ಮಳೆಗೆ ಸವಾಲು ಹಾಕಿದ ತಜ್ಞ: ಕ್ರಿಕೆಟ್‌ಗೆ ಗಣಿತದ ನಂಟು ಬೆಸೆದ ಲೂಯೀಸ್ ಇನ್ನಿಲ್ಲ

ವಿಶ್ವ ಕ್ರಿಕೆಟ್ ಅಂಗಳದಲ್ಲಿ ಸಾಧನೆ ಮಾಡಿದ ಸಾವಿರಾರು ಜನರು ತಮ್ಮದೇ ಸಾಧನೆಯ ಮೂಲಕ ಖ್ಯಾತಿಗಳಿಸಿದ್ದಾರೆ. ಅಂಗಳದ ಒಳಗೆ ಮಾಡಿದ ದಾಖಲೆಗಳು ಕ್ರಿಕೆಟ್ ದಾಖಲೆ ಪುಸ್ತಕದ ದಲ್ಲಿ ಯಾವಾಗಲು ಅಚ್ಚಾಗಿರುತ್ತದೆ. ಆದರೆ ವಿಶ್ವ ಕ್ರಿಕೆಟ್‌ಗೆ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಿದ ಗಣಿತ ತಜ್ಞ ಲೂಯಿಸ್ ಇಂದು ತಮ್ಮ 78ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಮಳೆಯಿಂದಾಗಿ ಪಂದ್ಯಗಳು ಮೊಟಕುಗೊಂಡ ಸಂದರ್ಭದಲ್ಲಿ ಪಂದ್ಯದ ಓವರ್‌ಗಳನ್ನು ಕಡಿತ ಮಾಡಿ ಆಡಲಾಗುತ್ತದೆ. ಇದಕ್ಕೆ ಆದರೆ ಈ ಸಂರ್ದರ್ಭದಲ್ಲಿ ಎದುರಾಳಿಗೆ ನೀಡುವ ಗುರಿ ವೈಜ್ಞಾನಿಕವಾಗಿರಬೇಕು. ಇದ್ದಕ್ಕೆ ಕೊಡುಗೆ ನೀಡಿದ ಮಹನೀಯರೇ ಟೋನಿ ಲೂಯಿಸ್ ಮತ್ತು ಫ್ರಾಂಕ್ ಡಕ್‌ವರ್ತ್.
ಇಬ್ಬರು ಗಣಿತ ಶಾಸ್ತ್ರಜ್ಞರು ಸೇರಿ ಹವಾಮಾನದ ಕಾರಣದಿಂದಾಗಿ ಅಡ್ಡಿಯಾದ ಪಂದ್ಯಗಳಲ್ಲಿ ಗುರಿಯನ್ನು ಲೆಕ್ಕಾಚಾರ ಮಾಡಲು ಹೊಸ ಸೂತ್ರವನ್ನು ನೀಡಿದರು. ಇದು ವಿಶ್ವ ಕ್ರಿಕೆಟ್ ಮಂಡಳಿಗೂ ಒಪ್ಪಿಗೆಯಾಗಿ 1999ರಿಂದ ಈ ಸೂತ್ರವನ್ನು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅಳವಡಿಸಿಕೊಳ್ಳಾಗಿದೆ.
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್(ಇಸಿಬಿ) ಈ ಬಗ್ಗೆ ಬುಧವಾರ ಅಧಿಕರತ ಮಾಹಿತಿಯನ್ನು ನೀಡಿದ್ದು ಲೂಯಿಸ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದೆ. ಮತ್ತು ಕ್ರಿಕೆಟ್‌ಗೆ ನೀಡಿದ ಕೊಡುಗೆಯನ್ನು ಇಸಿಬಿ ಈ ಸಂದರ್ಭದಲ್ಲಿ ಸ್ಮರಿಸಿಕೊಂಡಿದೆ.
ಈ ಸೂತ್ರದಲ್ಲಿನ ಸಂಕೀರ್ಣತೆಯಿಂದಾಗಿ ಮತ್ತಷ್ಟು ಸರಳಗೊಳಿಸಲು ನಿರ್ಧರಿಸಲಾಯಿತು. 2014ರಲ್ಲಿ ಆಸ್ಟ್ರೇಲಿಯಾದ ಸ್ಟೀವರ್ನ್ ಸ್ಟರ್ನ್ ಅವರ ಸೂತ್ರವನ್ನು ಡಕ್ವರ್ತ್ ಲೂಯಿಸ್ ನಿಯಮದೊಂದಿಗೆ ಸೇರಿಸಿ ಸರಳಗೊಳಿಸಲಾಯಿತು. 2014ರ ಬಳಿಕ ಡಕ್ವರ್ತ್-ಲೂಯೀಸ್- ಸ್ಟರ್ನ್ ನಿಯಮ ಎಂದು ಈ ಸೂತ್ರವನ್ನು ಮರುನಾಮಕರಣ ಮಾಡಲಾಗಿದ್ದು ಇದರ ಪ್ರಕಾರವೇ ಹವಾಮಾನ ವೈಪರಿತ್ಯದ ಕಾರಣಕ್ಕೆ ಪಂದ್ಯಗಳ ಓವರ್ ಕಡಿತಗೊಳ್ಳುವ ಸಂದರ್ಭದಲ್ಲಿ ಗುರಿಯನ್ನು ನಿಗದು ಪಡಿಸಲಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications