For Quick Alerts
ALLOW NOTIFICATIONS  
For Daily Alerts
 

ಭಾರತದ ವಿರುದ್ಧ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಬಾರಿಸಿದ ಟಾಪ್- 10 ಬ್ಯಾಟರ್ಸ್‌

ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಮೆಲ್ಬೋರ್ನ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ನಾಲ್ಕನೇ ಟೆಸ್ಟ್‌ನಲ್ಲಿ ಭಾರತ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಅನುಭವಿ ಬ್ಯಾಟರ್ ಸ್ಟೀವ್ ಸ್ಮಿತ್ ತಮ್ಮ ವೃತ್ತಿಜೀವನದ 34ನೇ ಟೆಸ್ಟ್ ಶತಕವನ್ನು ಗಳಿಸಿದರು. ಇದರೊಂದಿಗೆ, ಅವರು ತಮ್ಮ ಹೆಸರಿನಲ್ಲಿ ದಾಖಲೆಯನ್ನು ಮಾಡಿದರು. ಅವರು ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆ ಪಾತ್ರರಾಗಿದರು.

ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ಸ್ಮಿತ್ ಅವರು ಗಳಿಸಿದ ಶತಕವು ಭಾರತದ ವಿರುದ್ಧ ಅವರ 11ನೇ ಶತಕವಾಗಿತ್ತು. ಇದು ಸ್ವತಃ ದಾಖಲೆಯಾಗಿತ್ತು. ಭಾರತದ ವಿರುದ್ಧ ಅವರ 11 ಶತಕಗಳು ಟೆಸ್ಟ್ ಕ್ರಿಕೆಟ್ ನಲ್ಲಿ ಯಾವುದೇ ಆಟಗಾರನಿಂದ ಅತಿ ಹೆಚ್ಚು ಶತಕಗಳಾಗಿವೆ. ಈ ಮೂಲಕ ಸ್ಮಿತ್ ಟೀಮ್ ಇಂಡಿಯಾ ವಿರುದ್ಧ 10 ಟೆಸ್ಟ್ ಶತಕಗಳನ್ನು ಗಳಿಸಿರುವ ಇಂಗ್ಲೆಂಡ್‌ನ ಜೋ ರೂಟ್ ಅವರನ್ನು ಹಿಂದಿಕ್ಕಿದ್ದರು. ಇದೀಗ ಟೀಮ್ ಇಂಡಿಯಾ ವಿರುದ್ಧ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಬಾರಿಸಿದ ಟಾಪ್- 10 ಬ್ಯಾಟರ್ಸ್‌ ಬಗ್ಗೆ ಇಲ್ಲಿದೆ ಮಾಹಿತಿ.

Top 10 batsmen with most Test cricket centuries against India

ಟಾಪ್- 10 ಬ್ಯಾಟರ್ಸ್‌

ಸ್ಟೀವ್ ಸ್ಮಿತ್: ಆಸ್ಟ್ರೇಲಿಯಾದ ಬಲಗೈ ಅನುಭವಿ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಭಾರತದ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಗಳಿಸಿದ್ದಾರೆ. ಅವರು 23 ಪಂದ್ಯಗಳ 44 ಇನ್ನಿಂಗ್ಸ್‌ಗಳಲ್ಲಿ 11 ಶತಕಗಳನ್ನು ಹೊಂದಿದ್ದಾರೆ.

ಜೋ ರೂಟ್: ಇಂಗ್ಲೆಂಡ್‌ನ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟರ್ ಜೋ ರೂಟ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಭಾರತದ ವಿರುದ್ಧ 30 ಟೆಸ್ಟ್ ಪಂದ್ಯಗಳ 55 ಇನ್ನಿಂಗ್ಸ್‌ಗಳಲ್ಲಿ 10 ಶತಕಗಳನ್ನು ಗಳಿಸಿದ್ದಾರೆ.

ಸರ್ ಗ್ಯಾರಿ ಸೋಬರ್ಸ್: ವೆಸ್ಟ್ ಇಂಡೀಸ್ ಬ್ಯಾಟರ್ ಸರ್ ಗ್ಯಾರಿ ಸೋಬರ್ಸ್ ಭಾರತದ ವಿರುದ್ಧ 18 ಟೆಸ್ಟ್ ಪಂದ್ಯಗಳ 30 ಇನ್ನಿಂಗ್ಸ್‌ಗಳಲ್ಲಿ 8 ಶತಕಗಳನ್ನು ಗಳಿಸಿದ್ದು, ಮೂರನೇ ಸ್ಥಾನದಲ್ಲಿದ್ದಾರೆ.

