ಆರ್‌ಸಿಬಿಯದ್ದು ಚಾಣಕ್ಷತನದ ಬಿಡ್ಡಿಂಗ್, ಫೈನಲ್ ಪಕ್ಕಾ ಎಂದ ಟಾಮ್ ಮೂಡಿ

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಕೋಚ್ ಟಾಮ್ ಮೂಡಿ ಈ ಬಾರಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಿಡ್ಡಿಂಗ್‌ಗೆ ಬೆಂಬಲ ಸೂಚಿಸಿದ್ದಾರೆ. ಆರ್‌ಸಿಬಿ ಈ ಹರಾಜಿನಲ್ಲಿ ತೆಗೆದುಕೊಂಡ ನಿರ್ಧಾರಗಳು ಅದ್ಭುತವಾಗಿದೆ ಎಂದಿರು ಟಾಮ್ ಮೂಡಿ ಈ ತಂಡದೊಂದಿಗೆ ಆರ್‌ಸಿಬಿ 2023ರ ಐಪಿಎಲ್‌ನ ಫೈನಲ್‌ನಲ್ಲಿ ಆಡುಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆದ ಹರಾಜಿನಲ್ಲಿ ಆರ್‌ಸಿಬಿ 7 ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಿತ್ತು. ಸೋನು ಯಾದವ್, ಅವಿನಾಶ್ ಸಿಂಗ್, ರಜನ್ ಕುಮಾರ್, ಮನೋಜ್ ಭಾಂಡಗೆ, ವಿಲ್ ಜಾಕ್ಸ್ ಹಿಮಾಂಶು ಶರ್ಮಾ ಮತ್ತು ರೀಸ್ ಟೋಪ್ಲೆ ಅವರನ್ನು ಆರ್‌ಸಿಬಿ ಸೇರ್ಪಡೆಗೊಳಿಸಿದೆ. ಈ ಹರಾಜಿಗೆ ಟಾಮ್ ಮೂಡಿ ಆರ್‌ಸಿಬಿ ಫ್ರಾಂಚೈಸಿಗೆ ಮೆಚ್ಚುಗೆ ಸೂಚಿಸಿದ್ದಾರೆ.

ಚಾಣಾಕ್ಷತನದ ನಡೆ ಎಂದ ಮೂಡಿ
"ಈ ಅತ್ಯುತ್ತಮ ಹರಾಜಿನ ಕಾರಣದಿಂದಾಗಿ ನಾನು ಆರ್‌ಸಿಬಿ ತಂಡವನ್ನು ಬಹುಶಃ ಫೈನಲ್‌ನಲ್ಲಿ ನೋಡಬಹುದು ಎಂದು ಭಾವಿಸುತ್ತೇನೆ. ಅವರಲ್ಲಿ ಹೆಚ್ಚಿನ ಮೊತ್ತ ಇರಲಿಲ್ಲ. ಆದರೆ ಅವರು ಬಹಳ ಚಾಣಾಕ್ಷತನದಿಂದ ತಮ್ಮ ಮೊತ್ತವನ್ನು ವ್ಯಯಿಸಿದ್ದಾರೆ" ಎಂದಿದ್ದಾರೆ ಟಾಮ್ ಮೂಡಿ.

ವಿಲ್ ಜಾಕ್ಸ್ ಸೇರ್ಪಡೆ ಅದ್ಭುತ ನಿರ್ಧಾರ
ಇನ್ನು ಈ ಸಂದರ್ಭದಲ್ಲಿ ಟಾಮ್ ಮೂಡಿ ಆರ್‌ಸಿಬಿ ವಿಲ್ ಜಾಕ್ಸ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸುವ ನಿರ್ಧಾರವನ್ನು ಪ್ರಶಂಸಿಸಿದ್ದಾರೆ. ದೀರ್ಘ ಕಾಲದ ದೃಷ್ಟಿಯಿಂದ ಇದು ಅದ್ಭುತವಾದ ನಿರ್ಧಾರ ಎಂದಿರುವ ಮೂಲಕ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಸಮರ್ಥವಾದ ಬದಲಿ ಆಟಗಾರನಾಗಲಿದ್ದಾರೆ ಎಂದು ಕೂಡ ಹೇಳಿದ್ದಾರೆ ಟಾಮ್ ಮೂಡಿ.

ಆರ್‌ಸಿಬಿ ತಂಡದ ಸಂಪೂರ್ಣ ಸ್ಕ್ವಾಡ್ ಹೀಗಿದೆ
ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ರಜತ್ ಪಾಟಿದಾರ್, ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇವಿಡ್ ವಿಲ್ಲಿ, ವನಿಂದು ಹಸರಂಗ, ಶಹಬಾಜ್ ಅಹಮದ್, ಸುಯಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ಸಿದ್ಧಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜೋಶ್ ಹೇಜಲ್‌ವುಡ್, ಕರಣ್ ಶರ್ಮಾ, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ವಿಲ್ ಜಾಕ್ಸ್, ಮನೋಜ್ ಭಾಂಡಗೆ, ರಾಜನ್ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications