IPL 2025: ಐಪಿಎಲ್ ಇತಿಹಾಸದಲ್ಲಿ ಟಾಪ್ 10 ಅತ್ಯುತ್ತಮ ಬೌಲಿಂಗ್ ಪ್ರದರ್ಶನಗಳ ವಿವರ..
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಾಮಾನ್ಯವಾಗಿ ಬ್ಯಾಟರ್ಸ್‌ಗೆ ಹೇಳಿ ಮಾಡಿಸಿರುವ ಟೂರ್ನಿಯಾಗಿದೆ. ಆದರೆ ಕೆಲವು ಬೌಲರ್ಸ್ ಪಂದ್ಯಗಳನ್ನು ತಲೆಕೆಳಗಾಗಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆಯುವುದು ಅಪರೂಪ, ಆದರೆ ಈ ಬೌಲರ್‌ಗಳು ಒಂದು ಹೆಜ್ಜೆ ಮುಂದೆ ಹೋಗಿ, ಐಪಿಎಲ್ ಇತಿಹಾಸದಲ್ಲಿ ಕೆಲವು ಅತ್ಯುತ್ತಮ ವೈಯಕ್ತಿಕ ಬೌಲಿಂಗ್ ಪ್ರದರ್ಶನಗಳನ್ನು ನೀಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಬೌಲರ್‌ಗಳು ಪ್ರಾಬಲ್ಯ ಸಾಧಿಸುತ್ತಿದ್ದಾರೆ ಎಂಬುದಕ್ಕೆ ಇದು ಒಂದು ಉದಾಹರಣೆ.
ಐಪಿಎಲ್ 2008 ರಿಂದ 2024 ರವರೆಗೆ ಕೆಲವು ಬೌಲರ್ಸ್ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಇದುವರೆಗೆ ಐಪಿಎಲ್ ಇತಿಹಾಸದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿರುವ ಟಾಪ್-10 ಬೌಲರ್ಸ್ ಬಗ್ಗೆ ಇಲ್ಲಿದ ಮಾಹಿತಿ.

ವೆಸ್ಟ್ ಇಂಡೀಸ್ ವೇಗದ ಬೌಲರ್ ಅಲ್ಜಾರಿ ಜೋಸೆಫ್ 2019 ರಲ್ಲಿ ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಸನ್‌ರೈಸರ್ಸ್ ಹೈದರಾಬಾದ್ ತಂಡ ವಿರುದ್ಧದ ಪಂದ್ಯದಲ್ಲಿ ಅಲ್ಜಾರಿ ಜೋಸೆಫ್ ಕೇವಲ 12 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಬಳಿಸಿದರು. ಈ ಮೂಲಕ ಅವರು ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳ ದಾಖಲೆಯನ್ನು ಮಾಡಿದರು.
ಐಪಿಎಲ್ 2008ರ ಉದ್ಘಾಟನಾ ಸೀಸನ್‌ನಲ್ಲಿ ಪಾಕಿಸ್ತಾನದ ಎಡಗೈ ವೇಗದ ಬೌಲರ್ ಸೊಹೈಲ್ ತನ್ವೀರ್ ರಾಜಸ್ಥಾನ ಪರ ಆಡಿದ್ದರು. ಈ ಸೀಸನ್‌ನಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದರಯ. ಅವರ 14 ರನ್‌ಗಳಿಗೆ 6 ವಿಕೆಟ್ ಪಡೆದಿರುವುದು ಐಪಿಎಲ್ ಇತಿಹಾಸದಲ್ಲಿ ಮತ್ತೊಂದು ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.
