಂತ್ ಸೇರಿ ಮೂವರು ನಾಮನಿರ್ದೇಶನ

ಇಂಗ್ಲೆಂಡ್ ತಂಡ ಭಾರತದ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳ ಸರಣಿಯಲ್ಲಿ ಪಾಲ್ಗೊಂಡಿದೆ. ಈ ಎರಡು ಪಂದ್ಯಗಳನ್ನು ಗೆದ್ದಿರುವ ಇಂಗ್ಲೆಂಡ್ ಭಾರತದ ವಿರುದ್ಧವೂ ತಮ್ಮ ಉತ್ತಮ ಪ್ರದರ್ಶನ ಮುಂದುವರಿಸುವ ಉತ್ಸಾಹದಲ್ಲಿದೆ. ಆದರೆ ಆಸ್ಟ್ರೇಲಿಯಾ ವಿರುದ್ಧ ಆಸ್ಟ್ರೇಲಿಯಾ ನೆಲದಲ್ಲಿಯೇ ಟೆಸ್ಟ್ ಸರಣಿ ಗೆದ್ದಿರುವ ಉತ್ಸಾಹದಲ್ಲಿರುವ ಟೀಮ್ ಇಂಡಿಯಾ ಸವಾಲನ್ನು ಇಂಗ್ಲೆಂಡ್ ಯಾವ ರೀತಿ ಎದುರಿಸಲಿದೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ.

Story first published: Wednesday, February 3, 2021, 13:58 [IST]
Other articles published on Feb 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X