For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ ಸರಣಿಯಲ್ಲಿ ವಿರಾಟ್‌ ಕೊಹ್ಲಿಯಿಂದ ಭಾರತ ಗೆಲ್ಲಿಸಲಾಗೋಲ್ಲ: ಗಿಲ್‌ಕ್ರಿಸ್ಟ್

To win Test series, other batsmen need to support Virat Kohli, says Gilchrist

ಸಿಡ್ನಿ, ನವೆಂಬರ್ 26: ಮುಂಬರಲಿರುವ ಆಸ್ಟ್ರೇಲಿಯಾ-ಭಾರತ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ನಾಯಕ ಕೊಹ್ಲಿಯಿಂದ ಮಾತ್ರ ಗೆಲ್ಲಿಸಲಾಗೋಲ್ಲ. ಸರಣಿ ಗೆಲ್ಲಬೇಕಾದರೆ ಭಾರತದ ಇತರ ಬ್ಯಾಟ್ಸ್ಮನ್‌ಗಳ ಬೆಂಬಲವೂ ಬೇಕು ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಆ್ಯಡಮ್ ಗಿಲ್‌ಕ್ರಿಸ್ಟ್ ಹೇಳಿದ್ದಾರೆ.

ಇತ್ತಂಡಗಳ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಸೋಮವಾರ (ನವೆಂಬರ್ 26) ಸಂದರ್ಶನವೊಂದರಲ್ಲಿ ಮಾತನಾಡುತ್ತ ಗಿಲ್ಲಿ, 'ಕೆಲ ದಿನಗಳ ಹಿಂದಷ್ಟೇ ನಾನು ಈ ಬಗ್ಗೆ ಕೊಹ್ಲಿ ಜೊತೆ ಮಾತನಾಡಿದ್ದೆ. ಟೆಸ್ಟ್ ಸರಣಿಯಲ್ಲಿ ಗೆಲ್ಲುವ ಬಗ್ಗೆ ಕೊಹ್ಲಿಗಿರುವ ಆತ್ಮವಿಶ್ವಾಸವನ್ನೂ ನಾನು ಗಮನಿಸಿದ್ದೇನೆ' ಎಂದು ಹೇಳಿದರು.

'ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಸರಣಿಯತ್ತ ಮುನ್ನಡೆಯುತ್ತಿದ್ದೇವೆ. ಈ ಹಿಂದೆ ಕೊಹ್ಲಿ 2014ರಲ್ಲಿ ನಡೆದ ಸರಣಿಯ ನಾಲ್ಕು ಪಂದ್ಯಗಳಲ್ಲಿ 86.50 ಸರಾಸರಿಯಲ್ಲಿ 694 ರನ್ ಬಾರಿಸಿದ್ದಂತೆ ಈ ಬಾರಿಯೂ ಬಾರಿಸಬೇಕು. ಆ ಮೂಲಕ ಭಾರತ ಸರಣಿ ಗೆಲ್ಲಬೇಕು. ಇದಕ್ಕೆ ಉಳಿದ ಬ್ಯಾಟ್ಸ್ಮನ್‌ಗಳ ಬೆಂಬಲವೂ ಬೇಕು' ಎಂದು ಗಿಲ್‌ಕ್ರಿಸ್ಟ್ ಅಭಿಪ್ರಾಯಿಸಿದರು.

ಟಿ20 ಸರಣಿಯಲ್ಲಿ ಭಾರತ ಮೊದಲ ಪಂದ್ಯವನ್ನು (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) 4 ರನ್ ನಿಂದ ಸೋತಿತ್ತು. ದ್ವಿತೀಯ ಪಂದ್ಯ ಮಳೆಯಿಂದ ಫಲಿತಾಂಶ ವಿಲ್ಲವೆಂದು ಘೋಷಿಲ್ಪಟ್ಟಿತ್ತು. ಕೊನೆಯ ಪಂದ್ಯವನ್ನು ಭಾರತ 6 ವಿಕೆಟ್ ನಿಂದ ಗೆದ್ದಿತ್ತು. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಡಿಸೆಂಬರ್‌ 6ರಂದು ಅಡಿಲೇಡ್ ನಲ್ಲಿ ಆರಂಭಗೊಳ್ಳಲಿದೆ.

Story first published: Monday, November 26, 2018, 16:55 [IST]
Other articles published on Nov 26, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+