ಆಸೀಸ್ ಕೋಚ್ ಟಾಮ್ ಮೂಡಿ ನೆಚ್ಚಿನ ಟಿ20 XIನಲ್ಲಿ ಮೂವರು ಭಾರತೀಯರು!

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ, ಈಗ ಕಾಂಗರೂ ಪಡೆಗೆ ಕೋಚ್ ಆಗಿರುವ ಟಾಮ್ ಮೂಡಿ ತನ್ನ ನೆಚ್ಚಿನ, ಸದ್ಯ ಸಕ್ರಿಯರಾಗಿರುವ ಟಿ20 ಆಟಗಾರರ ತಂಡ ಪ್ರಕಟಿಸಿದ್ದಾರೆ. ಇದರಲ್ಲಿ ಮೂವರು ಭಾರತೀಯ ಆಟಗಾರರು ಕಾಣಿಸಿಕೊಂಡಿದ್ದಾರೆ. ಟಾಮ್ ಮೂಡಿ ಪ್ರಕಟಿಸಿರುವ ತಂಡದಲ್ಲಿ 11 ಆಟಗಾರರನ್ನು ಪರಿಗಣಿಸಿದರೆ ಇದರಲ್ಲಿ ಮೂವರು ಭಾರತೀಯರ ಹೆಸರುಗಳಿವೆ. ಆದರೆ ಟಾಮ್ ಒಬ್ಬ ಹೆಚ್ಚುವರಿ ಆಟಗಾರನನ್ನು ಸೇರಿಸಿ 12 ಜನರ ತಂಡ ಪ್ರಕಟಿಸಿದ್ದಾರೆ. ಇದರಲ್ಲಿ ನಾಲ್ವರು ಟೀಮ್ ಇಂಡಿಯಾ ಆಟಗಾರರ ಕಾಣಿಸಿಕೊಂಡಿದ್ದಾರೆ.
ಅಚ್ಚರಿಯ ವಿಚಾರವೆಂದರೆ, ಮೂಡಿ ಪ್ರಕಟಿಸಿರುವ ಈ ಟಿ20 ತಂಡದಲ್ಲಿ ಭಾರತೀಯನಿಗೆ ನಾಯಕನ ಪಟ್ಟ ದೊರೆತಿದೆ. ಆದರೆ ಇದು ಭಾರತದ ಪ್ರಮುಖ ನಾಯಕರ ಸಾಲಿನಲ್ಲಿರುವ ಎಂಎಸ್ ಧೋನಿ ಅಥವಾ ವಿರಾಟ್ ಕೊಹ್ಲಿಯಲ್ಲ ಅನ್ನೋದು ವಿಶೇಷ.
ಈಗ ಸಕ್ರಿಯರಾಗಿರುವ ಆಟಗಾರರನ್ನು ಹೆಕ್ಕಿ ಟಾಮ್ ಮೂಡಿ ಪ್ರಕಟಿಸಿರುವ ಟಿ20 XI ಹೀಗಿದೆ ನೋಡಿ.

ಆರಂಭಿಕ ಬ್ಯಾಟ್ಸ್‌ಮನ್‌ಗಳು
ಟಾಮ್ ಮೂಡಿಯ ಕರೆಂಟ್ ಟಿ20 ತಂಡದಲ್ಲಿ ಆರಂಭಿಕ ಸ್ಥಾನದಲ್ಲಿ ಆಸ್ಟ್ರೇಲಿಯಾದ ಬೀಸುಗೈ ದಾಂಡಿಗ ಡೇವಿಡ್ ವಾರ್ನರ್ ಕಾಣಿಸಿಕೊಂಡಿದ್ದಾರೆ. ವಾರ್ನರ್‌ಗೆ ಜೊತೆಗಾರನಾಗಿ ಟೀಮ್ ಇಂಡಿಯಾದ ಉಪನಾಯಕ, ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಹೆಸರಿಸಲ್ಪಟ್ಟಿದ್ದಾರೆ.

ರೋಹಿತ್ ಶರ್ಮಾ ನಾಯಕ
ಅಚ್ಚರಿಯೆಂದರೆ ಮೂಡಿಯ ಈಗಿನ ಫೇವರಿಟ್ ಟಿ20ಐ ತಂಡದಲ್ಲಿ ಭಾರತೀಯ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ನಾಯಕನಾಗಿ ಹೆಸರಿಸಲ್ಪಟ್ಟಿದ್ದಾರೆ. ಭಾರತದ ಕೂಲ್ ಕ್ಯಾಪ್ಟನ್ ಧೋನಿ ಅಥವಾ ವಿರಾಟ್ ಕೊಹ್ಲಿ ಮೂಡಿಗೆ ನಾಯಕನಾಗಿ ಮೆಚ್ಚೆನಿಸಿಲ್ಲ ಎನಿಸುತ್ತದೆ.

ವಿಂಡೀಸ್ ಆಟಗಾರರು ಹೆಚ್ಚು
ಟಾಮ್ ನೆಚ್ಚಿನ ಟಿ20ಐ ತಂಡದಲ್ಲಿ ಒಟ್ಟು ನಾಲ್ವರು ಭಾರತೀಯರು ಹೆಸರಿಸಲ್ಪಟ್ಟಿದ್ದಾರೆ. ಭಾರತ ಬಿಟ್ಟರೆ ವೆಸ್ಟ್ ಇಂಡೀಸ್‌ನ ಮೂವರು ಆಟಗಾರರು ಇದ್ದಾರೆ. ವಿಕೆಟ್ ಕೀಪಿಂಗ್ ಜವಾಬ್ದಾರಿಗೆ ಕೆರಿಬಿಯನ್ ಆಟಗಾರ ನಿಕೋಲಸ್ ಪೂರನ್ ಹೆಸರಿಸಲ್ಪಟ್ಟಿದ್ದಾರೆ. ತಂಡದಲ್ಲಿ ರಶೀದ್ ಖಾನ್ ಪ್ರಮುಖ ಸ್ಪಿನ್ನರ್‌ಗಳ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ.

ಮೂಡಿ ನೆಚ್ಚಿನ ಈಗಿನ ಟಿ20ಐ ತಂಡ
1. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ), 2. ರೋಹಿತ್ ಶರ್ಮಾ (ಭಾರತ, ನಾಯಕ), 3. ವಿರಾಟ್ ಕೊಹ್ಲಿ (ಭಾರತ), 4. ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ), 5. ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್, ವಿಕೆಟ್ ಕೀಪರ್, ಎಡಗೈ ಬ್ಯಾಟ್ಸ್‌ಮನ್), 6. ಆ್ಯಂಡ್ರೆ ರಸೆಲ್ (ವೆಸ್ಟ್ ಇಂಡೀಸ್), 7. ಸುನಿಲ್ ನರೇನ್ (ವೆಸ್ಟ್ ಇಂಡೀಸ್), 8. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ), 9. ಜಸ್‌ಪ್ರೀತ್ ಬೂಮ್ರಾ (ಭಾರತ), 10. ಜೋಫ್ರಾ ಆರ್ಚರ್ (ಇಂಗ್ಲೆಂಡ್), 11. ರಶೀದ್ ಖಾನ್ (ಅಫ್ಘಾನಿಸ್ತಾನ್), 12. ರವೀಂದ್ರ ಜಡೇಜಾ (ಭಾರತ, ಬೆಸ್ಟ್ ಫೀಲ್ಡಿಂಗ್‌ಗಾಗಿ).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications