Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಮರಳಿದ ಟಾಮ್ ಮೂಡಿ

Tom Moody returns to Sunrisers Hyderabad, this time as Director of Cricket

ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಫ್ರಾಂಚೈಸಿ ಸನ್ ರೈಸರ್ಸ್ ಹೈದರಾಬಾದ್‌, ತನ್ನ ಕ್ರಿಕೆಟ್ ನಿರ್ದೇಶಕ (ಡೈರೆಕ್ಟರ್ ಆಫ್ ಕ್ರಿಕೆಟ್‌) ಆಗಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಮತ್ತು ಮೆಚ್ಚುಗೆಯ ಕೋಚ್ ಟಾಮ್ ಮೂಡಿ ಅವರನ್ನು ಮಂಗಳವಾರ (ಡಿಸೆಂಬರ್ 15) ಹೆಸರಿಸಿದೆ.

ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಮುಖ್ಯ ಕೋಚ್ ಆಗಿ ಸುಮಾರು ಏಳು ಸೀಸನ್‌ಗಳಲ್ಲಿ ಟಾಮ್ ಮೂಡಿ ಮುನ್ನಡೆಸಿದ್ದರು. ಮೂಡಿ ಮುಂದಾಳತ್ವದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 2016ರಲ್ಲಿ ಟ್ರೋಫಿ ಗೆದ್ದಿತ್ತು, 2018ರಲ್ಲಿ ಫೈನಲ್‌ಗೆ ಪ್ರವೇಶಿಸಿತ್ತು.

ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಎಸ್‌ಆರ್‌ಎಚ್ ಈ ವಿಚಾರ ತಿಳಿಸಿದೆ. 'ಇಲ್ಲೊಂದು ಘೋಷಣೆಯಿದೆ, ಸನ್ ರೈಸರ್ಸ್ ಹೈದರಾಬಾದ್‌ನ ಕ್ರಿಕೆಟ್ ನಿರ್ದೇಶಕರಾಗಿ ಟಾಮ್ ಮೂಡಿ ಆಯ್ಕೆಯಾಗಿದ್ದಾರೆ,' ಎಂದು ಟ್ವಿಟರ್‌ನಲ್ಲಿ ಬರೆಯಲಾಗಿದೆ.

ಸನ್ ರೈಸರ್ಸ್ ತಂಡಕ್ಕೆ ಮತ್ತೆ ಬಂದಿರುವುದಕ್ಕೆ ಟಾಮ್ ಮೂಡಿ ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ. 'ಸನ್ ರೈಸರ್ಸ್ ಹೈದರಾಬಾದ್‌ಗೆ ಕೆಲಸ ಮಾಡುವುದು ಒಂದು ಪುಣ್ಯ. ಇಲ್ಲಿ ನಾನು ಸಾಕಷ್ಟು ಸ್ನೇಹಿತರನ್ನು, ಒಳ್ಳೆಯ ನೆನಪುಗಳನ್ನು ಗಳಿಸಿದ್ದೇನೆ,' ಎಂದು ಮೂಡಿ ಬರೆದುಕೊಂಡಿದ್ದಾರೆ.

Story first published: Wednesday, December 16, 2020, 10:20 [IST]
Other articles published on Dec 16, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+