For Quick Alerts
ALLOW NOTIFICATIONS  
For Daily Alerts
 

ಟಾಮ್ ಲ್ಯಾಥಮ್ ಶತಕ, ಬಾಂಗ್ಲಾ ವಿರುದ್ಧ ನ್ಯೂಜಿಲೆಂಡ್‌ಗೆ ಗೆಲುವು

Tom Latham century, New Zealand beat Bangladesh in 2nd ODI

ಕ್ರೈಸ್ಟ್‌ಚರ್ಚ್: ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ಮಂಗಳವಾರ (ಮಾರ್ಚ್ 23) ನಡೆದ ನ್ಯೂಜಿಲೆಂಡ್-ಬಾಂಗ್ಲಾದೇಶ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ 5 ವಿಕೆಟ್ ಜಯ ಗಳಿಸಿದೆ. ಕಿವೀಸ್ ನಾಯಕ ಟಾಮ್ ಲ್ಯಾಥಮ್ ಶತಕದ ಕೊಡುಗೆಯೊಂದಿಗೆ ನ್ಯೂಜಿಲೆಂಡ್ ಜಯ ಗಳಿಸಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0ಯ ಮುನ್ನಡೆ ಗಳಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಾಂಗ್ಲಾದೇಶದಿಂದ ನಾಯಕ ತಮೀಮ್ ಇಕ್ಬಾಲ್ 78, ಸೌಮ್ಯ ಸರ್ಕಾರ್ 32, ಮುಷ್ಫಿಕರ್ ರಹೀಮ್ 34, ಮೊಹಮ್ಮದ್ ಮಿಥುನ್ ಅಜೇಯ 73, ಮೊಹಮ್ಮದುಲ್ಲ 16, ಮೆಹಿದಿ ಹಸನ್ 7, ಮೊಹಮ್ಮದ್ ಸೈಫುದ್ದೀನ್ 7 ರನ್ ಸೇರಿಸಿದರು. ಬಾಂಗ್ಲಾ 50 ಓವರ್‌ಗೆ 6 ವಿಕೆಟ್ ಕಳೆದು 271 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್, ಮಾರ್ಟಿನ್ ಗಪ್ಟಿಲ್ 20, ಹೆನ್ರಿ ನಿಕೋಲ್ಸ್ 13, ಡೆವೊನ್ ಕಾನ್ವೇ 72, ಟಾಮ್ ಲ್ಯಾಥಮ್ 110 (108), ಜೇಮ್ಸ್ ನೀಶಮ್ 30, ಡೇರಿಲ್ ಮಿಚೆಲ್ 12 ರನ್‌ನೊಂದಿಗೆ 48.2 ಓವರ್‌ಗೆ 5 ವಿಕೆಟ್ ಕಳೆದು 275 ರನ್ ಗಳಿಸಿತು.

ಬಾಂಗ್ಲಾ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ 1, ಮ್ಯಾಟ್ ಹೆನ್ರಿ 1, ಕೈಲ್ ಜೇಮಿಸನ್ 1, ಮಿಚೆಲ್ ಸ್ಯಾಂಟ್ನರ್ 2 ವಿಕೆಟ್ ಪಡೆದರೆ, ನ್ಯೂಜಿಲೆಂಡ್ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದ ಮುಷ್ಫಿಕರ್ ರಹೀಮ್ 2, ಮೆಹಿದಿ ಹಸನ್ 2 ವಿಕೆಟ್‌ನೊಂದಿಗೆ ಗಮನ ಸೆಳೆದರು. ಟಾಮ್ ಲ್ಯಾಥಮ್ ಪಂದ್ಯಶ್ರೇಷ್ಠರೆನಿಸಿದರು.

Story first published: Tuesday, March 23, 2021, 17:21 [IST]
Other articles published on Mar 23, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+