ಟಾಪ್ 10 ಅತ್ಯುತ್ತಮ ಬೌಲಿಂಗ್ ಪ್ರದರ್ಶನಗಳು
ಅಲ್ಜಾರಿ ಜೋಸೆಫ್- 6/12 (ಎಂಐ vs ಎಸ್‌ಆರ್‌ಹೆಚ್ 2019)
ಓವರ್‌ಗಳು: 3.4
ಮೇಡನ್ಸ್: 1ಎಕಾನಮಿ: 3.27
ಸ್ಥಳ: ಹೈದರಾಬಾದ್
ಸೊಹೈಲ್ ತನ್ವಿರ್ - 6/14 (ಆರ್‌ಆರ್ vs ಸಿಎಸ್‌ಕೆ, 2008)
ಓವರ್‌ಗಳು: 4
ಮೇಡನ್ಸ್: 0
ಎಕಾನಮಿ: 3.50
ಸ್ಥಳ: ಜೈಪುರ
ಆಡಮ್ ಝಂಪಾ - 6/19 (ಆರ್‌ಪಿಎಸ್ vs ಎಸ್‌ಆರ್‌ಹೆಚ್, 2016)
ಓವರ್‌ಗಳು: 4
ಮೇಡನ್ಸ್: 0
ಎಕಾನಮಿ: 4.75
ಸ್ಥಳ: ವಿಶಾಖಪಟ್ಟಣಂ
ಅನಿಲ್ ಕುಂಬ್ಳೆ - 5/5 (ಆರ್‌ಸಿಬಿ vs ಆರ್‌ಆರ್, 2009)
ಓವರ್‌ಗಳು: 3.1
ಮೇಡನ್ಸ್: 1
ಎಕಾನಮಿ: 1.57
ಸ್ಥಳ: ಕೇಪ್ ಟೌನ್
ಆಕಾಶ್ ಮಧ್ವಾಲ್ - 5/5 (ಎಂಐ vs ಎಲ್‌ಎಸ್‌ಜಿ, 2023)
ಓವರ್‌ಗಳು: 3.3
ಮೇಡನ್ಸ್: 0
ಎಕಾನಮಿ: 1.42
ಸ್ಥಳ: ಚೆನ್ನೈ
ಜಸ್ಪ್ರೀತ್ ಬುಮ್ರಾ - 5/10 (ಎಂಐ vs ಕೆಕೆಆರ್, 2022)
ಓವರ್‌ಗಳು: 4
ಮೇಡನ್ಸ್: 1
ಎಕಾನಮಿ: 2.50
ಸ್ಥಳ: ಡಿವೈ ಪಾಟೀಲ್ ಕ್ರೀಡಾಂಗಣ
ಮೋಹಿತ್ ಶರ್ಮಾ - 5/10 (ಜಿಟಿ vs ಎಂಐ, 2023)
ಓವರ್‌ಗಳು: 2.2
ಮೇಡನ್ಸ್: 0
ಎಕಾನಮಿ: 4.28
ಸ್ಥಳ: ಅಹಮದಾಬಾದ್
ಇಶಾಂತ್ ಶರ್ಮಾ - 5/12 (ಡಿಸಿ vs ಕೊಚ್ಚಿ, 2011)
ಓವರ್‌ಗಳು: 3
ಮೇಡನ್ಸ್: 0
ಎಕಾನಮಿ: 4.00
ಸ್ಥಳ: ಕೊಚ್ಚಿ
ಲಸಿತ್ ಮಾಲಿಂಗ - 5/13 (ಎಂಐ vs ಡಿಡಿ, 2011)
ಓವರ್‌ಗಳು: 3.4
ಮೇಡನ್ಸ್: 1
ಎಕಾನಮಿ: 3.54
ಸ್ಥಳ: ದೆಹಲಿ
ಅಂಕಿತ್ ರಾಜ್‌ಪೂತ್ - 5/14 (ಪಿಬಿಕೆಎಸ್ vs ಎಸ್‌ಆರ್‌ಹೆಚ್, 2018)
ಓವರ್‌ಗಳು: 4
ಮೇಡನ್ಸ್: 0
ಎಕಾನಮಿ: 3.50
ಸ್ಥಳ: ಹೈದರಾಬಾದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications