Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಾಂಗ್ಲಾ ಟೆಸ್ಟ್ ಸರಣಿಗಾಗಿ ನ್ಯೂಜಿಲ್ಯಾಂಡ್ ತಂಡಕ್ಕೆ ಮರಳಿದ ಟಾಡ್ ಆಸ್ಟಲ್

Todd Astle returns, Ajaz Patel misses out for Bangladesh Tests

ವೆಲ್ಲಿಂಗ್ಟನ್, ಫೆಬ್ರವರಿ 22: ಶನಿವಾರ (ಫೆಬ್ರವರಿ 22) ಹ್ಯಾಮಿಲ್ಟನ್‌ನಲ್ಲಿ ಆರಂಭಗೊಳ್ಳಲಿರುವ ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗಾಗಿ ನ್ಯೂಜಿಲ್ಯಾಂಡ್ ತಂಡದಲ್ಲಿ ಟಾಡ್ ಆಸ್ಟಲ್ ಸೇರ್ಪಡೆಗೊಂಡಿದ್ದಾರೆ. ಅಜಾಝ್ ಪಟೇಲ್ ಬದಲಿಗೆ ಆಸ್ಟಲ್ ಅವರನ್ನು 13 ಜನರ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಆರಂಭಿಕ ಬ್ಯಾಟ್ಸ್ಮನ್ ಆಗಿರುವ ಟಾಡ್, ಲೆಗ್ ಬ್ರೇಕ್ ಸ್ಪಿನ್ ಕೂಡ ಎಸೆಯಬಲ್ಲರು.

ಮೊಣಕಾಲು ಗಾಯದ ಕಾರಣ ದೀರ್ಘ ಕಾಲ ಆಸ್ಟಲ್ ಅವರು ನ್ಯೂಜಿಲ್ಯಾಂಡ್ ಟೆಸ್ಟ್ ತಂಡದಿಂದ ಹೊರಗಿದ್ದರು. ಕಳೆದ ಜೂನ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ನಲ್ಲಿ ಕಡೆಯ ಸಾರಿ ಟಾಡ್ ಪಾಲ್ಗೊಂಡಿದ್ದರು. ಗಾಯಾಳಾದ ಬಳಿಕ ಪಾಕಿಸ್ತಾನ ವಿರುದ್ಧದ ಸರಣಿಗಾಗಿ ಯುಎಇ ಪ್ರವಾಸವನ್ನೂ ಆಸ್ಟಲ್ ಕಳೆದುಕೊಳ್ಳಬೇಕಾಗಿತ್ತು.

ಬಾಂಗ್ಲಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ನ್ಯೂಜಿಲ್ಯಾಂಡ್ ತಂಡ
ಕೇನ್ ವಿಲಿಯಮ್ಸನ್ (ಸಿ), ಟಾಮ್ ಲ್ಯಾಥಮ್, ಜೀತ್ ರವಾಲ್, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಬಿ.ಜೆ. ವ್ಯಾಟ್ಲಿಂಗ್ (ವಿ.ಕೆ), ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಟಾಡ್ ಆಸ್ಟೆಲ್, ಟಿಮ್ ಸೌಥಿ, ನೀಲ್ ವಾಗ್ನರ್, ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ, ವಿಲ್ ಯಂಗ್.

Story first published: Friday, February 22, 2019, 13:36 [IST]
Other articles published on Feb 22, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+