ವಿವಿಯನ್ ರಿಚರ್ಡ್ಸ್: ಮಾಜಿ ವೆಸ್ಟ್ ಇಂಡೀಸ್ ಕ್ರಿಕೆಟಿಗ ವಿವ್ ರಿಚರ್ಡ್ಸ್ ಭಾರತ ವಿರುದ್ಧ 28 ಟೆಸ್ಟ್ ಪಂದ್ಯಗಳ 41 ಇನ್ನಿಂಗ್ಸ್‌ಗಳಲ್ಲಿ 8 ಶತಕಗಳನ್ನು ಬಾರಿಸುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದಾರೆ.

ರಿಕಿ ಪಾಂಟಿಂಗ್: ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಈ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದ್ದಾರೆ. ಪಾಂಟಿಂಗ್ ಅವರು ಭಾರತದ ವಿರುದ್ಧ 29 ಟೆಸ್ಟ್ ಪಂದ್ಯಗಳ 41 ಇನ್ನಿಂಗ್ಸ್‌ಗಳಲ್ಲಿ 8 ಶತಕಗಳನ್ನು ಸಿಡಿಸಿದ್ದಾರೆ.

ಎವರ್ಟನ್ ವಿಕ್ಸ್: ವೆಸ್ಟ್ ಇಂಡೀಸ್‌ನ ಮಾಜಿ ಬ್ಯಾಟರ್ ಎವರ್ಟನ್ ವಿಕ್ಸ್ ಭಾರತದ ವಿರುದ್ಧ 10 ಟೆಸ್ಟ್ ಪಂದ್ಯಗಳ 15 ಇನ್ನಿಂಗ್ಸ್ ಗಳಲ್ಲಿ 7 ಶತಕ ಗಳಿಸಿದ್ದಾರೆ. ಈ ಮೂಲಕ ಅವರ 6ನೇ ಸ್ಥಾನದಲ್ಲಿದ್ದಾರೆ.

ಜಾಕ್ವೆಸ್ ಕಾಲಿಸ್: ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಜಾಕ್ವೆಸ್ ಕಾಲಿಸ್ ಅವರು ಭಾರತದ ವಿರುದ್ಧ 18 ಪಂದ್ಯಗಳ 31 ಇನ್ನಿಂಗ್ಸ್‌ಗಳಲ್ಲಿ 7 ಶತಕಗಳನ್ನು ಹೊಂದಿದ್ದಾರೆ.

ಮೈಕಲ್ ಕ್ಲಾರ್ಕ್: ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಭಾರತದ ವಿರುದ್ಧ 22 ಪಂದ್ಯಗಳ 40 ಇನ್ನಿಂಗ್ಸ್‌ಗಳಲ್ಲಿ 7 ಶತಕಗಳನ್ನು ಗಳಿಸಿದ್ದು, 8ನೇ ಸ್ಥಾನದಲ್ಲಿದ್ದಾರೆ.

ಶಿವನಾರಾಯಣ್ ಚಂದ್ರಪಾಲ್: ಮಾಜಿ ಎಡಗೈ ವೆಸ್ಟ್ ಇಂಡೀಸ್ ಕ್ರಿಕೆಟಿಗ ಶಿವನಾರಾಯಣ್ ಚಂದ್ರಪಾಲ್ ಭಾರತದ ವಿರುದ್ಧ 25 ಪಂದ್ಯಗಳ 44 ಇನ್ನಿಂಗ್ಸ್‌ಗಳಲ್ಲಿ 7 ಶತಕಗಳನ್ನು ಬಾರಿಸಿದ್ದಾರೆ.

ಕ್ಲೈವ್ ಲಾಯ್ಡ್: ವೆಸ್ಟ್ ಇಂಡೀಸ್‌ನ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಕ್ಲೈವ್ ಲಾಯ್ಡ್, ಭಾರತದ ವಿರುದ್ಧ 28 ಪಂದ್ಯಗಳ 44 ಇನ್ನಿಂಗ್ಸ್‌ಗಳಲ್ಲಿ 7 ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. ಕ್ಲೈವ್ ಲಾಯ್ಡ್ ಟೆಸ್ಟ್ ಕ್ರಿಕೆಟ್ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ.

Story first published: Wednesday, January 1, 2025, 7:30 [IST]
Other articles published on Jan 1, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+